ಅಪ್ಪಿ ತಪ್ಪಿ ಬೇರೆ ಪಕ್ಷಕ್ಕೆ ಹಾಕುಬೇಡ; ಧರ್ಮಪತ್ನಿಗೆ ವಾರ್ನಿಂಗ್ ಕೊಟ್ಟ ಕುಮಾರಣ್ಣ;

 | 
Gui

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರದಲ್ಲಿ ಇಂದು ಭರ್ಜರಿ ಮತದಾನ ನಡೆದಿದೆ. ಮತದಾರರು ತಮ್ಮ ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗೆ ಬಂದು ವೋಟ್​ ಹಾಕಿದ್ದಾರೆ. ಜೊತೆಗೆ ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಕೇತಗಾನಹಳ್ಳಿ ಗ್ರಾಮದ ಸಖೀ ಮತಗಟ್ಟೆಗೆ ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬ ಸಮೇತವಾಗಿ ಮತದಾನ ಮಾಡಿದೆ.

ಆದರೆ ಇದೇ ವೇಳೆ ಪರಸ್ಪರ ಒಬ್ಬರಿಗೊಬ್ಬರು ಕಣ್ಣು, ಕೈಗಳಲ್ಲೇ ಸನ್ನೆ ಮಾಡುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ದಂಪತಿ ಇಂದು ಮತ್ತೊಮ್ಮೆ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಹೌದು, ಬಿಡದಿಯ ಕೇತಗಾನಗಳ್ಳಿಯಲ್ಲಿ ಕುಮಾರಸ್ವಾಮಿ ದಂಪತಿ, ಪುತ್ರ ಹಾಗೂ ಸೊಸೆ ಜೊತೆ ಆಗಮಿಸಿ ಮತದಾನ ಮಾಡಿದ್ದಾರೆ.

ಇದೇ ಸಮಯದಲ್ಲಿ ಮತದಾನ ಮಾಡುತ್ತಿದ್ದ ವೇಳೆ ಕುಮಾರಸ್ವಾಮಿ ಅವರು ಪತ್ನಿ ಅನಿತಾಗೆ ಸನ್ನೆ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ವೋಟ್ ಮಾಡಿ ಹೊರಬಂದ ಹೆಚ್​.ಡಿ ಕುಮಾರಸ್ವಾಮಿ ಪತ್ನಿ ಬಳಿ ಬಂದು ತೋರು ಬೆರಳು ತೋರಿಸಿ ಸನ್ನೆ ಮಾಡ್ತಾರೆ. ಬಳಿಕ ಅನಿತಾ, ಮತ್ತದೇ ರೀತಿ ಕೋಪದ ಲುಕ್​ನಲ್ಲಿ ಸನ್ನೆ ಮಾಡುತ್ತಾ ಕನ್ಫರ್ಮ್ ಮಾಡಿಕೊಳ್ತಾರೆ. 

ಇವರಿಬ್ಬರ ಈ ಸನ್ನೆ ಭಾಷೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು, ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಒಟ್ಟಿನಲ್ಲಿ ಕುಟುಂಬ ಸಮೇತ ಬಂದು ತಮ್ಮ ಹಕ್ಕು ಚಲಾಯಿಸಿದ ಹೆಚ್​.ಡಿ ಕುಮಾರಸ್ವಾಮಿ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.