ಡಾ | ರಾಜ್ಕುಮಾರ್ ಲೀಲಾವತಿ ನಡುವಿನ ಸಂಬಂಧದ ಬಗ್ಗೆ ಸ್ಪೋ.ಟಕ ಸತ್ಯ ಹೊರಹಾಕಿದ ಬ್ರಹ್ಮಾಂಡ ಗುರೂಜಿ

 | 
Hd

ಯಾವಾಗಲೂ ಏನಾದರೊಂದು ಮಾತಾಡಿ ಜನರ ಕೆಂಗಣ್ಣಿಗೆ ಗುರಿಯಾಗುವ ಬ್ರಹ್ಮಾಂಡ ಗುರೂಜಿ ಇದೀಗ ದಿವಂಗತ ನಟಿ ಲೀಲಾವತಿ ಅವರ ಕುರಿತಾಗಿ ಹೇಳಿಕೆ ನೀಡಿದ್ದಾರೆ.ಕನ್ನಡ ಸಿನಿರಂಗದ ಹಿರಿಯ ನಟಿ ಲೀಲಾವತಿ ಇತ್ತೀಚೆಗೆ ಇಹಲೋಕ ತ್ಯಜಿಸಿದ್ದಾರೆ. ಆದರೆ ಅವರ ಅಗಲಿಕೆಯ ನೋವು ಇಂದಿಗೂ ಕಾಡುತ್ತಿದೆ. 

ಸಿನಿಮಾಗಳು ಮಾತ್ರವಲ್ಲದೆ, ಸಮಾಜಸೇವೆಯಿಂದಲೂ ಮನೆಮಾತಾಗಿದ್ದ ಲೀಲಾವತಿ ಅವರ ಬಗ್ಗೆ ಬಿಗ್ ಬಾಸ್ ಖ್ಯಾತಿಯ ಬ್ರಹ್ಮಾಂಡ ಗುರೂಜಿ ಮಾತನಾಡಿದ್ದಾರೆ.
ಲೀಲಾವತಿಯವರೊಂದಿಗೆ ಕಳೆದ ಸವಿ ನೆನಪುಗಳನ್ನು ಮೆಲುಕು ಹಾಕಿದ ಬ್ರಹ್ಮಾಂಡ ಗುರೂಜಿ, ಬೆಡ್‌ ರೂಂನಲ್ಲಿ ರಾಜ್‌ಕುಮಾರ್‌’ಗೆ ಊಟ ಮಾಡಿಸುತ್ತಿರುವ ಫೋಟೋ ಒಂದನ್ನು ತೋರಿಸಿದ್ರು. ಅದೆಷ್ಟು ಚೆನ್ನಾಗಿದೆ ಗೊತ್ತಾ? ಎಂದು ಹೇಳಿದ್ದಾರೆ. 

ಲೀಲಾವತಿಯವರು ಕಟ್ಟಿಸಿದ ಹೊಸ ಮನೆಗೆ ಬ್ರಹ್ಮಾಂಡ ಗುರೂಜಿ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ವಿಚಾರಗಳನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಮನುಷ್ಯನಿಗೆ ಮನುಷತ್ವ ಮುಖ್ಯ, ಲೀಲಾವತಿಯವರಿಗೆ ಆತ್ಮೀಯತೆ ಹೆಚ್ಚು. ಪ್ರೀತಿ ವಾತ್ಸಲ್ಯ ಜಾಸ್ತಿ ಇರಬೇಕು ಅಂತಿದ್ದರು. ಇದೇ ಕಾರಣಕ್ಕೆ ಮಗನನ್ನು ಹೆಚ್ಚಾಗಿ ಜೊತೆಯಲ್ಲೇ ಇರಿಸಿಕೊಂಡಿದ್ದರು. ಅವನನ್ನು ಸ್ವಲ್ಪ ಫ್ರೀ ಆಗಿ ಬಿಟ್ಟಿದ್ದರೆ, ಧೈರ್ಯವಾಗಿರುತ್ತಿದ್ದನೋ ಏನೋ? ಆದರೆ ಏನಾಗಿದೆ… ವಿನೋದ್‌’ಗೆ ಧೈರ್ಯವಿಲ್ಲ ಎಂದಿದ್ದಾರೆ.

ಹೊಸ ಮನೆ ಕಟ್ಟಿಸಿದ ಮೇಲೆ ಅಲ್ಲಿಗೆ ಹೋಗಿದ್ದಾಗ ಅವಾರ್ಡ್‌ಗಳನ್ನು ತೋರಿಸಿದ್ರು. ಅದೇ ವೇಳೆ ಬೆಡ್‌ ರೂಂನಲ್ಲಿದ್ದ ರಾಜ್‌ಕುಮಾರ್‌ಗೆ ಊಟ ಮಾಡಿಸುವ ಫೋಟೋ ತೋರಿಸಿದರು. ಎಷ್ಟು ಚೆನ್ನಾಗಿದೆ ನೀವೇನಾದರೂ ನೋಡಿದ್ರೆ ರಾಜ್‌ ಕುಮಾರ್ ಅವರನ್ನು ಲೀಲಾವತಿ ಎಷ್ಟು ಪ್ರೀತಿ ಮಾಡುತ್ತಿದ್ರು ಎಂಬುದು ಗೊತ್ತಾಗುತ್ತೆ ಎಂದಿದ್ದಾರೆ.

ಈ ಸಂದರ್ಶನದ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಜನರು ಮಾತ್ರ ಇದೊಂದು ಹೇಳೋಕೆ ಬಾಕಿ ಇತ್ತು ಎಂದು ಕೆಂಗಣ್ಣು ಬೀರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.