ಹನುಮಂತ ಗೆಲ್ತಾನೆ ಅಂತ ಮೊದಲೇ ಭವಿಷ್ಯ‌ ನುಡಿದಿದ್ದ ಡ್ರೋನ್ ಪ್ರತಾಪ್

 | 
Hx
ಹನುಮಂತ ಗೆದ್ದಿದ್ದಕ್ಕೆ ಡ್ರೋನ್ ಪ್ರತಾಪ್ ಸಂಭ್ರಮ ನೋಡಿ ಹೌದು ಇದರಲ್ಲಿ ಡ್ರೋನ್​ ಪ್ರತಾಪ್​, ಹಲೋ ಡ್ರೋನ್​ ಆರ್ಮಿ, ಎಲ್ಲರಿಗೂ ನಮಸ್ಕಾರ. ಈ ಬಾರಿ ನನಗೆ ತುಂಬಾ ಇಷ್ಟವಾಗಿರುವ ಸ್ಪರ್ಧಿ ಹನುಮಂತು. ಈ ಬಾರಿ ಹನುಮಂತು ಬಿಗ್​ಬಾಸ್​​ನಲ್ಲಿ ಗೆಲ್ಲಬೇಕು, ಗೆದ್ದೇ ಗೆಲ್ತಾರೆ. ವೋಟಿಂಗ್​ ಪ್ರಕಾರ ಹೋಗಿದ್ದೇ ಆದರೆ ಹನುಮಂತುನೇ  ಗೆಲ್ಲೋದು. ಬಡವರ ಮಕ್ಕಳು ಗೆಲ್ಲಬೇಕು, ಅದಕ್ಕಾಗಿ ಹನುಮಂತುಗೆ ವೋಟ್​ ಮಾಡಿ, ನಮ್ಮ ಡ್ರೋನ್​ ಆರ್ಮಿಯ ಎಲ್ಲರೂ ಅವರಿಗೇ ವೋಟ್​ ಮಾಡುವುದು. 
ನೀವು ವೋಟ್​ ಮಾಡಿ ಫೋನ್​ ಕುಟ್ಟಿ ಪುಡಿಪುಡಿ ಮಾಡಿ ಎಂದಿದ್ದಾರೆ ಡ್ರೊನ್​ ಪ್ರತಾಪ್​. ಇವರ ಈ ವಿಡಿಯೋ ಸೋಷಿಯಲ್​  ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದ್ದು, ತಮ್ಮ ಸಪೋರ್ಟ್​ ಹನುಮಂತುಗೆ ಎಂದು ಹೇಳುತ್ತಿದ್ದಾರೆ. ಇದೀಗ ಹನುಮಂತನ ಗೆಲುವಿಗೆ ಹಾರಿ ಕುಣಿದಿದ್ದಾರೆ. ಸಂತೋಷ ವ್ಯಕ್ತಡಿಸಿದರು.
ಇನ್ನು ಕೆಲವರು ಬಡವರ ಮಕ್ಕಳು ಅಂತ ಹೇಳಬೇಡಿ, ಅವ್ರು ಹಾಗೆ ಎಲ್ಲೂ ಹೇಳಿಕೊಂಡಿಲ್ಲ ಎಂದಿದ್ದರೆ, ಮತ್ತೆ ಕೆಲವರು ಹೋದ ಸೀಸನ್​ನಲ್ಲಿ ನಿಮಗೆ ಅನ್ಯಾಯ ಆಗಿದೆ, ಈ ಸಲ ಹನುಮಂತು ಗೆಲ್ಲಲಿ ಎನ್ನುತ್ತಿದ್ದಾರೆ. ಇನ್ನು ಕೆಲವರು ನೀವಿಬ್ಬರೂ ಬಿಡಿಯಪ್ಪಾ, ಸತ್ಯ ದೇವರಿಗೇ ಗೊತ್ತು ಎನ್ನುವ ಮೂಲಕ ಕೊಂಕು ಮಾತುಗಳನ್ನೂ ಆಡಿದ್ದಾರೆ. ಒಟ್ಟಿನಲ್ಲಿ ಬಿಗ್​ಬಾಸ್​ 11ರ ವಿನ್ನರ್​ ಯಾರು ಎಂಬ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಹಾಗೆ ನೋಡಿದರೆ ಕೆಲ ದಿನಗಳ ಹಿಂದೆ ವಿಕಿಪಿಡಿಯಾ ಕೂಡ ಎಡವಟ್ಟು ಮಾಡಿ, ಹನುಮಂತುನೇ ಬಿಗ್​ಬಾಸ್​​ ವಿನ್ನರ್​ ಎಂದು ಘೋಷಿಸಿತ್ತು. 
ಆದ್ರೆ ಅದೀಗ ನಿಜವಾಗಿದೆ.ಹಾವೇರಿಯ ಸಣ್ಣ ಹಳ್ಳಿಯಲ್ಲಿ ಕುರಿ ಕಾಯುವ ಕಾಯಕ ಮಾಡ್ತಿದ್ದ ಹನುಮಂತು ಹಾಡು ಹಾಡ್ತಾ ಫೇಮಸ್ ಆಗಿದ್ರು. ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಸಂಗೀತ ಕಾರ್ಯಕ್ರಮಕ್ಕೆ ಬಂದ ಬಳಿಕ ಹನುಮಂತು ಭಾರೀ ಜನಪ್ರಿಯತೆ ಗಳಿಸಿದ್ರು.ಅದ್ಬುತವಾಗಿ ಹಾಡು ಹಾಡುವ ಹನುಮಂತರು ಸರಿಗಮಪ ಶೋನಲ್ಲಿ ರನ್ನರ್ ಅಪ್ ಆಗಿದ್ರು. 
ಇದೀಗ ಕಲರ್ಸ್ ಕನ್ನಡದ ಬಿಗ್ಗೆಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್ನಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಸೀಸನ್ 11ರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅದರಿಂದ ಸಂತೋಷವಾಗಿ ಡ್ರೋನ್ ಪ್ರತಾಪ್ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.