40ರಲ್ಲೂ ತ್ರಿಶಾ 18 ರಂತೆ ಕಂಗೊಳಿಸಲು ಕಾರಣ ಅವರು 'ಆ ಕೆಲಸ ಮಾಡಲ್ವಂತೆ

 | 
ರಕ

ತ್ರಿಶಾ ಕಳೆದ 21 ವರ್ಷಗಳಿಂದ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ.ತ್ರಿಶಾ ಅವರಿಗೆ ಈಗ 40 ವರ್ಷ. ಆದರೂ ಅವರು ಇಂದಿಗೂ ಅದೇ ಯೌವನ ಮತ್ತು ಸೌಂದರ್ಯದೊಂದಿಗೆ ಅದ್ಭುತವಾಗಿ ಕಾಣಿಸುತ್ತಾರೆ. ಇದಕ್ಕೆ ಕಾರಣ ಅವರ ಆಹಾರ ಪದ್ಧತಿ. ತ್ರಿಶಾ ಚಿತ್ರರಂಗಕ್ಕೆ ಕಾಲಿಟ್ಟಾಗ ಎಷ್ಟು ಚಿಕ್ಕವರಾಗಿದ್ದರೋ, 40 ರ ಯೌವನದಲ್ಲಿಯೂ ಸಹ ಅದನ್ನ ಉಳಿಸಿಕೊಂಡಿದ್ದಾರೆ. 

ಹಲವು ವರ್ಷಗಳು ಕಳೆದರೂ ಅವರ ಯೌವನದ ಗುಟ್ಟು ಅನೇಕರಿಗೆ ತಿಳಿದಿಲ್ಲ. ತಮ್ಮ ಯೌವನ ಕಾಪಾಡಿಕೊಳ್ಳಲು ತ್ರಿಶಾ ಕಟ್ಟುನಿಟ್ಟಾದ ಆಹಾರ ಪದ್ದತಿ ಮತ್ತು ವ್ಯಾಯಾಮದ ನಿಯಮವನ್ನು ಅನುಸರಿಸುತ್ತಾರೆ. ಹೊಳೆಯುವ ಮತ್ತು ಯೌವನದಿಂದ ಕಾಣುವ ಮುಖಕ್ಕೆ ಆರೋಗ್ಯಕರ ಜೀವನಶೈಲಿ ಮುಖ್ಯ ಅವಶ್ಯಕತೆ ಎಂದು ಎಲ್ಲರಿಗೂ ತಿಳಿದಿದೆ. ಇದನ್ನು ತ್ರಿಷಾ ಕೂಡ ಅನುಸರಿಸುತ್ತಿದ್ದಾರೆ.

ಸಿಹಿ ಆಲೂಗಡ್ಡೆ ಸೇವನೆಯು ಚರ್ಮದ ಆರೈಕೆಗೆ ಸಹಕಾರಿ. ಬೀಟಾ ಕ್ಯಾರೋಟಿನ್ ಎಂಬ ಪೋಷಕಾಂಶ ಇದರಲ್ಲಿದೆ. ಇದು ನೈಸರ್ಗಿಕ ಸನ್‌ಬ್ಲಾಕ್ ಆಗಿ ಕೆಲಸ ಮಾಡುತ್ತದೆ. ಜೊತೆಗೆ ಚರ್ಮದ ಸಮಸ್ಯೆ ಹೋಗಲಾಡಿಸುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಟೊಮ್ಯಾಟೊ ಇದು ಚರ್ಮದ ಆರೋಗ್ಯ ಕಾಪಾಡುತ್ತದೆ. ಇದರಲ್ಲಿರುವ ಲೈಕೋಪೀನ್ ಮತ್ತು ವಿಟಮಿನ್ ಸಿ ಸೇರಿದಂತೆ ಮುಖ್ಯ ಕ್ಯಾರೊಟಿನಾಯ್ಡ್ಗಳು ಚರ್ಮವನ್ನು ಯುವಿ ಕಿರಣಗಳ ಹಾನಿಯಿಂದ ರಕ್ಷಿಸುತ್ತದೆ. ಸುಕ್ಕು, ಮೊಡವೆ, ನೆರಿಗೆ ಸಮಸ್ಯೆ ತಡೆಯುತ್ತದೆ. ಚರ್ಮವನ್ನು ಸಂರಕ್ಷಿಸಲು ಉತ್ತಮ ಆಹಾರವಾಗಿದೆ.

ಹಾಗಾಗಿ ಇಂತಹ ತರಕಾರಿ ಹಣ್ಣುಗಳನ್ನು ಹೆಚ್ಚೆಚ್ಚು ಸೇವಿಸುತ್ತಾರೆ.ತ್ರಿಶಾ ಯಾವುದೇ ಕಾರಣಕ್ಕೂ ಫಾಸ್ಟ್ ಫುಡ್ ತಿನ್ನುವುದಿಲ್ಲ. ಎಣ್ಣೆಯಲ್ಲಿ ಬೇಯಿಸಿದ ಆಹಾರಗಳು ಅಥವಾ ಹೆಚ್ಚಿನ ಕೊಬ್ಬಿನ ಆಹಾರಗಳನ್ನು ಅವರು ಮುಟ್ಟುವುದಿಲ್ಲ. ನಟಿ ತ್ರಿಶಾ ಪ್ರತಿದಿನ ಬೆಳಗ್ಗೆ ಎದ್ದ ನಂತರ ಗ್ರೀನ್ ಟೀ ಇಲ್ಲವೆ ಶುಂಠಿ ಮತ್ತು ನಿಂಬೆ ರಸ ಬೆರೆಸಿದ ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. 

ಅಲ್ಲದೆ, ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳನ್ನು ತಿನ್ನುತ್ತಾರೆ. ಮತ್ತೂ ನಿಯಮಿತ ವ್ಯಾಯಾಮ ಕೂಡ ಮಾಡಿ ಫಿಟ್ ಆಂಡ್ ಫೈನ್ ಆಗಿ ಕಾಣಿಸಿಕೊಳ್ಳುತ್ತಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.