ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್, ಚೈತ್ರ ಹಾಗೂ ಐಶ್ವರ್ಯ ಮನೆಯಿಂದ ಔಟ್
Dec 29, 2024, 13:18 IST
|
ಬಿಗ್ ಬಾಸ್ ಮನೆಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ನಡೆದಿದೆ ಎನ್ನಲಾಗಿದೆ. ಚೈತ್ರ ಹಾಗೂ ಐಶ್ವರ್ಯ ಅವರಿಗೆ ವೀಕ್ಷಕರ ಮತ ತುಂಬಾ ಕಡಿಮೆ ಬಿದ್ದಿರುವ ಕಾರಣಕ್ಕೆ ಈ ಇಬ್ಬರನ್ನು ಮನೆಯಿಂದ ಹೊರಹಾಕಲಾಗಿದೆ.
ಇನ್ನು ಚೈತ್ರ ಅವರು ಬಿಗ್ ಬಾಸ್ ಮನೆಯಲ್ಲಿ ಇತ್ತಿಚೆಗೆ ಬಹಳಷ್ಟು ಬೊಬ್ಬೆ ಹಾಕಿಕೊಂಡು ಮಾತನಾಡಿದ್ದಾರೆ. ಹಾಗಾಗಿ ಬಿಗ್ ಬಾಸ್ ವೀಕ್ಷಕರಿಗೆ ಚೈತ್ರ ಅವರ ವರ್ತನೆ ಅಷ್ಟೊಂದು ಇಷ್ಟವಾಗಿರಲಿಲ್ಲ. ಇನ್ನು ಐಶ್ವರ್ಯ ಅವರು ಕೂಡ ಮಾತಿನಲ್ಲಿ ಜಾಣೆ ಆದರೆ ಆಟದಲ್ಲಿ ಕಾಣೆಯಾಗುತ್ತಾರೆ.
ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯಿಂದ ಚೈತ್ರ ಹಾಗೂ ಐಶ್ವರ್ಯ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಕೊಟ್ಟಿದೆ. ಇನ್ನು ಕಿಚ್ಚನ ವೇದಿಕೆಯಲ್ಲಿ ಈ ಇಬ್ಬರ ಬಿಗ್ ಬಾಸ್ ಜರ್ನಿ ಬಗ್ಗೆ ಚರ್ಚೆ ಮಾಡಲಾಗಿದೆ.