ಬೆಂಕಿಯಲ್ಲಿ ಹೊತ್ತಿ ಉರಿದ ದುಬೈನ ಬುರ್ಜ್‌ ಖಲೀಫಾ, ಆಕಾಶದೆತ್ತರದ ಕಟ್ಟಡ ಭಸ್ಮ

 | 
ಕಿ
AI ಬಂದಮೇಲೆ ಏನ್ ಬೇಕಾದ್ರು ಸೃಷ್ಟಿ ಮಾಡ್ತರೆ. ಏನ್ ಬೇಕಾದ್ರು ಎಡಿಟ್ ಮಾಡಿ ಬಿಡ್ತಾರೆ.ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಬಹುಮಹಡಿ ಕಟ್ಟಡಕ್ಕೆ ಬೆಂಕಿ ತಗುಲಿದ್ದು, ಹೊತ್ತಿ ಉರಿಯುತ್ತಿರುವುದನ್ನು ಕಾಣಬಹುದು. ಬಳಕೆದಾರರು ಈ ವೀಡಿಯೊವನ್ನು ನಿಜವೆಂದು ಭಾವಿಸಿ ಹಂಚಿಕೊಳ್ಳುತ್ತಿದ್ದಾರೆ. 
ಈ ವಿಡಿಯೋ ಬುರ್ಜ್ ಖಲೀಫಾದಲ್ಲಿನ ಬೆಂಕಿಯದ್ದಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ವಿಶ್ವ ಪ್ರಸಿದ್ಧ ದುಬೈನ ಬುರ್ಜ್ ಖಲೀಫಾಕ್ಕೆ ನಿಜಕ್ಕೂ ಬೆಂಕಿ ತಗುಲಿದೆಯೇ?, ಈ ವೈರಲ್ ವಿಡಿಯೋದ ನಿಜಾಂಶ ಏನು?, ಇಲ್ಲಿದೆ ನೋಡಿ ಮಾಹಿತಿ.ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು,ದುಬೈ ಬುರ್ಜ್ ಖಲೀಫಾದಲ್ಲಿ ಬೆಂಕಿ ಎಂದು ಬರೆದಿದ್ದಾರೆ. ಹಾಗೆಯೆ ಫೇಸ್‌ಬುಕ್ ಬಳಕೆದಾರರೊಬ್ಬರು ಕೂಡ ಇದೇ ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಬುರ್ಜ್ ಖಲೀಫಾದಲ್ಲಿ ಬೆಂಕಿ ಎಂದು ಬರೆದಿದ್ದಾರೆ.
ಇನ್ನು ಸುದ್ದಿಯ ಸತ್ಯಾಸತ್ಯತೆಯನ್ನು ಟ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ಆಗಿರುವ ಈ ವಿಡಿಯೋವನ್ನು ಕೃತಕ ಬುದ್ಧಿಮತ್ತೆ ಪರಿಕರಗಳ ಸಹಾಯದಿಂದ ರಚಿಸಲಾಗಿದೆ. ಬಳಕೆದಾರರು AI- ರಚಿತವಾದ ವಿಡಿಯೋಗಳನ್ನು ನಿಜವೆಂದು ಪರಿಗಣಿಸಿ ಹಂಚುತ್ತಿದ್ದಾರೆ.
ಮೊದಲಿಗೆ ವಿಡಿಯೋವನ್ನು ಹೈವ್ ಮಾಡರೇಶನ್ ಟೂಲ್‌ಗೆ ಅಪ್‌ಲೋಡ್ ಮಾಡಿದ್ದಾರೆ.ಈ ಉಪಕರಣವು ಇದು AI ರಚಿಸುವ ಸಾಧ್ಯತೆಯು ಶೇಕಡಾ 90 ರಷ್ಟು ಇದೆ ಎಂದು ಸೂಚಿಸಿದೆ. ಹಾಗೆಯೆ ಸೈಟ್ ಎಂಜಿನ್ ಪರಿಕರಗಳನ್ನು ಬಳಸಿಕೊಂಡು ಹುಡುಕಿದ್ದೇವೆ. ಇಲ್ಲಿ ಚಿತ್ರವು 92 ಪ್ರತಿಶತ AI ನಿಂದ ರಚಿಸಲ್ಪಟ್ಟಿದೆ ಎಂದು ಹೇಳಿದೆ. De Copy ಬಳಸಿ ಕೂಡ ಚಿತ್ರವನ್ನು ಹುಡುಕಿದ್ದಾರೆ. 
ಈ ಉಪಕರಣವು ಶೇ. 98 ರಷ್ಟು ಫೋಟೋಗಳನ್ನು AI ಸಹಾಯದಿಂದ ರಚಿಸಲಾಗಿದೆ ಎಂದು ತಿಳಿದು ಬಂದಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.