Fact Check; ಅಯೋಧ್ಯೆ ಶ್ರೀರಾಮನ ಕಣ್ಣುಗಳಲ್ಲಿ ಚಮತ್ಕಾರ, ಭಕ್ತರಲ್ಲಿ ಕುತೂಹಲ ಕೆರಳಿಸುವಂತೆ ಮಾಡಿದ ಘಟನೆ

 | 
Hd

ಸಹಸ್ರಾರು ಹಿಂದೂಗಳ ಕನಸು ನಿನ್ನೆ ನನಸಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಕಾರ್ಯಕ್ರಮವು ಸಾಂಗವಾಗಿ ನೆರವೇರಿದೆ. ಸೋಮವಾರದಂದು ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ  ನಡೆದಿದ್ದು, ಬಾಲ ರಾಮನ ವಿಗ್ರಹವನ್ನು ಕಂಡು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ನಾವೇ ಧನ್ಯರು ಎಂದು ರಾಮ ಭಕ್ತರು ಭಾವುಕರಾಗಿದ್ದಾರೆ.  

ಇದೀಗ ಬಾಲ ರಾಮನ ಸುಂದರ ವಿಗ್ರಹದ ಜೊತೆಗೆ, ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲರಾಮನ ವಿಗ್ರಹವು ಕಣ್ಣು ಮಿಟುಕಿಸುತ್ತಾ ಮುಗುಳ್ನಗೆ ಬೀರುತ್ತಿರುವ  ಎ.ಐ ಜನರೇಟೆಡ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಂತೂ ಎಲ್ಲಿ ನೋಡಿದರೂ ಬಾಲ ರಾಮನ ವಿಗ್ರಹದ ಸುಂದರ ಪೋಟೋಗಳೇ ಹರಿದಾಡುತ್ತಿವೆ. 

ಈ ನಡುವೆ ಕಲಾವಿದರೊಬ್ಬರು ಎ.ಐ ತಂತ್ರಜ್ಞಾನವನ್ನು ಬಳಸಿ ತಯಾರಿಸಿದಂತಹ ಬಾಲ ರಾಮನ ಮೂರ್ತಿಯ  ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಲಾವಿದನ ಕಲ್ಪನೆಯಲ್ಲಿ ಮೂಡಿದ ನಗು ಮೊಗದ ಬಾಲ ರಾಮನನ್ನು ಕಂಡು ನೆಟ್ಟಿಗರು  ಮನಸೋತಿದ್ದಾರೆ. ಕೆಟ್ಟದ್ದಕ್ಕೆ ಬಳಸಬೇಡಿ ಒಳ್ಳೆಯದಕ್ಕೆ ಬಳಸಿ ಇಂತಹ ಉತ್ತಮ ರಚನೆ ನಿಮ್ಮಿಂದ ಆಗಲಿ ಎಂದು ಭಕ್ತಾಧಿಗಳು ಹೇಳಿದ್ದಾರೆ.

@happymi ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಕಲಾವಿದರೊಬ್ಬರು ಎ.ಐ ತಂತ್ರಜ್ಞಾನವನ್ನು ಬಳಸಿ ತಯಾರಿಸಿದಂತ ರಾಮ ಲಲ್ಲಾ ಮೂರ್ತಿಯು ಸುಂದರ ವಿಡಿಯೋವೊಂದನ್ನು ಕಾಣಬಹುದು. ವೈರಲ್ ವಿಡಿಯೋದಲ್ಲಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಂತಹ ಬಾಲ ರಾಮನ ಮೂರ್ತಿಯು ಕಣ್ಣು ಮಿಟುಕಿಸುತ್ತಾ, ಮುಗುಳ್ನಗೆ ಬೀರುತ್ತಿರುವ ಮನಮೋಹಕ ದೃಶ್ಯವನ್ನು ಕಾಣಬಹುದು. 

ಬಾಲ ರಾಮನ ಈ ಸುಂದರ  ವಿಡಿಯೋವನ್ನು ಕಂಡು ಮೈ ರೋಮಾಂಚನಗೊಂಡಿತು ಎಂದು ನೆಟ್ಟಿಗರು  ಹೇಳಿದ್ದಾರೆ. ರಾಮನೇ ಎದ್ದು ಬಂದಂತಿದೆ ಎಂದು ಇನ್ನೂ ಕೆಲವರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.