ಮುದ್ದಾದ ಖ್ಯಾತ ನಟಿ ಇ.ಹಲೋಕ, ಇಡೀ ಭಾರತದಲ್ಲಿ ಹೆಚ್ಚಾಯಿತು ಆ.ತಂಕ

 | 
T

ಆಮಿರ್ ಖಾನ್ ನಟನೆಯ ಸೂಪರ್ ಹಿಟ್ ಸಿನಿಮಾ ದಂಗಲ್ನಲ್ಲಿ ಯಂಗ್ ಬಬಿತಾ ಕುಮಾರಿ ಪೋಗಟ್ ಪಾತ್ರ ಮಾಡಿದ್ದ ನಟಿ ಸುಹಾನಿ ಭಟ್ನಾಗರ್ ಅವರು ನಿಧನರಾಗಿದ್ದಾರೆ. ಅವರಿಗೆ 19 ವರ್ಷ ವಯಸ್ಸಾಗಿತ್ತು. ನಿನ್ನೆ ಅವರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.

ಆಮಿರ್ ಖಾನ್ ಪ್ರೊಡಕ್ಷನ್ಸ್ ಅವರು ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸುಹಾನಿ ನಿಧನದ ವಿಷಯ ನಮಗೆ ತುಂಬ ಬೇಸರ ತಂದಿದೆ. ಸುಹಾನಿ ತಾಯಿ ಪೂಜಾ ಅವರಿಗೆ, ಇಡೀ ಕುಟುಂಬಕ್ಕೆ ಸಂತಾಪಗಳು. ಸುಹಾನಿ ಪ್ರತಿಭಾನ್ವಿತ ಹುಡುಗಿ, ಟೀಮ್ ಪ್ಲೇಯರ್ ಕೂಡ ಹೌದು. ಸುಹಾನಿ ಇಲ್ಲದೆ ದಂಗಲ್ ಸಿನಿಮಾ ಅಪೂರ್ಣ. ಸುಹಾನಿ ಸದಾ ನಮ್ಮ ಹೃದಯದಲ್ಲಿ ಇರುತ್ತಾರೆ. 

ಅವಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.ಸುಹಾನಿ ಅವರು ಕೆಲ ದಿನಗಳಿಂದ ದೆಹಲಿಯ AIIMS ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ಮಾತ್ರೆಗಳಿಂದ ರಿಯಾಕ್ಷನ್ ಆಗಿ ಸುಹಾನಿ ಅವರು ಆಸ್ಪತ್ರೆ ಸೇರಿದ್ದರು ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

2016ರಲ್ಲಿ ತೆರೆ ಕಂಡ ದಂಗಲ್ ಸಿನಿಮಾದಲ್ಲಿ ಸುಹಾನಿ ನಟಿಸಿದ್ದರು. ಈ ಚಿತ್ರವನ್ನು ನಿತೀಶ್ ತಿವಾರಿ ಅವರು ನಿರ್ದೇಶನ ಮಾಡಿದ್ದರು. ಈ ಸಿನಿಮಾವನ್ನು ಆಮಿರ್ ಖಾನ್ ಅವರು ನಿರ್ಮಾಣ ಮಾಡಿದ್ದರು. ಆಮಿರ್ ಖಾನ್, ಸಾಕ್ಷಿ ತನ್ವಾರ್, ಫಾತಿಮಾ ಸನಾ ಶೇಖ್, ಝೈರಾ ವಾಸಿಮ್, ಸಾನ್ಯಾ ಮಲ್ಹೋತ್ರ, ಅಪರಶಕ್ತಿ ಖುರಾನಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು.

'ಸತ್ಯಮೇವ ಜಯತೇ' ಎನ್ನುವ ಕಾರ್ಯಕ್ರಮದಲ್ಲಿ ಪೋಗಟ್ ಸಹೋದರಿಯನ್ನು ಆಮಿರ್ ಖಾನ್ ಅವರು ಸಂದರ್ಶನ ಮಾಡಿದ್ದರು. ಆ ನಂತರದಲ್ಲಿ ಸಿನಿಮಾ ಸ್ಕ್ರಿಪ್ಟ್ ರೆಡಿ ಆಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.