ಚಂದುಳ್ಳಿ ಚೆಲುವೆಯಂತ್ತಿದ್ದ ಯುವತಿಗೆ ತನ್ನ ಖಾಸಗಿ ಅಂಗ ತೋರಿಸಿದ ಡ್ರೈವರ್, ರೊಚ್ಚಿಗೆದ್ದ ಕರುನಾಡು

 | 
Uii

ಇತ್ತೀಚಿನ ದಿನಗಳಲ್ಲಿ ಕ್ಯಾಬ್‌ನ ಸೇವೆಗಳ ಕಾರಣದಿಂದಾಗಿ ಸಾಮಾನ್ಯ ಜನರಿಗೂ ಪ್ರಯಾಣ ಮಾಡುವುದು ಬಹಳ ಸುಲಭವಾಗಿದೆ. ಮೊದಲು ಆಟೋಗಳ ನಿರೀಕ್ಷೆ ಹಾಗೂ ಜನರಿಂದ ತುಂಬಿ ತುಳುಕುವ ಬಸ್‌ಗಳಲ್ಲಿ ಪ್ರಯಾಣ ಜನರಿಗೆ ತೀವ್ರ ದಣಿವನ್ನುಂಟು ಮಾಡುತ್ತಿತ್ತು. ಆದರೆ ಈಗ ಕ್ಯಾಬ್‌ಗಳು ಈ ಎಲ್ಲ ಕಷ್ಟಗಳನ್ನು ದೂರಗೊಳಿಸಿವೆ. 

ಮಹತ್ವದ ಸಂಗತಿಯೆಂದರೆ, ಆ್ಯಪ್‌ನಲ್ಲಿ ಕ್ಲಿಕ್‌ ಮಾಡಿದ ಕೆಲವೇ ನಿಮಿಷಗಳಲ್ಲಿ ಕ್ಯಾಬ್‌ ನೀವು ಕೊಟ್ಟ ವಿಳಾಸದಲ್ಲಿ ಬಂದು ನಿಂತುಕೊಳ್ಳುತ್ತದೆ. ಇದರಿಂದಾಗಿ ನಿಮ್ಮ ಅಮೂಲ್ಯ ಸಮಯ ನಷ್ಟವಾಗುವುದಿಲ್ಲ. ಎಲ್ಲರೂ ಇಷ್ಟ ಪಡುತ್ತಿದ್ದ ಈ ಕ್ಯಾಬ್ ಗಳು ಈಗೀಗ ಭಯ ಹುಟ್ಟಿಸುತ್ತಿವೆ. ಹೌದು ಮಹಿಳಾ ಪ್ರಯಾಣಿಕರೊಟ್ಟಿಗೆ ಉಬರ್​ ಚಾ;ಕ ಅಸಭ್ಯವಾಗಿ ವರ್ತಿಸಿ ತನ್ನ ಗುಪ್ತಾಂಗ ತೋರಿಸಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರು ನಗರದ ಬಿಟಿಎಂ ಲೇಔಟ್​ 2ನೇ ಹಂತದಲ್ಲಿ ನಡೆದಿದೆ.

ಹೌದು, ಅಷ್ಟಕ್ಕೂ ಬಿಟಿಎಂ 2ನೇ ಹಂತದಿಂದ ಜೆಪಿನಗರ ಮೆಟ್ರೋ ಸ್ಟೇಷನ್​ವರೆಗೆ ಕ್ಯಾಬ್​ ಬುಕ್​ ಮಾಡಿದ್ದ, ಮಹಿಳೆ ಜೊತೆ ಚಾಲಕ ಅನುಚಿತವಾಗಿ ವರ್ತಿಸಿದ್ದನ್ನು ಆಕೆ ಲಿಂಕ್ಡ್​ಇನ್​​ನಲ್ಲಿ ಪೋಸ್ಟ್​ ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ. ಸರಿಯಾದ ರೂಟ್​ ಅನುಸರಿಸಿದ ಚಾಲಕನ ನಡೆ ಮೇಲೆ ಅನುಮಾನಗೊಂಡ ಮಹಿಳೆ ಅರ್ಧ ದಾರಿಯಲ್ಲೆ ಇಳಿದಿದ್ಧಾರೆ. ಉಬರ್​ ಚಾಲಕನಿಗೆ ಹಣ ಪಾವತಿ ಮಾಡಿದ್ದಾಳೆ. 

ಈ ವೇಳೆ ಮಹಿಳೆಗೆ ಚಾಲಕ ತನ್ನ ಗುಪ್ತಾಂಗವನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ಧಾನೆ. ಇದರಿಂದ ಗಾಬರಿಗೊಂಡ ಯುವತಿ ಸ್ಥಳದಿಂದ ಓಡಿ ಹೋಗಿದ್ಧಾರೆ. ಕೆಲ ಹೊತ್ತಿನ ಬಳಿಕ ನಡೆದ ಘಟನೆ ಕುರಿತು ಮಹಿಳೆ ಲಿಂಕ್ಡ್​ಇನ್​ ಉಬರ್​ ಕಂಪನಿಯವರಿಗೆ ದೂರು ಕೊಟ್ಟಿದ್ದಾರೆ. ಯುವತಿ ದೂರಿಗೆ ಪ್ರತಿಕ್ರಿಯಿಸಿರುವ ಸಂಸ್ಥೆ ಆತನ ವಿರುದ್ಧ ಕ್ರಮ ಜರುಗಿಸಿರುವುದಾಗಿ ತಿಳಿಸಿದೆ.