ಎರಡು ಮದುವೆ ಆದರೂ ಸುಖ ಸಿಗಲಿಲ್ಲ; ಜೀವನದ ಕಹಿ ಘಟನೆ ಹೇಳಿಕೊಂಡ ಶ್ರು.ತಿ

 | 
Us

ತಮ್ಮ ನೈಜ ಅಭಿನಯದ ಮೂಲಕ ಜನರ ಮನಗೆದ್ದ ನಟಿ ಮಣಿಯರಲ್ಲಿ ಶ್ರುತಿ ಕೂಡಾ ಒಬ್ಬರು.ಕನ್ನಡದ ನಟಿ ಶ್ರುತಿಯ ಜೀವದಲ್ಲಾದ ಕೆಲವು ದುರಂತಗಳಿಗೆಲ್ಲ ಇವರೇ ಕಾರಣ ಎಂದು ಹೇಳುವುದಕ್ಕಾಗುವುದಿಲ್ಲ.. ಎಲ್ಲವನ್ನು ಕಾಲವೇ ನಿರ್ಧರಿಸಿದೆ.. ಆದರೆ ಇವರ ಬದುಕು ಮಾತ್ರ ಬಹುತೇಕರಿಗೆ ಪಾಠ.. ಜೀವನದಲ್ಲಿ ಒಂದೇ ಒಂದು ತಪ್ಪು ಹೆಜ್ಜೆ ಇಟ್ಟರೆ ಬದುಕು ಹೇಗೆಲ್ಲ ಯೂಟರ್ನ್‌ ಪಡೆದುಕೊಳ್ಳುತ್ತೆ ಎನ್ನುವುದಕ್ಕೆ ಇವರ ಬದುಕೇ ಉತ್ತಮ ಉದಾಹರಣೆ.

ಮುಗ್ದ ಅಭಿನಯದ ಮೂಲಕ ಕನ್ನಡಿಗರ ಮನೆ ಮಾತಾದ ಶ್ರುತಿ ಒಂದು ಕಾಲದಲ್ಲಿ ಭಾವನಾತ್ಮಕ ಸಿನಿಮಾಗಳಿಂದ ಸಿಕ್ಕಾಪಟ್ಟೆ ಗ್ಲಾಮರ್‌ ಆಗಿದ್ದವರು ನಟಿ ಶೃತಿ.ಇವರ ಮೊದಲ ಪತಿ ನಿರ್ದೇಶಕ ಎಸ್ ಮಹೇಂದರ್. ಆಗಿನ ಕಾಲದಲ್ಲಿ ಸಾಕಷ್ಟು ಸಾಲು ಸಾಲು ಹಿಟ್‌ ಕೊಟ್ಟ ಈ ಡೈರೆಕ್ಟರ್‌ ತಾಯಿಯಿಲ್ಲದ ತವರು ಸಿನಿಮಾ ಮಾಡುವಾಗ ಹಿರೋಯಿನ್‌ ಆಗಿ ಅವರ ಕಣ್ಣಿಗೆ ಬಿದ್ದಿದ್ದು ನಟಿ ಶೃತಿ.

ಅಲ್ಲಿಂದ ಶುರುವಾದ ಇವರ ಸ್ನೇಹ ಹಲವು ದಿನಗಳ ನಂತರ ಪ್ರೀತಿಯಾಗಿ ಪರಿವರ್ತನೆಯಾಗುತ್ತದೆ. ನಂತರ 1998 ಮದುವೆಯಾಗಿ ಅವರಿಗೆ ಗೌರಿ ಎಂಬ ಮಗಳು ಕೂಡ ಜನಸಿದಳು. ನಟಿ ಶೃತಿ ಹಾಗೂ ನಿರ್ದೇಶಕ ಮಹೇಂದರ್‌ ಹದಿಮೂರು ವರ್ಷಗಳ ಕಾಲ ನೆಮ್ಮದಿಯ ದಾಂಪತ್ಯ ನಡೆಸುತ್ತಾರೆ. ಆದರೆ 2010ರ ನಂತರ ಇವರಿಬ್ಬರ ಸಂಸಾರದಲ್ಲಿ ದೊಡ್ಡ ಬಿರುಗಾಳಿಯೇ ಸೃಷ್ಟಿಯಾಗುತ್ತೆ. ಒಬ್ಬರನ್ನೊಬ್ಬರು ಬಿಟ್ಟರದ ಈ ಜೋಡಿ ದೂರಾಗುವ ಯೋಚನೆ ಮಾಡುತ್ತಾರೆ.

ಇದಕ್ಕೆಲ್ಲ ಕಾರಣ ರಾಜಕೀಯ ಎನ್ನಲಾಗಿದೆ.ಎಂದರೇ ನಿರ್ದೇಶಕ ಮಹೇಂದರ್‌ ಸಿನಿಮಾ ಫೇಮ್‌ನಿಂದ ಪಾಲಿಟಿಕ್ಸ್‌ನಲ್ಲಿಯೂ ಗೆಲ್ಲುತ್ತೆನೆ ಎಂದು ರಾಜಕೀಯ ಪ್ರವೇಶ ಮಾಡಿ ಸೋತಿದ್ದರಿಂದ ಈ ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆದೂರಿ ಡಿವೋರ್ಸ್‌ಗೆ ಕಾರಣವಾಯಿತು ಎಂದು ಹೇಳಲಾಗಿದೆ. ಡಿವೋರ್ಸ್‌ ನಂತರ ನಟಿ ಶೃತಿ ಹಿರಿಯ ಪತ್ರಕರ್ತ ಚಂದ್ರಚೂಡಾ ಅವರನ್ನು ಮದುವೆಯಾಗುತ್ತಾರೆ.

ಈ ವಿಚಾರವಾಗಿ ಸಾಕಷ್ಟು ಟೀಕೆಗಳು ಆಕೆಯ ವಿರುದ್ಧ ಕೇಳಿಬರುತ್ತವೆ. ಆದರೆ ಶೃತಿ ಹಾಗೂ ಚಂದ್ರಚೂಡ್‌ ಇಬ್ಬರೂ ಒಂದು ದಿನವೂ ಚೆನ್ನಾಗಿ ಸಂಸಾರ ಮಾಡದೇ ಮದುವೆಯಾದ ಕೆಲವೇ ದಿನಗಳಲ್ಲಿ ದೂರವಾದರು.ಕೊನೆಗೆ ಶೃತಿ ಈ ಮದುವೆ ಎನ್ನುವ ಬಂಧವೇ ಬೇಡ ಒಬ್ಬಂಟಿ ಜೀವನ ನಡೆಸುವ ನಿರ್ಧಾರಕ್ಕೆ  ಬಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.