ಸತತ ಒಂದು ತಿಂಗಳಿನಿಂದ ಡಾ ಬ್ರೋ ನಾಪತ್ತೆ, ಕುಟುಂಬಸ್ಥರಲ್ಲಿ ಹೆಚ್ಚಾದ ಆತಂಕ

 | 
Hgg

ಜಗತ್ತಿನ ಹಲವಾರು ದೇಶಗಳನ್ನು ಸುತ್ತಿ ಅಲ್ಲಿಯ ಕುತೂಹಲದ ಮಾಹಿತಿಗಳನ್ನು ಶೇರ್‌ ಮಾಡಿಕೊಳ್ಳುವ ಕನ್ನಡದ ಪ್ರಸಿದ್ಧ ಯೂಟ್ಯೂಬರ್‌ ಡಾ.ಬ್ರೋ ಖ್ಯಾತಿಯ ಗಗನ್  ಶ್ರೀನಿವಾಸ್ ಕಳೆದ ಒಂದು ತಿಂಗಳಿಂದ ಯಾವುದೇ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿಲ್ಲ. ನಮಸ್ಕಾರ ದೇವ್ರೋ ಎಂದು ತಮ್ಮ ವ್ಲಾಗ್‌ ಆರಂಭಿಸುವ ಡಾ.ಬ್ರೋ ಕಳೆದ ನವೆಂಬರ್‌ 29 ರಂದು ವಿಡಿಯೋ ಹಂಚಿಕೊಂಡಿದ್ದೇ ಕೊನೆ ಅಲ್ಲಿಂದ ಇಲ್ಲಿವರೆಗೆ ಒಂದೇ ಒಂದು ಅಪ್ಡೇಟ್‌ ಅವರ ಸಾಮಾಜಿಕ ಜಾಲತಾಣದ ಅಕೌಂಟ್‌ನಿಂದ ಹೊರಬಂದಿಲ್ಲ.

ಇದು ಅವರ ಫಾಲೋವರ್ಸ್‌ಗೆ ಚಿಂತೆಗೆ ಕಾರಣವಾಗಿತ್ತು. ಚೀನಾವನ್ನು ಹೊಗಳಿದ್ದರಿಂದ ಅವರಿಗೆ  ಕೆಲವರು ದೇಶದ್ರೋಹಿ ಪಟ್ಟ ಕಟ್ಟಿದ್ದರು. ಹೀಗಾಗಿ ಡಿಪ್ರೆಷನ್‌ಗೆ ಹೋಗಿದ್ದಾರೆ ಅಂತೆಲ್ಲ ಸುದ್ದಿಯಾಗುತ್ತಿದೆ. ಗಗನ್ ಎಲ್ಲಿ ಹೋದರು? ಚೀನಾದಲ್ಲಿ ಬಂಧಿಯಾಗಿದ್ದಾರೆ? ಅವರನ್ನು ಕರೆತನ್ನಿ, ಅವರಿಗೆ ಅನಾರೋಗ್ಯ ಸಮಸ್ಯೆಯಾಗಿದೆಯೇ? ಎಂದೆಲ್ಲ ತರಹೇವಾರಿ ಊಹಾಪೋಹಗಳು ಹರಿದಾಡುತ್ತಿತ್ತು. 

ಈ ಎಲ್ಲಾ ಪ್ರಶ್ನೆಗಳಿಗೆ ಇಂದು ಮತ್ತೊಬ್ಬ ಪ್ರಸಿದ್ಧ ಯೂಟ್ಯೂಬರ್‌ ಗ್ಲೋಬಲ್‌ ಕನ್ನಡಿಗ ನಟ ಮಹಾಬಲ ರಾಮ್ ನಿಮಗೆ ಉತ್ತರ ನೀಡಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಗ್ಲೋಬಲ್‌ ಕನ್ನಡಿಗ ಯೂಟ್ಯೂಬರ್‌ ನಟ ಮಹಾಬಲ ರಾಮ್ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಮಗದೊಂದು ಪ್ರಸಿದ್ಧ ಯೂಟ್ಯೂಬ್‌ ಚಾನೆಲ್‌ ಫ್ಲೈಯಿಂಗ್‌ ಪಾಸ್‌ಪೋರ್ಟ್ ಆಶಾ-ಕಿರಣ್‌ ಮತ್ತು ಡಾ.ಬ್ರೋ ಜೊತೆಗೆ ಒಂದು ದಿನದ ಟ್ರಿಪ್‌ ಹೋದ ಬಗ್ಗೆ ಹಾಕಿಕೊಂಡಿದ್ದಾರೆ.

ಮೊದಲ ಬಾರಿ ಎಲ್ಲರೂ ಸೇರಿದಾಗ ಇವರೆಲ್ಲ ಗೆಳೆಯರಾಗಿದ್ದು ವರುಷದಲ್ಲಿ ಒಂದು ಬಾರಿ ಜೊತೆ ಸೇರಿ ಟ್ರಿಪ್‌ ಹೋಗುವ ಬಗ್ಗೆ ಯೋಜನೆ ಹಾಕಿಕೊಂಡಿದ್ದರು. ಅದರಂತೆ ಈ ವರ್ಷ ಕೂಡ ಎಲ್ಲರೂ ಜೊತೆಯಾಗಿ ಶೃಂಗೇರಿ ಕಡೆ ಹೋಗಿದ್ದು, ಈ ಬಗ್ಗೆ ಗ್ಲೂಬಲ್‌ ಕನ್ನಡಿಗ ಸ್ಪಷ್ಟನೆ ನೀಡಿದ್ದಾರೆ. ಅಸಲಿಗೆ  ಡಾ.ಬ್ರೋ ಸ್ಟಾರ್ ಅವರು ವಿಶ್ವಕಪ್‌ ಸಮಯದಲ್ಲಿ 2 ತಿಂಗಳ ಕಾಲ ಸ್ಪೋರ್ಟ್ ಕನ್ನಡದಲ್ಲಿ ಕಾಣಿಸಿಕೊಂಡಿದ್ದರು. 

ಈ ವೇಳೆ ಅವರು ವಿಡಿಯೋವನ್ನು ಹಂಚಿಕೊಂಡಿದ್ದರು. ಸ್ಪೋರ್ಟ್ ಕನ್ನಡದ ಕೆಲಸ ಮುಗಿಸಿಕೊಂಡು ಆರಾಮವಾಗಿ ರೆಸ್ಟ್ ಮಾಡುತ್ತಿದ್ದಾರೆ. ಜನವರಿ ತಿಂಗಳಲ್ಲಿ ಮತ್ತೆ ವೀಡಿಯೊ ಮಾಡುತ್ತೇನೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.