ದಸರಾ ಪೂತಿ೯ ಲೇಡಿ ಆಫೀಸರ್ ಗೆ ಛತ್ರಿ ಹಿಡಿದು ಓಡಾಡಿದ ಪೊ ಲೀಸ್, ಇದು ಅಧಿಕಾರದ ದಪ೯ ಎಂದ ಜನ
Oct 15, 2024, 20:37 IST
|
ಮೈಸೂರು ದಸರಾದ ಜಂಬೂ ಸವಾರಿ ಮೆರವಣಿಗೆಯ ವೈಭವಕ್ಕೆ ತೆರೆ ಬಿದ್ದಿದ್ದು, ಈ ನಡುವೆ ಜಂಬೂ ಸವಾರಿ ವೇಳೆ ಪೊಲೀಸರ ವರ್ತನೆ ವಿರುದ್ಧ ಪತ್ರಕರ್ತರು ಹಾಗೂ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.ಮೈಸೂರು ಅರಮನೆ ಮೈದಾನದಲ್ಲಿ ಹಿರಿಯ ಛಾಯಾಚಿತ್ರ ಪತ್ರಕರ್ತರೊಬ್ಬರ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ್ದು, ಈ ಘಟನೆಗೆ ಮಾಧ್ಯಮ ಸಮುದಾಯ ಆಕ್ರೋಶಕ್ಕೆ ವ್ಯಕ್ತಪಡಿಸಿದೆ.
ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರ ಸಹಿ ಇರುವ ಮಾಧ್ಯಮ ಪಾಸ್‌ಗಳನ್ನು ಪೊಲೀಸರೇ ಪತ್ರಕರ್ತರಿಗೆ ವಿತರಿಸಿದ್ದರೂ, ಪಾಸ್ ಗಳಿದ್ದವರ ಮೇಲೂ ಪೊಲೀಸರು ದರ್ಪ ತೋರಿಸಿದ್ದಾರೆ. ಜಂಬೂ ಸವಾರಿ ವೇಳೆ ಹಲವಾರು ಫೋಟೋ ಜರ್ನಲಿಸ್ಟ್‌ಗಳು, ಪತ್ರಕರ್ತರು, ವಿಡಿಯೋಗ್ರಾಫರ್ ಹಾಗೂ ವರದಿಗಾರರು ಕರ್ತವ್ಯ ನಿರ್ವಹಿಸದಂತ ತಡೆಯೊಡ್ಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸಾಂಸ್ಕೃತಿಕ ಹಬ್ಬದ ಸಂದರ್ಭದಲ್ಲಿ ಪೊಲೀಸರು ತೋರಿದ ವರ್ತನೆ ಇದೀಗ ಟೀಕೆಗೆ ಗುರಿಯಾಗಿದೆ.
ಅಷ್ಟಕ್ಕೂ ಸೀಮಾ ಲಟ್ಕರ್ ಗೆ ಮತ್ತೊಬ್ಬ ಪೋಲಿಸ್ ಅಧಿಕಾರಿ ಮಳೆ ಬಂದಿದ್ದರಿಂದ ಕೊಡೆ ಹಿಡಿದು ನಡೆದಿರೋದು ಭಾರೀ ಟೀಕೆಗೆ ಗುರಿಯಾಗಿದೆ. ಅವರೇ ಕೊಡೆ ಹಿಡಿದು ಕೊಳ್ಳಬಹುದಿತ್ತು. ಇಲ್ಲ ಬೇಡ ಎನ್ನಬಹುದಿತ್ತು.
ಆದರೆ ಅವರು ಕೆಳ ಆಧಿಕಾರಿಗಳ ಮೇಲೆ ದರ್ಪ ತೋರಿದ್ದಾರೆ.ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ವು ಪೊಲೀಸರ ಕ್ರಮವನ್ನು ಕ್ರೂರ ಮತ್ತು ಅನಗತ್ಯ ಎಂದು ಬಣ್ಣಿಸಿದೆ, ಇಂತಹ ನಡವಳಿಕೆಯು ಮಾಧ್ಯಮಗಳಿಗೆ ಅಗೌರವವನ್ನುಂಟುಮಾಡುತ್ತದೆ ಮಾತ್ರವಲ್ಲದೆ ದಸರಾ ಮಹೋತ್ಸವದ ಪ್ರತಿಷ್ಠೆಗೆ ಕಳಂಕ ತಂದಿದೆ ಎಂದು ಹೇಳಿದೆ.
ದಸರಾ ಆಚರಣೆ, ಸಂಭ್ರಮಾಚರಣೆಯನ್ನು ರಾಜ್ಯ ಹಾಗೂ ವಿಶ್ವದಾದ್ಯಂತ ಹೆಸರು ಮಾಡುವಂತೆ ಮಾಡಲು ಮಾಧ್ಯಮಗಳು ತಿಂಗಳುಗಟ್ಟಲೆ ಅವಿರತವಾಗಿ ಕೆಲಸ ಮಾಡುತ್ತಿವೆ. ಆದರೆ, ಅಂತಹ ಮಾಧ್ಯಮಗಳ ಮೇಲೆಯೇ ದರ್ಪ ತೋರುವುದು ಸರಿಯಲ್ಲ. ಫೋಟೋ ಜರ್ನಲಿಸ್ಟ್ ಮೇಲಿನ ದಾಳಿಯು ಇಡೀ ಪತ್ರಕರ್ತ ಸಮುದಾಯದ ಮೇಲಿನ ದಾಳಿಯಾಗಿದೆ ಎಂದು ಎಂಡಿಜೆಎ ತಿಳಿಸಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.