ನಾನು ಕಪ್ಪು ಎಂದು ಎಲ್ಲರೂ ಅಣಕ ಮಾಡುತ್ತಾರೆ; ಆದರೆ ನನ್ನ ಮೊಮ್ಮಗ ಮಾತ್ರ ಹಾಲಿನಂತೆ ಬಿಳಿಯಾಗಿದ್ದಾನೆ

 | 
Ju

ಚಿತ್ರರಂಗದಲ್ಲಿ ಬಾಡಿ ಶೇಮಿಂಗ್ ಎನ್ನುವುದು ಇಂದು ನಿನ್ನೆಯದಲ್ಲ. ಸಿನಿಮಾ ನಟ, ನಟಿಯರು ಕೂಡ ಮೈಬಣ್ಣದ ಕಾರಣಕ್ಕೂ, ದಪ್ಪ, ಸಣ್ಣ ಎನ್ನುವ ಕಾರಣಕ್ಕೋ ಮೂದಲಿಕೆ ಎದುರಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಆ ಪ್ರಮಾಣ ಕೊಂಚ ಕಮ್ಮಿ ಆಗಿರಬಹುದು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅದು ಹೆಚ್ಚಾಗುತ್ತಿದೆ. ಕೊಂಚ ದಪ್ಪಗಾದ್ರು ದಪ್ಪ ಎನ್ನೋದು, ತೆಳ್ಳಗೆ ಅನ್ನೋದು ಕಪ್ಪು, ಬಿಳಿ ಹೀಗೆ ಹೇಳೋದು ಸಾಮಾನ್ಯವಾಗಿದೆ.

ನಟ  ಜಗ್ಗೇಶ್ ತಮ್ಮ ಕಪ್ಪು ಮೈಬಣ್ಣದ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಆ ಕಾರಣಕ್ಕೆ ಅಣಕ ಎದುರಿಸಿರುವ ಬಗ್ಗೆ ಹೇಳಿದ್ದಾರೆ. ಕೆಲವೊಮ್ಮೆ ಅದನ್ನೇ ತಮಾಷೆಯಾಗಿ ಹೇಳಿಕೊಂಡು ನಕ್ಕಿದ್ದಾರೆ, ನಗಿಸಿದ್ದಾರೆ. ಇದೇ ವಿಚಾರದ ಬಗ್ಗೆ ಅವರು ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ. ಅದಕ್ಕೆ ಕಾರಣವೂ ಇದೆ. ಜೊತೆಗೆ ಒಂದು ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ ತಮ್ಮ ಬಳಿ ಇರುವ ಒಂದು ಅಮೂಲ್ಯವಾದ ವಸ್ತು ಬಗ್ಗೆಯೂ ಮಾತನಾಡಿದ್ದಾರೆ.

ನನ್ನ ಕಪ್ಪು ಎಂದು ಅಣಕ ಮಾಡುತ್ತಿದ್ದರು ಬಾಲ್ಯದಲ್ಲಿ ಎಲ್ಲರು.ಬಹಳ ಸಿಟ್ಟು ಬರುತ್ತಿತ್ತು ನನಗಾಗ ಬೆಳ್ಳಗಾಗಲು ಅನೇಕ ಕೆಟ್ಟ ಪ್ರಯತ್ನ ಮಾಡಿದ್ದುಂಟು ಯವ್ವನದಲ್ಲಿ. ನಟನಾದ ಮೇಲೆ ನನ್ನ maxfactor makeup ಪ್ರಯೋಗ ಮಾಡಿ ನೋಡಿದ್ದಾರೆ .ಅಂಬರೀಶ್‌ರವರು ರಜನಿ ಯವರ, ವಿಜಯಕಾಂತ್,  ಶಿವಣ್ಣ, ನಾನು ಬಳಸುತ್ತಿದ್ದ pancake ಇಂದು ವಿಶ್ವದಲ್ಲಿ ಮರೆಯಾದ pancake ಆದರೆ ನನ್ನ ಅದೃಷ್ಟ ಅದು ನನ್ನ ಬಳಿ ಇನ್ನು 50ಸಿನಿಮಾಗೆ ಸಾಕಾಗುವ ಪ್ಟಿದೆ.

ಆ pancake ಅನೇಕರು ಕೇಳಿದರು. ನಾ ನೀಡುವುದಿಲ್ಲಾ. ಕಾರಣ ಅದರ ಮೇಲಿನ ವಿಪರೀತ ಪ್ರೀತಿ ಹಾಗು ಭಕ್ತಿ ಹಾಗು ಎಲ್ಲು ಸಿಗದು. ಅದನ್ನು ಹಚ್ಚಿದರೆ ನನ್ನ ಕಪ್ಪು ಅಂದವರು ಮೌನವಾಗುತ್ತಾರೆ. ಇದನ್ನು ಬಳಸುವಾಗ ಅಯ್ಯೋ ನಾನು ನಿಜವಾಗಲು ಈ ಬಣ್ಣ ಇದ್ದಿದ್ದರೆ ಎನ್ನಿಸುತ್ತದೆ. ಆದರೆ ನನ್ನ ಮೊಮ್ಮಗ ಅರ್ಜುನ ಯಾವ pancake ಬಳಸದಂತೆ ಬಣ್ಣ ಹಚ್ಚಿ ಬಂದಿದ್ದಾನೆ ಭೂಮಿಗೆ. ಇಷ್ಟು ಹೇಳಲು ಕಾರಣ ಇಂದು ಇವನು 9 ವರ್ಷಕ್ಕೆ ಕಾಲಿಟ್ಟಿದ್ದಾನೆ. ಅಂದರೆ ಅವನ ಹುಟ್ಟುಹಬ್ಬ. ಹುಟ್ಟುಹಬ್ಬದ ಶುಭಾಶಯಗಳು ಕಂದ. ದೇವರು ಒಳ್ಳೆಯದು ಮಾಡಲಿ ಎಂದು ಬರೆದುಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.