ಇವತ್ತಿಗೂ ಮೇಘನಾ ಚಿರು ನೆನಪಲ್ಲಿ ಕಣ್ಣೀ ರು; ಎರಡನೇ ಮದುವೆ ಮಾಡಿದರೆ ಸರಿ ಹೋಗಬಹುದು ಎಂದ ಪೋಷಕರು

 | 
Guu

ಬದುಕು ಪಾಠ ಕಲಿಸುತ್ತದೆ ನಾವು ಕಲಿಯಲೇ ಬೇಕು ಎಂದು 
ಕನ್ನಡ ಚಿತ್ರರಂಗದ ಅದ್ಭುತ ನಟಿ ಪ್ರಮೀಳಾ ಜೋಷಾಯ್ ಹೇಳಿಕೊಂಡಿದ್ದಾರೆ. ಹೌದು ಅವರು ಮತ್ತು ಪುತ್ರಿ ಮೇಘನಾ ರಾಜ್ ಇತ್ತೀಚಿಗೆ ತಮಿಳು ಯುಟ್ಯೂಬ್ ಚಾನೆಲ್‌ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ, ಫ್ಯಾಮಿಲಿ, ಮನೆ ಮತ್ತು ಜವಾಬ್ದಾರಿಗಳ ಬಗ್ಗೆ ಚರ್ಚೆ ಮಾಡುವಾಗ ಅಳಿಯನನ್ನು ನೆನಪಿಸಿಕೊಂಡು ಪ್ರಮೀಳಾ ಭಾವುಕರಾಗಿದ್ದಾರೆ.

ನನ್ನ ಮಗಳು ತಾಯಿ ಆಗುತ್ತಿರುವ ವಿಚಾರ ಕೇಳಿ ಖುಷಿ ಆಯ್ತು ಆದರೆ ಅದೇ ಸಮಯಕ್ಕೆ ನೋವು ಕೂಡ ಇತ್ತು. ಮುಂದಕ್ಕೆ ಜೀವನ ಹೇಗೆ ಎಂಬ ಯೋಚನೆ ಬಂತು. ಎದುರಿಸಲು ತುಂಬಾ ಕಷ್ಟವಾಗಿತ್ತು ಈಗ ಧೈರ್ಯದಿಂದ ಫೇಸ್‌ ಮಾಡಿದ್ದೀವಿ ಆದರೂ ನೆನಪು ಬಂದಾಗ ನೋವಾಗುತ್ತದೆ ಕಷ್ಟವಾಗುತ್ತದೆ. ಆಕೆ ಪ್ರೆಗ್ನೆಂಟ್ ಆಗಿದ್ದ ಕಾರಣ ನೆನಪು ಜಾಸ್ತಿನೇ ಬರುತ್ತದೆ ಆದರೆ ಆಕೆ ಗಟ್ಟಿಯಾಗಿ ನಿಂತು ಎದುರಿಸಿದ್ದಾರೆ ಏನೇ ನೋವಿದ್ದರೂ ನಮ್ಮ ಜೊತೆ ಹಂಚಿಕೊಂಡಿಲ್ಲ ಎಂದು ಪ್ರಮೀಳಾ ಜೋಷಾಯ್ ಮಾತನಾಡಿದ್ದಾರೆ.  

ಆಕೆ ಮುಂದೆ ನಾವು ಸ್ಟ್ರಾಂಗ್ ಆಗಿ ಇರಬೇಕು ನಾವು ಬೇಸರ ಮಾಡಿಕೊಳ್ಳುವುದು ಅಥವಾ ಅಳುವುದು ಮಾಡಬಾರದು ಎಂದು ಸುಂದರ್ ರಾಜ್ ಹೇಳುತ್ತಿದ್ದರು. ಮೊದಲು ನಾನು ತುಂಬಾ ಸ್ಟ್ರಾಂಗ್ ಆಗಿರುವ ವ್ಯಕ್ತಿ ಆಗಿದ್ದ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಆದರೆ ಈಗ ಆ ಶಕ್ತಿ ಎಲ್ಲಿ ಹೋಗಿದೆ ಗೊತ್ತಿಲ್ಲ ಎಂದು ಪ್ರಮೀಳಾ ಹೇಳಿದ್ದಾರೆ. ರಾಯನ್ ಹುಟ್ಟಿದಾಗ ಮೊದಲು ಎತ್ತಿಕೊಂಡಿದ್ದು. ಆಪರೇಷನ್‌ ರೂಮ್‌ನಲ್ಲಿ ಮೇಘನಾ ಜೊತೆ ನಿಂತುಕೊಂಡಿದ್ದೆ ಆಗ ತುಂಬಾ ಖುಷಿ ಆಯ್ತು. 

ಮಗುವನ್ನು ಕ್ಲೀನ್ ಕೂಡ ಮಾಡಿರಲಿಲ್ಲ ಅಷ್ಟು ಬೇಗ ಎತ್ತುಕೊಂಡು ಮುದ್ದಾಡಿದೆ. ಮೊಮ್ಮಗ ರಾಯನ್ ಸೇಮ್ ಚಿರು ರೀತಿ ಇದ್ದಾನೆ. ರಾಯನ್ ನಡೆಯುವ ಸ್ಟೈಲ್ ಕೂಡ ಚಿರು ರೀತಿ, ರಾಯನ್ ಮಾತನಾಡುವ ಸ್ಟೈಲ್, ನೋಡಲು ಇರುವುದು.ಪ್ರತಿಯೊಂದು ಚಿರು ರೀತಿ. ಕಣ್ಣು ಮಾತ್ರ ನನ್ನ ಮಗಳ ರೀತಿ ಇರುವುದು. ಡೈಲಾಗ್ ಹೇಳುವುದಾಗಲಿ ಅಥವಾ ಜೀನ್ಸ್‌ ಧರಿಸಿ ನಡೆದುಕೊಂಡು ಬರುವುದನ್ನು ನೋಡಿದಾಗ ವಾ! ಚಿರುನೇ ಬಂದಿದ್ದಾನೆ ಅನಿಸುತ್ತದೆ. ಅವನಲ್ಲಿ ಸಂಪೂರ್ಣವಾಗಿ ಚಿರು ಇದ್ದಾನೆ ಎಂದಿದ್ದಾರೆ ಪ್ರಮೀಳಾ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.