ಡ್ರೋನ್ ಪ್ರತಾಪ್ ಅವರಿಗೆ ಸಹೋದರ ಇದ್ದಾನೆ, ಬಿಗ್ ಬಾಸ್ ಮುಚ್ಚಿಟ್ಟಿದ್ದಕ್ಕೆ ಪ್ರೇಕ್ಷಕರು ಗರಂ

 | 
ರ್

ಬಿಗ್ ಬಾಸ್ ಮನೆಗೆ ಪ್ರತಾಪ್ ಅವರ ಅಣ್ಣ ಬಂದಿದ್ದರಂತೆ. ಇದು ವಾಹಿನಿಯಲ್ಲಾಗಲೀ, ಜಿಯೋ ಸಿನಿಮಾ ಆಪ್‌ನಲ್ಲಾಗಲೀ ಪ್ರಸಾರವಾದಂತಿಲ್ಲ. ಡ್ರೋನ್ ಪ್ರತಾಪ್ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಣ್ಣ ಬಂದು ಹೋಗಿದ್ದರ ಫೋಟೋವನ್ನು ಕಾಣಬಹುದು. ಇದನ್ನು ಯಾಕೆ ಪ್ರಸಾರ ಮಾಡಿಲ್ಲ ಅಂತ ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.

ಡ್ರೋನ್ ಪ್ರತಾಪ್ ಅವರು ತಂದೆ-ತಾಯಿ ಜೊತೆಗೆ ಮಾತನಾಡುವಾಗಲೂ ಕೂಡ ಅಣ್ಣನ ಬಗ್ಗೆ ಮಾತನಾಡಿಸಿಲ್ಲ, ಒಂದು ವೇಳೆ ಮಾತನಾಡಿದ್ರೂ ಅದೂ ಪ್ರಸಾರವಾಗಿಲ್ಲ. ಡ್ರೋನ್ ಪ್ರತಾಪ್ ಅವರಿಗೆ ಸ್ವಂತ ಅಣ್ಣ ಇದ್ದಾನಾ? ಅಥವಾ ಚಿಕ್ಕಪ್ಪ-ದೊಡ್ಡಪ್ಪನ ಮಗನೇ ಎನ್ನೋದರ ಬಗ್ಗೆಯೂ ಮಾಹಿತಿ ಇಲ್ಲ. 

ಇನ್ನು ಡ್ರೋನ್ ಪ್ರತಾಪ್ ಅವರ ಅಣ್ಣ ಬಿಗ್ ಬಾಸ್ ಮನೆಯೊಳಗೆ ಬೇಟಿ ನೀಡಿ ಅವರಿಗೆ ಚೆನ್ನಾಗಿ ಆಟ ಆಡುವಂತೆ ಹೇಳುತ್ತಿದ್ದಾರೆ.. ಎಂದು ಡ್ರೋನ್ ಪ್ರತಾಪ್ ಅವರ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿದೆ. ಇದರ ಜೊತೆಗೆ ಫೋಟೋ ಕೂಡ ಇವೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಡ್ರೋನ್ ಪ್ರತಾಪ್ ಅಣ್ಣ ಬಂದಿದ್ದು, ಮಾತಾಡಿದ್ದನ್ನು ಯಾಕೆ ತೋರಿಸಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. 

ಒಮ್ಮೆಯೂ ಪ್ರತಾಪ್ ಬಾಯಲ್ಲಿ ಅಣ್ಣನ ಹೆಸರು ಬಂದಿರಲಿಲ್ಲ. ಸಾಕಷ್ಟು ಬಾರಿ ಅವರು ತಂಗಿ ಮದುವೆ ಮಾಡಬೇಕು ಅಂತ ಹೇಳುತ್ತಿದ್ದರು. ಅಣ್ಣನ ಬಗ್ಗೆ ಹೇಳೇ ಇಲ್ಲ ಎಂಬ ಮಾತು ಕೇಳಿ ಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.