ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಆ,ತ್ಮಹತ್ಯೆಗೆ ಯತ್ನ ವದಂತಿ ಹಿನ್ನೆಲೆ ಆಡಿಯೋ ವೈರಲ್

 | 
B

 ಬಿಗ್‌ ಬಾಸ್‌ ಮನೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಡ್ರೋನ್‌ ಪ್ರತಾಪ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವು ಮೂಲಗಳ ಪ್ರಕಾರ ಅವರಿಗೆ ಫುಡ್‌ ಪಾಯ್ಸನ್‌ ಆಗಿದೆ ಎನ್ನಲಾಗಿದೆ. ಅವರನ್ನು ರಾಜರಾಜೇಶ್ವರಿ ನಗರದ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಿಗ್‌ ಬಾಸ್‌ ಮನೆಯಲ್ಲಿ ಅನಾರೋಗ್ಯಕ್ಕೀಡಾದ ಪ್ರತಾಪ್‌ ಅವರನ್ನು ತಕ್ಷಣವೇ ಎಸ್ಎಸ್‌ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದ್ದು ಅಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 

ಬಿಗ್​ಬಾಸ್​ ಮನೆಯಲ್ಲಿ ತಮ್ಮನ್ನು ಕಡೆಗೆಣಿಸಿದ್ದಕ್ಕೆ ಪ್ರತಾಪ್​ ಅಸಾಮಾಧಾನಗೊಂಡಿದ್ದಾರೆ.ಟಾಸ್ಕ್ ವಿಚಾರದಲ್ಲಿ ಕಡೆಗಣಿಸಿದ್ದಕ್ಕೆ ಪ್ರತಾಪ್​ ಬೇಸರಗೊಂಡಿದ್ದರು. ಈ ವಿಚಾರವಾಗಿ ಬಿಗ್​ಬಾಸ್​​ ಮನೆಯಲ್ಲಿ ಡ್ರೋಣ್ ಪ್ರತಾಪ್​ ಕಣ್ಣೀರಿಟ್ಟಿದ್ದರು. ನಿನಗೆ ಆಡಲು ಬರಲ್ಲ, ಪ್ಯಾನಿಕ್ ಆಗ್ತೀಯ ಎಂದು ಇತರ ಸ್ಪರ್ಧಿಗಳು ಹೀಯಾಳಿಸಿದ್ದರು. ಇದೇ ಕಾರಣಕ್ಕೆ ಪ್ರತಾಪ್‌ ಅವರನ್ನುಸ್ಪರ್ಧಿಗಳು ಟಾಸ್ಕ್‌ನಿಂದ ಹೊರಗಿಟ್ಟಿದ್ದರು. ಇತ್ತೀಚೆಗೆ ಬಿಗ್‌ ಬಾಸ್‌ ಮನೆಗೆ ಆಗಮಿಸಿದ್ದ ಸ್ವಾಮೀಜಿಯೊಬ್ಬರು ಮಾತನಾಡುವ ವೇಳೆ, ಪ್ರತಾಪ್‌ ಅವರು ಕುಟುಂಬದಿಂದ ದೂರವೇ ಇದ್ದರೆ ಒಳಿತಾಗುತ್ತದೆ ಎಂದು ಹೇಳಿದ್ದರು.


 ಅಂದಿನಿಂದ ಪ್ರತಾಪ್‌ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಅದರ ನಡುವೆ, ಮನೆಯಲ್ಲಿದ್ದ ಇತರ ಸ್ಪರ್ಧಿಗಳ ಹೀಯಾಳಿಕೆಯ ಮಾತಿನಿಂದ ಅವರು ಬೇಸರಗೊಂಡಿದ್ದರು ಎನ್ನಲಾಗಿದೆ.ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಮೂಲಗಳ ಪ್ರಕಾರ ಅವರು ಕೆಲವು ಮಾತ್ರೆಗಳನ್ನು ಸೇವಿಸಿದ್ದಾರೆ ಎಂದು ವರದಿಯಾಗಿದೆ.ಆದರೆ, ಯಾವ ಮಾತ್ರೆಗಳು ಎನ್ನುವುದು ಖಚಿತವಿಲ್ಲ. 


ಇನ್ನು ಬಿಗ್‌ ಬಾಸ್‌ ಮೂಲ ಹೇಳುವ ಪ್ರಕಾರ ಪ್ರತಾಪ್‌ ಅವರಿಗೆ ಫುಡ್‌ ಪಾಯ್ಸನ್‌ ಆಗಿದೆ ಎಂದಿದ್ದಾರೆ.ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಇತರ ಸ್ಪರ್ಧಿಗಳು ಪ್ರತಾಪ್‌ ಅವರನ್ನು ಹೀಯಾಳಿಸಿದ್ದು ಕೂಡ ಇದಕ್ಕೆ ಕಾರಣ ಎನ್ನಲಾಗಿದೆ.ಪೊಲೀಸರು ಕೂಡ ಈ ಕುರಿತಾದ ಮಾಹಿತಿ ಕಲೆಹಾಕಲು ಸಿದ್ಧರಾಗಿದ್ದಾರೆ. ಇದು ಫುಡ್‌ ಪಾಯ್ಸನ್‌ ಪ್ರಕರಣವೇ ಅಥವಾ ಬೇರೆ ಯಾವುದಾದರೂ ಪ್ರಕರಣವೇ ಎನ್ನುವ ನಿಟ್ಟಿನಲ್ಲಿ ಮಾಹಿತಿ ಪಡೆಯುತ್ತಿದ್ದಾರೆ.ಆದರೆ, ಪ್ರತಾಪ್‌ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವುದು ಮಾತ್ರ ಖಚಿತಗೊಂಡಿದೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.