ನೇಹಾ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹಿಂದೂ ಯುವತಿ ಮೇಲೆ ಮುಸ್ಲಿಮ್ ಯುವಕನ ಹ.ಲ್ಲೆ

 | 
Yu

ನೇಹಾ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲೂ ಮತ್ತೊಂದು ಯುವತಿ ಮೇಲೆ ಕ್ಷುಲ್ಲಕ ವಿಚಾರಕ್ಕೆ ಯುವಕನೊರ್ವ ಹಲ್ಲೆ ಮಾಡಿದ ಘಟನೆ ಕೇಶ್ವಾಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಹಾಡುತ್ತಿದೆ.

ಇಲ್ಲಿನ ಪೂರ್ವ ಸಂಚಾರಿ ಪೋಲಿಸ್ ಠಾಣೆಯ ಮುಂಭಾಗದಲ್ಲಿನ ಹಣ್ಣಿನ ಅಂಗಡಿಗೆ ಬಂದಿದ್ದ ಯುವತಿ ಹಣ್ಣು ಖರೀದಿಗೆ ಬಂದಿದ್ದ ವೇಳೆ ಅಫ್ತಾಬ್ ಎಂಬ ಯುವಕ ಅವಾಚ್ಯವಾಗಿ ನಿಂದಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಯುವತಿಗೆ ಕುಪಿತಗೊಂಡ ಯುವಕ ಹಲ್ಲೆಗೆ ಮುಂದಾಗಿದ್ದಾನೆ.‌ ಆಗ ಸ್ಥಳದಲ್ಲಿದ್ದ ಜನರು ಹಲ್ಲೇ ಮಾಡುತ್ತಿದ್ದ ಯುವಕನನ್ನು ಹಿಡಿದು ಹೊಡೆದಿದ್ದಾರೆ. 

ಬಳಿಕ ಕೇಶ್ವಾಪುರ ಪೋಲಿಸ್ ಠಾಣೆಗೆ ವಿಷಯ ತಿಳಿಸಿ ಯುವತಿ ಹಾಗೂ ಯುವಕನನ್ನು ಕರೆದೊಯ್ದು, ದೂರು ದಾಖಲಿಸಿದ್ದಾರೆ. ಇನ್ನೊಂದು ಕಡೆಗೆ ಯುವತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಾನು ಮತ್ತೆ ಅಫ್ತಾಬ್ ಸ್ನೇಹಿತರಾಗಿದ್ದೇವು, ಆ ಬಳಿಕ ಕಳೆದ ಕೆಲವು ದಿನಗಳ ಹಿಂದೆ ನಡೆದ ಸ್ನೇಹ ಪ್ರಕರಣವನ್ನು ನೋಡಿ ನಮ್ಮ ಸ್ನೇಹವನ್ನು ಅಂತ್ಯಗೊಳಿಸಲು ನಿರ್ಧಾರ ಮಾಡಿದ್ದೇವು. 

ಅದರಂತೆ ಅಫ್ತಾಬ್ ನೀಡಿದ ಗಿಫ್ಟ್ಗಳನ್ನು ಕೊಟ್ಟು ವಾಪಾಸ್ ಬರುವಾಗ ಅಫ್ತಾಬ್ ಗಿಫ್ಟ್ಗಳಿಗೆ ಬೆಂಕಿ ಹಚ್ಚಿ ಹಲ್ಲೆ ಮಾಡಿದ್ದಾನೆಂದು ತಿಳಿಸಿದ್ದಾರೆ. ಮೊನ್ನೆ ತಾನೆ ನೇಹಾ ಕೊಲೆಯಾಗಿದೆ. ಈಗ ನಡುರಸ್ತೆಯಲ್ಲಿ ಹಲ್ಲೆ ಮಾಡಿದಾತನ ಮೇಲೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಸದ್ಯ ಪೋಲಿಸರು ಈ ಕುರಿತು ತನಿಖೆ ನಡೆಸುತ್ತಿದ್ದು, ಇನ್ನಷ್ಟೇ ಘಟನೆಯ ಸತ್ಯಾಸತ್ಯತೆಯನ್ನು ತಿಳಿಸಬೇಕಿದೆ‌. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.