ಬಿಗ್ ಬಾಸ್ ಮನೆಯಲ್ಲಿ ಮಿತಿಮೀರಿದ ರಾತ್ರಿ ಆಟ, ಪ್ರೇಕ್ಷಕರಿಂದ ಚೀಮಾರಿ

ಬಿಗ್‌ಬಾಸ್ ಭಾಷೆ ಯಾವುದೇ ಇರಲಿ ಅಲ್ಲಿ ನಡೆಯುವುದೆಲ್ಲವೂ ಹೈಡ್ರಾಮಾಗಳೇ ಎನ್ನುವುದು ಬಹುತೇಕರ ಅಭಿಪ್ರಾಯ. ಇಲ್ಲಿ ಏನೇ ನಡೆದರೂ, ಯಾವುದೇ ಕೃತ್ಯ ಜರುಗಿದರೂ ಅದು ಎಲ್ಲವೂ ಅಚಾನಕ್ ಆಗಿ ನಡೆಯುವಂಥದ್ದು ಎಂದು ಬಿಗ್‌ಬಾಸ್ ಪ್ರಿಯರೆಲ್ಲಾ ಕಣ್ಕಣ್ ಬಿಟ್ಟು ನೋಡುತ್ತಿದ್ದರೂ, ಅದರಲ್ಲಿ ನಡೆಯುವ ಘಟನೆಗಳೆಲ್ಲವೂ ಸ್ಕ್ರಿಪ್ಟೆಡ್ ಅಂದರೆ ಹೇಳಿ ಮಾಡಿಸಿರುವುದು ಎಂಬುದಾಗಿ ಬಿಗ್‌ಬಾಸ್ ಮನೆಯಿಂದ ಈ ಹಿಂದೆ ಹೊರಬಂದಿರುವ ಹಲವು ಸ್ಪರ್ಧಿಗಳು ಹೇಳಿದ್ದುಂಟು.
ಇತರೆ ಭಾಷೆಗಳ ಬಿಗ್‌ಬಾಸ್‌ನಲ್ಲಿ ಆಟಗಳು, ಮನೆಯವರ ಪರಸ್ಪರ ಸಂಬಂಧ, ಜಗಳಗಳಿಗೆ ಪ್ರಾಮುಖ್ಯತೆ ಇದ್ದರೆ ಹಿಂದಿ ಬಿಗ್‌ಬಾಸ್ ನಲ್ಲಿ ಗ್ಲಾಮರ್ ಗೆ ಹೆಚ್ಚಿನ ಪ್ರಾಧಾನ್ಯತೆ.ಸಲ್ಮಾನ್ ಖಾನ್ ನಡೆಸಿಕೊಡುವ ಈ ಶೋ ನಲ್ಲಿ ಗ್ಲಾಮರ್‌ಗೆ ವಿಶೇಷ ಆದ್ಯತೆ ನೀಡುತ್ತಾರೆ ಬಿಗ್‌ಬಾಸ್ ಆಯೋಜಕರು.
ಈ ಹಿಂದಿನ ಬಿಗ್ ಬಾಸ್ ಸಂಚಿಕೆಯಲ್ಲಿ ಅಂತರರಾಷ್ಟ್ರೀಯ ಗ್ಲಾಮರ್ ತಾರೆ ಪಮೇಲಾ ಆಂಡರ್ಸನ್ ಅನ್ನು ಕರೆಸಿ ಬಿಗ್‌ಬಾಸ್ ಮನೆಯಲ್ಲಿ ಕುಣಿಸಿದ್ದರು ಒಮ್ಮೆ. ಮತ್ತೊಮ್ಮೆ ನೀಲಿಚಿತ್ರ ತಾರೆ ಸನ್ನಿ ಲಿಯೋನ್ ಮನೆಯೊಳಗೆ ಕರೆಸಿ ಪೋಲ್ ಡಾನ್ಸ್ ಮಾಡಿಸಿದ್ದರು.ಈಗ ಮತ್ತೆ ಇಂಥಹುದೇ ರೊಮ್ಯಾಂಟಿಕ್ ಆಂಗಲ್ ತರಲು ಹೋಗಿ ನೆಟ್ಟಿಗರಿಂದ ಸಖತ್ ಆಗಿ ಉಗಿಸಿಕೊಂಡಿದ್ದಾರೆ .
ಬಿಗ್ ಬಾಸ್ 17 ಸ್ಪರ್ಧಿಗಳಾದ ಇಷಾ ಮಾಲವ್ಯ ಹಾಗೂ ಸಮರ್ಥ್ ಅವರ ಅನೇಕ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇಶಾ ಮತ್ತು ಸಮರ್ಥ್ ಅವರ ರೊಮ್ಯಾನ್ಸ್ ನೋಡಿ ಪ್ರೇಕ್ಷಕರು ಉಫ್ ಎನ್ನುತ್ತಿದ್ದಾರೆ. ಇವರ ರೊಮ್ಯಾನ್ಸ್ ಮಿತಿ ಮೀರುತ್ತಿದ್ದು, ಕ್ಯಾಮೆರಾ ಎದುರೇ ಅಸಭ್ಯ ವರ್ತನೆ ಮಾಡುತ್ತಿರುವುದು ವೀಕ್ಷಕರಲ್ಲಿ ಸಂದೇಹ ಮೂಡಿಸಿದೆ. ಜನರು ತಮ್ಮನ್ನು ನೋಡುತ್ತಿದ್ದರೂ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದರೆ ಇದು ಅವರಿಗೆ ಮುಂಚೆಯೇ ಹೇಳಿಕೊಡಲಾಗುತ್ತದೆಯೆ? ಟಿಆರ್ಪಿಗೋಸ್ಕರ ಬಿಗ್‌ಬಾಸ್ ಅಶ್ಲೀಲತೆಯನ್ನು ಪ್ರಚೋದಿಸುತ್ತಿದೆಯೇ ಎಂದು ನೆಟ್ಟಿಗರು ಈ ವಿಡಿಯೋ ನೋಡಿ ಪ್ರಶ್ನಿಸುತ್ತಿದ್ದಾರೆ.
ಅಸಲಿಗೆ ವೈರಲ್ ಆಗಿರುವ ಈ ವಿಡಿಯೋದಲ್ಲಿ ಬಿಗ್‌ಬಾಸ್ ಮನೆಯಲ್ಲಿರುವ ಗಾರ್ಡನ್ನಲ್ಲಿ ಇಶಾ ಮತ್ತು ಸಮರ್ಥ್ ಇಬ್ಬರು ಮಲಗಿಕೊಂಡು ಮಾತನಾಡುತ್ತಿದ್ದಾರೆ. ಇಶಾ ಸ್ವಲ್ಪ ಅಸಹ್ಯ ರೀತಿಯಲ್ಲಿಯೇ ಮಲಗಿದ್ದಾರೆ. ಈ ವೇಳೆ ಇಶಾ ಅವರ ಕೆನ್ನೆಗೆ ಸಮರ್ಥ ಕಿಸ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಿಸ್ ಮಾಡಿದ್ದಷ್ಟೇ ಅಲ್ಲ, ಇದು ಇನ್ನೂ ಮುಂದುವರೆದಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.