ಹೊರದೇಶದಲ್ಲಿ ಮಂಗಳೂರಿನ ತುಳು ಭಾಷೆ ಮಾತನಾಡಿದ 'ಡಾ ಬ್ರೋ; ಕನ್ನಡಿಗರಿಗೆ ಮೈಜುಮ್

 | 
Gyu

ನಮಸ್ಕಾರ​ ದೇವ್ರು. ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ. ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನ್ನೇ ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್​ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. 

ತಾಲಿಬಾನ್, ಪಾಕಿಸ್ತಾನ್​ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ. ಡಾ. ಬ್ರೋ ನಿಜವಾದ  ಹೆಸರು ಗಗನ್​. ಅತ್ಯಂತ ಕಾಡು ಮನುಷ್ಯರಿಂದಲೇ ತುಂಬಿ ಹೋಗಿರುವ ದೇಶಗಳಿಗೂ ನುಗ್ಗಿದ್ದಿದೆ. ಉಗಾಂಡಾಕ್ಕೆ ಹೋಗಿ ಅಭಿಮಾನಿಗಳಿಗೆ ಆತಂಕವನ್ನೂ ಮೂಡಿಸಿದ್ದಾರೆ. 

ತಾಲೀಬಾನಿಗಳನ್ನೂ ಮಾತನಾಡಿಸಿ ಫ್ಯಾನ್ಸ್​ಗೆ ಶಾಕ್​ ನೀಡಿದ್ದಾರೆ.  ದಯವಿಟ್ಟು ನಿಮ್ಮ ಪ್ರಾಣ ಪಣಕ್ಕಿಡಬೇಡಿ ಎಂದು ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ . ಆದರೂ ಧೈರ್ಯದಿಂದ ಗಗನ್​ ಎಲ್ಲಾ ದೇಶಗಳಿಗೂ ಲಗ್ಗೆ ಇಡುತ್ತಿದ್ದಾರೆ.ಇದೀಗ ಇಂಡೋನೇಷಿಯಾಕ್ಕೆ ಪ್ರಯಾಣ ಬೆಳೆಸಿದ್ದು, ಅಲ್ಲಿ ತುಳು ಮಾತನಾಡಿ ಸಕತ್​ ಸದ್ದು ಮಾಡಿದ್ದಾರೆ. 

ಅಂದಹಾಗೆ ಗಗನ್​ ಅವರೇನೂ ತುಳುನಾಡಿನವರಲ್ಲ. ಬೆಂಗಳೂರಿನವರು. ಆದರೆ ತುಳುವಿನಲ್ಲಿ ಒಂದೇ ಒಂದು ವಾಕ್ಯ ಕಲಿತಿದ್ದು, ಅದನ್ನು ಇಂಡೋನೇಷಿಯಾದಲ್ಲಿಯೂ ಹೇಳುವ ಮೂಲಕ ಸಕತ್​ ವೈರಲ್​ ಆಗುತ್ತಿದ್ದಾರೆ. ಈ ಕುರಿತು ವಿಡಿಯೋ ತುಣುಕೊಂದನ್ನು ತುಳು ಕಂಟೆಂಟ್‌ ಕ್ರಿಯೇಟರ್‌ ಶರಣ್‌ ಚಿಲಿಂಬಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಅದೀಗ ವೈರಲ್​ ಆಗಿದೆ. 

ಕೆಲ ದಿನಗಳ ಹಿಂದೆ ಗಗನ್​ ಅವರು ಮಂಗಳೂರಿಗೆ ಭೇಟಿ ನೀಡಿದ್ದರು. ಆಗ ಶರಣ್‌ ಚಿಲಿಂಬಿ ಅವರು ಹೇಗಿದ್ದೀರಿ ಎನ್ನುವುದಕ್ಕೆ ತುಳುವಿನಲ್ಲಿ ಏನು ಹೇಳುತ್ತಾರೆ ಎಂದು ಕಲಿಸಿಕೊಟ್ಟಿದ್ದರು. ಎಂಚ ಉಲ್ಲರ್‌ ಎಂದರೆ ಹೇಗಿದ್ದೀರಿ ಎಂದು ಹೇಳಿದ್ದರು. ಇದನ್ನೇ ಗಗನ್​ ಅವರು, ಇಂಡೋನೇಷಿಯಾದಲ್ಲಿಯೂ ಬಳಸಿದ್ದಾರೆ.  

ಇಂಡೋನೇಷಿಯಾದಲ್ಲಿ ಡಾ. ಬ್ರೋ ಗಾಡಿಯಲ್ಲಿ ಹೋಗುತ್ತಿರುವಾಗ ಅಲ್ಲಿನ ಸ್ಥಳೀಯರಿಗೆ ಕೈಬೀಸಿ ಹಲೋ… ಎಂಚ ಉಲ್ಲರ್. ಎಂಚ ಉಲ್ಲರ್‌ ಎಂದು ತುಳುವಿನಲ್ಲಿ  
ಮಾತನಾಡಿರುವಂತಹ ದೃಶ್ಯವನ್ನು ಕಾಣಬಹುದು. ಇದರ ವಿಡಿಯೋ ತುಣುಕು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ. ತುಳು ಮಾತನಾಡುವವರ ಮನ ಗೆದ್ದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.