ಮಾದೇಶ್ವರ ಬೆಟ್ಟದಲ್ಲಿ ಡ್ರೋನ್ ಪ್ರತಾಪ್ ಹವಾ, ಯಾವ ಸ್ಟಾರ್ ನಟನಿಗೂ ಕಮ್ಮಿಯಿಲ್ಲ ಎಂದ ಜನ

 | 
Hji

ಬಿಗ್ ಬಾಸ್’ ರನ್ನರ್ ಅಪ್ ಆಗಿ ಪ್ರತಾಪ ಹೊರ ಹೊಮ್ಮಿದ್ದಾರೆ. 2 ಕೋಟಿಗೂ ಅಧಿಕ ವೋಟ್ಸ್ ಅವರಿಗೆ ಬಿದ್ದಿವೆ. ಅವರ ಜನಪ್ರಿಯತೆ ಹೆಚ್ಚಿರುವುದರಿಂದ ಹೋದಲ್ಲೆಲ್ಲ ಜನರು ಮುತ್ತಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ಆಗಲೂ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು.

ಬಿಗ್ಬಾಸ್ ಇಂದ ಡ್ರೋನ್ ಪ್ರತಾಪ್​ಗೆ ಸಿಕ್ಕ ಜನಪ್ರಿಯತೆ ಅಷ್ಟಿಷ್ಟಲ್ಲ. ಡ್ರೋನ್ ವಿಚಾರದಲ್ಲಿ ಈ ಮೊದಲು ಟ್ರೋಲ್ ಆಗುತ್ತಿದ್ದ ಅವರು ಬಿಗ್ ಬಾಸ್ ಮನೆಯಲ್ಲಿ ಬೇರೆಯದೇ ಪ್ರತಾಪ್ ಆದರು. ಅವರನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಿದೆ. ಅವರು ಹೋದಲ್ಲೆಲ್ಲ ಜನರು ಮುತ್ತಿಕೊಳ್ಳುವುದೇ ಇದಕ್ಕೆ ಸಾಕ್ಷಿ. ಈಗ ಅವರು ಚಾಮರಾಜನಗರ ಜಿಲ್ಲೆಯಲ್ಲಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಸೇರಿದ್ದರು.

ಪ್ರತಾಪ್ ಸುಳ್ಳು ಹೇಳುತ್ತಾರೆ ಎನ್ನುವ ಅಭಿಪ್ರಾಯ ಅನೇಕರದ್ದಾಗಿತ್ತು. ಇದನ್ನು ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಎದುರು ಒಪ್ಪಿಕೊಂಡರು. ಬಳಿಕ ಕ್ಷಮೆ ಕೂಡ ಕೇಳಿದರು. ‘ನಾನು ಸುಳ್ಳು ಹೇಳಿರಬಹುದು. ಅದಕ್ಕೆ ಕ್ಷಮೆ ಕೇಳುತ್ತೇನೆ. ಸಾಕಷ್ಟು ನೊಂದಿದ್ದೇನೆ’ ಎಂದು ಅವರು ಕಣ್ಣೀರು ಹಾಕಿದ್ದರು. ಹಲವು ವರ್ಷಗಳಿಂದ ದೂರವೇ ಇದ್ದ ಅಪ್ಪ-ಅಮ್ಮ ಪ್ರತಾಪ್​ಗೆ ಮರಳಿ ಸಿಕ್ಕಿದ್ದಾರೆ. ಈ ಎಲ್ಲಾ ಕಾರಣದಿಂದ ಭಾವನಾತ್ಮಕವಾಗಿ ಜನರ ಜೊತೆ ಪ್ರತಾಪ್ ಕನೆಕ್ಟ್ ಆದರು. ಅವರ ಬುದ್ಧಿವಂತಿಕೆಯನ್ನೂ ಜನರು ಇಷ್ಟಪಟ್ಟರು.

ಮಹದೇಶ್ವರ ಬೆಟ್ಟ ಗಡಿಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನಲ್ಲಿದೆ. ಬೆಟ್ಟಗಳಿಂದ ಇದು ಸುತ್ತುವರಿದಿರುವುದರಿಂದ ಮಲೆ ಮಹದೇಶ್ವರ ಬೆಟ್ಟ ಎಂದು ಇದನ್ನು ಕರೆಯಲಾಗುತ್ತದೆ. ಮೈಸೂರಿನಿಂದ 130 ಕಿ.ಮೀ ಹಾಗೂ ಬೆಂಗಳೂರಿನಿಂದ 210 ಕಿ.ಮೀ ದೂರವಿದೆ ಈ ಮಹದೇಶ್ವರ ಬೆಟ್ಟ. ಇಲ್ಲಿಗೆ ಪ್ರತಾಪ್ ತೆರಳಿ ಆಶೀರ್ವಾದ ಪಡೆದಿದ್ದಾರೆ. ಜನರಿಗೆ ನಿಮ್ಮಿಂದ ಈ ಗೆಲುವು ನೀವೇ ದೇವರು ಎಂದು ಕೈಮುಗಿದಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.