Fact check; ಕನ್ನಡ ಬಿಗ್ ಬಾಸ್ ಶಶಿಗೆ ಏನಾಯಿತು, ಸಿನಿಮಾ ಶೂಟಿಂಗ್ ವೇಳೆ ಎಡವಟ್ಟು
ಬಿಗ್ಬಾಸ್ ವಿಜೇತ, ಹಾಗೂ ಮಾಡರ್ನ್ ರೈತ ಶಶಿ ಕುಮಾರ್ ಇನ್ನಿಲ್ಲ ಎಂದು ಕೆಲವು ಸುದ್ಧಿ ಮಾದ್ಯಮದಲ್ಲಿ ಇತ್ತೀಚಿಗಷ್ಟೇ ಪ್ರಸಾರವಾಗಿತ್ತು . ಆದರೆ ಅದು ನಿಜವಲ್ಲ ಹೌದು ಬಿಗ್‌ಬಾಸ್ ಕನ್ನಡ ಸೀಸನ್ 6ರ ವಿಜೇತ̧, ಮಾರ್ಡನ್ ರೈತ ಶಶಿ ಕುಮಾರ್ ಸದ್ಯ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಬಹಳ ಹಿಂದೆ ಶುರುವಾಗಿದ್ದ ಮೆಹಬೂಬ ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗುತ್ತಿದೆ.
ಇತ್ತೀಚೆಗೆ ನಟ ಶಶಿ ಸಿನಿಮಾ ಚಿತ್ರೀಕರಣ ವೇಳೆ ಸಂಭವಿಸಿದ ಅವಘಡದಲ್ಲಿ ಗಾಯಗೊಂಡಿದ್ದರು. ಇದಕ್ಕೆ ಸಂಭವಿಸಿದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಅದರ ಹೊರತಾಗಿ ಅವರು ಆರೋಗ್ಯವಾಗಿದ್ದಾರೆ ಎನ್ನಲಾಗುತ್ತಿದೆ.ಹೌದು.. ಮೆಹಬೂಬ ಸಿನಿಮಾ ಚಿತ್ರೀಕರಣದ ವೇಳೆ ಶಶಿ ಬಿಲ್ಡಿಂಗ್ ಮೇಲೆ ಏರುವ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದ್ದು, ಆಗ ಆಯತಪ್ಪಿ ಕಟ್ಟದ ಏರುತ್ತಿರುವಾಗ ಕೆಳಗೆ ಬಿದ್ದಿದ್ದಾರೆ.
ಈ ವೇಳೆ ಕೊಂಚ ಪೆಟ್ಟಾಗಿದ್ದು ಕಾಲು ಉಳುಕಿತ್ತು. ನಟ ಶಶಿ 3 ವಾರಗಳ ಹಿಂದೆ ಮೈಸೂರಿನ ಕಾಲೇಜ್‌ವೊಂದರಲ್ಲಿ ಮೆಹಬೂಬ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಆ ಘಟನೆ ನಡೀತು. ಬಳಿಕ ಚಿಕಿತ್ಸೆ ಪಡೆದುಕೊಂಡೆ. ಈಗ ಆರಾಮಾಗಿ ಇದ್ದೀನಿ. ಕೆಳಗೆ ಬೆಡ್ ಹಾಕಿದ್ದರಿಂದ ಹೆಚ್ಚು ಪೆಟ್ಟು ಆಗಲಿಲ್ಲ ಎಂದುಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಬಿಗ್‌ಬಾಸ್ ಸೀಸನ್ 6 ರಲ್ಲಿ ಮಾಡ್ರನ್ ರೈತ ಎಂದೇ ಹೆಸರು ಮಾಡಿದ್ದ ಶಶಿ, ಆ ಸೀಸನ್ ವಿಜೇತರಾಗಿ ಹೊರಹೊಮ್ಮಿದ್ದರು. ಶಶಿ ಕೃಷಿಯ ಜೊತೆಗೆ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದು, ಇವರು ಮೆಹಬೂಬ ಚಿತ್ರದ ಮೂಲಕ ಹೀರೊ ಆಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಸ್ವತಃ ಶಶಿ ಈ ಸಿನಿಮಾವನ್ನು ನಿರ್ಮಾಣ ಮಾಡಿ ಅಭಿನಯಿಸುತ್ತಿದ್ದು, ಅನೂಪ್ ಆಂಟೋನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಮೆಹಬೂಬ ಸಿನಿಮಾದಲ್ಲಿ ಶಶಿ ಜೊತೆಗೆ ನಾಯಕಿಯಾಗಿ ಗೊಂಬೆಗಳ ಲವ್ ಖ್ಯಾತಿಯ ಪಾವನಾ ಗೌಡ ನಾಯಕಿಯಾಗಿ ಮಿಂಚಿದ್ದಾರೆ. ಹಾಗೆಯೇ ಇತ್ತೀಚೆಗೆ 'ಮೆಹಬೂಬ' ಚಿತ್ರದ ಪೋಸ್ಟರ್‌ನ್ನು ಸಚಿವರಾದ ಚೆಲುವರಾಯ ಸ್ವಾಮಿ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಕೇರಳದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ಕಟ್ಟಿಕೊಡಲಾಗಿದ್ದು, ಇದಕ್ಕೆ ಮ್ಯಾಥ್ಯೂಸ್ ಮನು ಸಂಗೀತ ಸಂಯೋಜಿಸಿದ್ದು, ಯೋಗರಾಜ್ ಭಟ್ ಹಾಗೂ ರಘು ಶಾಸ್ತ್ರೀ ಸಾಹಿತ್ಯ ಗೀಚಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.