ಡಾ| ರಾಜ್ ಸಮಾಧಿ ಮುಂದೆ ' ಅಪ್ಪಾಜಿ ಅಪ್ಪಾಜಿ' ಎಂದು ಕಣ್ಣೀರಿಟ್ಟ ‌ಬಿಗ್ ಬಾಸ್ ಪ್ರತಾಪ್

 | 
H

ಬಿಗ್‌ ಬಾಸ್‌ ಕನ್ನಡ ಸೀಜನ್‌ 10 ಮುಗಿದು ಎರಡು ವಾರ ಕಳೆಯುತ್ತಾ ಬಂದರೂ, ಈ ಬಾರಿ ಸ್ಥರ್ಧಿಗಳ ಹವಾ ಮಾತ್ರ ಕಡಿಮೆಯಾಗುತ್ತಿಲ್ಲ. ಜನರು ಕೂಡ ಬಿಗ್‌ ಬಾಸ್‌ ಸ್ಪರ್ಧಿಗಳ ಗುಂಗಿನಿಂದ ಹೊರ ಬಂದಿಲ್ಲ. ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಸ್ಪರ್ಧಿಗಳಿಗೆ ಅಭಿಮಾನ ತೋರಿಸುತ್ತಿದ್ದಾರೆ. ಹೀಗಾಗಿ ಈ ಬಾರಿಯ ಬಿಗ್‌ ಬಾಸ್‌ ಸ್ಪರ್ಧಿಗಳು ಸಖತ್‌ ಹೈಪ್ ಕ್ರಿಯೆಟ್‌ ಮಾಡಿದ್ದು, ಕಳೆದರೆಡು ವಾರದಿಂದ ನಿರಂತವಾಗಿ ಸುದ್ದಿಯಲ್ಲಿದ್ದಾರೆ.

ಈ ಬಾರಿಯ ಬಿಗ್‌ ಬಾಸ್‌ ಮನೆಯ ನಿಜವಾದ ಅವಕಾಶವನ್ನು ಬಳಸಿಕೊಂಡವರು ಯಾರು ಎಂದು ಪ್ರಶ್ನಿಸಿದರೆ, ಎಲ್ಲರ ಬಾಯಲ್ಲೂ ಬರುವ ಏಕೈಕ ಉತ್ತರ ಅದು ಡ್ರೋನ್‌ ಪ್ರತಾಪ್‌. ಹಲವರ ಅಸಮಾಧಾನದ ನಡುವೆ ಬಿಗ್‌ ಬಾಸ್‌ ಮನೆಗೆ ಹೋಗಿದ್ದ ಡ್ರೋನ್‌ ಪ್ರತಾಪ್‌, ಮನೆಯಿಂದ ಹೊರ ಬರುವಾಗ ಕೋಟ್ಯಂತರ ಜನರ ಮನಸ್ಸು ಗೆದ್ದಿದ್ದರು. ಅದರ ಫಲ ಶ್ರುತಿ ಡ್ರೋನ್‌ ಪ್ರತಾಪ್‌ ಬಿಗ್‌ ಬಾಸ್‌ ಕನ್ನಡ ಸೀಜನ್‌ 10 ರ ರನ್ನರ್‌ ಅಪ್‌ ಆಗಿ ಹೊರ ಹೊಮ್ಮಿದರು.

ಈ ಬಾರಿಯ ಬಿಗ್‌ ಬಾಸ್‌ ಡ್ರೋನ್‌ ಪ್ರತಾಪ್‌ ಗೆಲ್ಲಬೇಕು ಎಂದು ಎರಡು ಕೋಟಿಗೂ ಅಧಿಕ ಜನ ವೋಟ್‌ ಮಾಡಿದ್ದರು. ಪ್ರತಾಪ್‌ ರನ್ನರ್‌ ಅಪ್‌ ಆದರೂ ಕೂಡ ಜನರ ಪ್ರೀತಿ ಮತ್ತಷ್ಟು ಹೆಚ್ಚಾಗಿದ್ದು, ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಮೇಲೆ ತಮ್ಮದೇ ಆದ ರೀತಿಯಲ್ಲಿ ಅಭಿಮಾನ ತೋರಿಸುತ್ತಿದ್ದಾರೆ. ಡ್ರೋನ್‌ ಪ್ರತಾಪ್‌ ಮನೆಗೆ ಪ್ರತಿ ನಿತ್ಯ ಅಭಿಮಾನಿಗಳು ಭೇಟಿ ನೀಡುತ್ತಿದ್ದು, ಅವರ ಖುಷಿಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.

ಅಷ್ಟೇ ಅಲ್ಲ ಇದೀಗ ಅಪ್ಪು ಹಾಗೂ ರಾಜಕುಮಾರ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಭಿಮಾನಿಗಳ ಆಸೆಯಂತೆ ಆಟೋ ಓಡಿಸಿದ್ದಾರೆ. ಇನ್ನು ಡ್ರೋನ್‌ ಪ್ರತಾಪ್‌ ವಿಡಿಯೋಗೆ ಅಭಿಮಾನಿಯೊಬ್ಬರು ನಮ್ಮನೆ ದೇವ್ರು ಬಾಸ್ ನೀವು ಎಂದು ಕಮೆಂಟ್‌ ಮಾಡಿದ್ದು, ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ, ಜೈ ಪ್ರತಾಪ್‌ ಎಂದು ಕಮೆಂಟ್‌ ಮಾಡಿದ್ದಾರೆ.