ಅಚ್ಚ ಕನ್ನಡದಲ್ಲಿ ಮಾತನಾಡಿದ ದ್ರಾವಿಡ್; ಚಪ್ಪಾಳೆ ತಟ್ಟಿದ ಜೊತೆಗಾರರು

 | 
Hi
ಭಾರತ T-20 ವಿಶ್ವಕಪ್ 2024ರ ಗೆಲುವಿನ ಮಾಸ್ಟರ್‌ಮೈಂಡ್ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಮುಂಬರುವ IPL-2025ರ ರಾಜಸ್ಥಾನ ರಾಯಲ್ಸ್ ತಂಡದ ಮಖ್ಯ ಕೋಚ್ ಆಗಿ ಶೀಘ್ರದಲ್ಲೇ ಅಧಿಕಾರ ವಹಿಸಕೊಳ್ಳಲಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್ ಮೂಲಗಳು ಮಾಹಿತಿ ನೀಡಿವೆ.
ಜೂನ್‌ ತಿಂಗಳಿನಲ್ಲಿ ಬಾರ್ಬಡೋಸ್‌ನಲ್ಲಿ ಭಾರತದ ತಂಡ ಟಿ-20 ವಿಶ್ವಕಪ್ ಜಯಗಳಿಸಿದ ಬಳಿಕ ವೃತ್ತ ಜೀವನದಿಂದ ಕೊಂಚ ವಿರಾಮ ಪಡೆದಿರುವ ರಾಹುಲ್ ದ್ರಾವಿಡ್ ಮುಂಬರಿವ ದಿನಗಳಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಜೊತೆಗೆ ಕೆಲಸ ಮಾಡಲಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ ಅವರ ಬಾಯಲ್ಲಿ ಕನ್ನಡವನ್ನು ಕೇಳೋದೇ ಚಂದ ಅಂದಿದ್ದಾರೆ ಅಭಿಮಾನಿಗಳು.
2016ರಲ್ಲಿ ರಾಹುಲ್ ದ್ರಾವಿಡ್ ಅವರು ದೆಹಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇಲ್ಲಿ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರ ಪಾತ್ರವನ್ನು ವಹಿಸಿಕೊಳ್ಳುವವರೆಗೂ ತಂಡದ ಕೋಚ್ ಆಗಿದ್ದರು.2021 ರಲ್ಲಿ ರಾಹುಲ್ ದ್ರಾವಿಡ್ ಅವರು ರವಿಶಾಸ್ತ್ರಿ ಅವರ ಜಾಗದಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. 
ಈ ನಡುವೆ ದ್ರಾವಿಡ್ ಅಧಿಕಾರಾವಧಿಯಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿದ್ದ ವಿಕ್ರಮ್ ರಾಥೋರ್ ಅವರನ್ನು ರಾಜಸ್ಥಾನ ಫ್ರಾಂಚೈಸಿ ತನ್ನ ಸಹಾಯಕ ಕೋಚ್ ಆಗಿ ನೇಮಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಸದ್ಯ ರಾಜಸ್ಥಾನ ತಂಡದ ನಾಯಕರಾಗಿರುವ ಸಂಜು ಸ್ಯಾಮ್ಸನ್ ರಾಹುಲ್ ಗರಡಿಯಲ್ಲಿ ಬೆಳಿದಿರುವ ಆಟಗಾರ, ಇದೀಗ ರಾಹುಲ್-ಸಂಜು ಜಗಲ್‌ಬಂದಿ ಹೇಗೆ ಯಶಸ್ಸು ಸಾಧಿಸಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.