ಆ ಒಂದು ದುರಾಸೆಯಿಂದ ಇವತ್ತು 1 ಕೋಟಿ 70 ಲಕ್ಷ ಕಳೆದುಕೊಂಡು ಬೀದಿಗೆ ಬಂದುಬಿಟ್ಟೆ; ಸಿಹಿಕಹಿ ಚಂದ್ರು

 | 
Jd
ಬದುಕು ನಾವುಊಹಿಸಿದಷ್ಟು ಸುಲಭವಲ್ಲ ಹಾಗೆಂದ ಮಾತ್ರಕ್ಕೆ ಕಷ್ಟವೂ ಅಲ್ಲ.ಪ್ರತಿಯೊಬ್ಬರ ಜೀವನದಲ್ಲೂ ಏಳು ಬೀಳು ಸಹಜ. ಎದ್ದಾಗ ಹೊಗಳುವವರಿಗಿಂತ ಬಿದ್ದಾಗ ಆಡಿಕೊಂಡು ನಗುವವರೇ ಹೆಚ್ಚು. ಇಂಥಹ ಸಂದರ್ಭಗಳು ಪ್ರತಿಯೊಬ್ಬರ ಜೀವನದಲ್ಲೂ ಎದುರಾಗಿರುತ್ತವೆ. ಕೆಲವರು ಇದನ್ನು ಹೇಳಿಕೊಳ್ಳುವ ಅವಕಾಶ ಪಡೆಯುತ್ತಾರೆ. ಆದರೆ ಕೆಲವರಿಗೆ ಈ ಅವಕಾಶಗಳು ಸಿಗುವುದೇ ಇಲ್ಲ. ಇಂತಹ ಘಟನೆಗಳನ್ನು ಹಂಚಿಕೊಂಡಾಗ ಒಬ್ಬ ವ್ಯಕ್ತಿಗೆ ತಾನೂ ಬಿದ್ದಾಗ ಮುಂದೆ ತಾನು ಮೇಲೇಳುವ ನಂಬಿಕೆ ಹೆಚ್ಚಾಗುತ್ತದೆ. ಇದು ಜೀವನದ ಒಂದು ಪಾಠ ಎಂದು ಸ್ಯಾಂಡಲ್‌ವುಡ್‌ನ ಹೆಸರಾಂತ ನಟ ಸಿಹಿ ಕಹಿ ಚಂದ್ರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಹೌದು ಸಿಹಿ ಕಹಿ ಚಂದ್ರು ಒಬ್ಬ ಹೆಸರಾಂತ ಕನ್ನಡ ನಟ. ಆದರೂ ಕೂಡ ಸಮಸ್ಯೆಗಳು ಕಷ್ಟಗಳು ಇವರಿಗೂ ಹೊರತಾಗಿಲ್ಲ. ಸಾಕಷ್ಟು ಕಷ್ಟಪಟ್ಟು ಇವತ್ತು ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ. ಜೀವನದಲ್ಲಿ ಸಿಹಿ ಹಾಗೂ ಕಹಿಯನ್ನು ಕಂಡ ಸಿಹಿ ಕಹಿ ಚಂದ್ರು ಅವರ ಬದುಕಿನಲ್ಲಿ ಪವಾಡವೊಂದು ನಡೆದಿದ್ದು ಅದನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.ಕೊರೊನಾ ಸಂದರ್ಭದಲ್ಲಿ ಸಿಹಿ ಕಹಿ ಚಂದ್ರು ಅವರ ಜೀವನದಲ್ಲಿ ಸಾಕಷ್ಟು ಆರ್ಥಿಕ ಸಮಸ್ಯೆ ಉಂಟಾಗಿತ್ತು. ಈ ಸಮಸ್ಯೆಯಿಂದಾಗಿ ಚಂದ್ರು ಅವರು ಬೀದಿಗೆ ಬರುವಂತಾಗಿತ್ತು. ಬೊಂಬಾಟ್ ಬೋಜನ ಯಶಸ್ಸಿನ ಕುದುರೆಯನ್ನು ಹತ್ತಿದ್ದ ಚಂದ್ರು ಅವರ ಮೇಲೆ ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ. ಅವರ ಜೀವನದಲ್ಲಿ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾದವು.
ಇನ್ನು ಬೊಂಬಾಟ್ ಬೋಜನ ಕಾರ್ಯಕ್ರಮ ಉತ್ತಮವಾಗಿ ನಡೆಯುತ್ತಿರುವಾಗ ಚಂದ್ರು ಅವರಿಗೆ ಬೊಂಬಾಟ್ ಬೋಜನ' ಕಂಪನಿ ಶುರುಮಾಡಿ ಫುಡ್ ಪ್ರಾಡಕ್ಟ ಮಾರಾಟ ಮಾಡಲು ಪ್ರತಿಯೊಬ್ಬರೂ ಸಲಹೆ ನೀಡಿದ್ದರಂತೆ. ಈ ಸಲಹೆಯಂತೆ ಚಂದ್ರು ಅವರು ಬೊಂಬಾಟ್ ಬೋಜನ ಫುಡ್ ಪ್ರಾಡಕ್ಟ ಕಂಪನಿಯನ್ನು ಶುರು ಮಾಡಿದ್ದರು.ಆದರೆ ಈ ಕಂಪನಿ ಚಂದ್ರು ಅವರ ಜೀವನದಲ್ಲಿ ಮುಳುವಾಗಿ ಹೋಯ್ತು. ಇದರಿಂದಾಗಿ ಚಂದ್ರು ಅವರು 2 ಕೋಟಿ 70 ಲಕ್ಷ ಹಣ ಕಳೆದುಕೊಂಡರು. ಆ ಸಮಯದಲ್ಲಿ ಅವರು ಮಾಡುತ್ತಿದ್ದ ಎರಡು ಸೀರಿಯಲ್‌ಗಳು ನಿಂತು ಹೋದವು. 
ಇನ್ನೇನು ಕೈ ಖಾಲಿಯಾಗಿ ಬೀದಿಗೆ ಬರುವಂತಹ ಸ್ಥಿತಿ ಬಂತು. ಇದರಿಂದಾಗಿ ಒಂದು ಸೈಟ್ ಹಾಗೂ ಮನೆಯನ್ನೂ ಮಾರಿದರು. ವಾಸವಾಗಿದ್ದ ಮನೆಯನ್ನೂ ಅಡವಿಟ್ಟು ಎಲ್ಲಾ ಸಾಲವನ್ನು ತೀರಿಸಿ ಕೆಲಸದಿಂದ ನಿವೃತ್ತಿ ಪಡೆಯುವಷ್ಟು ಚಂದ್ರು ಅವರ ಮನಸ್ಸು ಹಾಳಾಗಿತ್ತು.ಆಗ ಅಲ್ಲೇ ಇದ್ದ ದೇವಸ್ಥಾನಕ್ಕೆ ಹೋಗಿ ದೇವರಿಗೆ ಬೈದರಂತೆ. ನಾನು ಯಾರಿಗೂ ಮೋಸ ಮಾಡಿಲ್ಲ. ಆದರೂ ನನಗೆ ಯಾಕೆ ಈ ಶಿಕ್ಷೆ ಕೊಟ್ಟೆ ದೇವರೇ ಎಂದು ಕೇಳಿಕೊಂಡಿದ್ದರಂತೆ. ಆಗ ಅಲ್ಲಿನ ಆಚಾರ್ಯರು ಸಿಹಿ ಕಹಿ ಚಂದ್ರು ಅವರು ಮನಸ್ಸಿನಲ್ಲಿ ದೇವರಿಗೆ ಹಾಕಿದ್ದ ಪ್ರಶ್ನೆಗಳಿಗೆಲ್ಲಾ ತಾವೇಗಿಯೇ ಬಂದು ಉತ್ತರ ನೀಡಿದ್ದರು. 
ಅಲ್ಲದೆ ಒಂದು ವಾರದಲ್ಲಿ ನೀವು ಕಳೆದುಕೊಂಡ ಹಣ ವಾಪಸ್ ಬರುತ್ತದೆ ಎಂದು ಹೇಳಿದ್ದರಂತೆ.ಹೀಗೆ ಅರ್ಚಕರು ಹೇಳಿದ್ದ ಮರು ದಿನ ಬೆಳಗ್ಗೆ ಬೊಂಬಾಟ್ ಬೋಜನ ಕಾರ್ಯಕ್ರಮ ಮತ್ತೆ ಶುರು ಮಾಡಲು ಕರೆ ಬಂದಿತ್ತಂತೆ. ಅಲ್ಲಿಂದ ಇಲ್ಲಿವರೆಗೂ ಒಂದೇ ಒಂದು ದಿನ ಬಿಡುವಿಲ್ಲದೆ ಸಿಹಿ ಕಹಿ ಚಂದ್ರು ಅವರು ದುಡಿಯುತ್ತಿದ್ದಾರೆ. ಅಷ್ಟೇ ಅಲ್ಲ ಮಾಡಿದ ಸಾಲವನ್ನೆಲ್ಲಾ ತೀರಿಸಿ ಮನೆಯನ್ನೂ ಉಳಿಸಿಕೊಂಡಿದ್ದಾರೆ. ಇದು ಭಗವಂತನ ಲೀಲೆ, ಪವಾಡ ಎಂದು ಸಿಹಿ ಕಹಿ ಚಂದ್ರು ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.