FacKCheck:ಗ್ಯಾಸ್ ಬೆಲೆಯಲ್ಲಿ ಬಾರಿ ಇಳಿಕೆ, ದೀಪಾವಳಿ ಮುನ್ನವೇ ಸಿಹುಸುದ್ದಿ ಅಸಲಿಯತ್ತು

 | 
ಗ್ಯಾಸ್

ದೀಪಾವಳಿ ಹಬ್ಬದ ಸಂಭ್ರಮಕ್ಕೂ ಮುನ್ನ ದೇಶದಾದ್ಯಂತ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಂತಸದ ಸುದ್ದಿ ಬಂದಿದೆ. ಅಡುಗೆ ಅನಿಲದ ಬೆಲೆಯಲ್ಲಿ ಇಳಿಕೆ ಸಾಧ್ಯತೆ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ. ಈ ಬದಲಾವಣೆಯಿಂದ ಮನೆಮಂದಿಯ ಖರ್ಚು ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ನಿರೀಕ್ಷೆ ಇದೆ.

ಭಾರತ ಸರ್ಕಾರದ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿಗಳು ಅಮೆರಿಕಾದಿಂದ ದೀರ್ಘಾವಧಿಯ ಎಲ್‌ಪಿಜಿ ಪೂರೈಕೆಯ ಒಪ್ಪಂದಕ್ಕೆ ಮುಂದಾಗಿವೆ. ಈ ಯೋಜನೆಯಡಿ 2026ರೊಳಗೆ ಅಮೆರಿಕಾದಿಂದ ಮೂರು ದೊಡ್ಡ ಎಲ್‌ಪಿಜಿ ವಾಹಕಗಳನ್ನು ಖರೀದಿಸುವ ಯೋಜನೆ ಇದೆ. ದೇಶದಾದ್ಯಂತ ಸುಮಾರು 331 ಮಿಲಿಯನ್ ಗ್ರಾಹಕರಿಗೆ ಅಡುಗೆ ಅನಿಲ ಪೂರೈಸುವ ಈ ಸಂಸ್ಥೆಗಳು ಈಗಾಗಲೇ ಮಧ್ಯಪ್ರಾಚ್ಯ ದೇಶಗಳಿಂದ ಆಮದು ಮಾಡುತ್ತಿವೆ.

ಅಮೆರಿಕಾ–ಚೀನಾ ವ್ಯಾಪಾರ ವಿವಾದದ ಹಿನ್ನೆಲೆಯಲ್ಲಿ ಭಾರತಕ್ಕೆ ಹೊಸ ಅವಕಾಶಗಳು ಸಿಕ್ಕಿವೆ. ಚೀನಾ ಅಮೆರಿಕಾದಿಂದ ಎಲ್‌ಪಿಜಿ ಆಮದು ಕಡಿಮೆ ಮಾಡಿದ ಕಾರಣ, ಭಾರತವು ಅದರಿಂದ ಲಾಭ ಪಡೆಯಲು ಮುಂದಾಗಿದೆ. ಇದರ ಪರಿಣಾಮವಾಗಿ ಮಧ್ಯಪ್ರಾಚ್ಯ ಉತ್ಪಾದಕರು ಸ್ಪರ್ಧೆ ಹೆಚ್ಚುವ ಭಯದಿಂದ ಬೆಲೆ ಇಳಿಕೆ ಮಾಡುವ ಸಾಧ್ಯತೆ ಇದೆ.

ತಜ್ಞರ ಪ್ರಕಾರ, ಅಮೆರಿಕಾದಿಂದ ನೇರ ಹಾಗೂ ದೀರ್ಘಾವಧಿಯ ಎಲ್‌ಪಿಜಿ ಪೂರೈಕೆ ಆರಂಭವಾದರೆ, ಭಾರತದಲ್ಲಿ ಸರಬರಾಜು ಸ್ಥಿರವಾಗುತ್ತದೆ ಮತ್ತು ಬೆಲೆಗಳು ಕೂಡ ಸ್ಥಿರ ಅಥವಾ ಇಳಿಕೆಯತ್ತ ಸಾಗಬಹುದು. ಹೀಗಾಗಿ ದೀಪಾವಳಿಯ ಹೊತ್ತಿಗೆ ಗ್ರಾಹಕರು ಅಡುಗೆ ಅನಿಲದ ಬೆಲೆ ಇಳಿಕೆಯ ರೂಪದಲ್ಲಿ ಉಡುಗೊರೆಯನ್ನು ಪಡೆಯಬಹುದು.ಹಳ್ಳಿಗಳಿಂದ ನಗರಗಳವರೆಗಿನ ಲಕ್ಷಾಂತರ ಮನೆಮಂದಿಗೆ ನಿಜವಾದ ದೀಪಾವಳಿ ಬಂಪರ್ ಗಿಫ್ಟ್ ಸಿಗುವ ಸಾಧ್ಯತೆ ಇದೆ.