FactCheck: ಬಹು ವರ್ಷಗಳ ಪ್ರೀತಿಗೆ ಮುಕ್ತಾಯ, ಡಿವೋರ್ಸ್ ಮೂಲಕ ಉತ್ತರ ಕೊಟ್ಟ ಜೋಡಿ

 | 
Jd
ಖ್ಯಾತ ನಟ, ಕಿರುತೆರೆಯ ಜನಪ್ರಿಯ ನಿರೂಪಕ ಮಾಸ್ಟರ್‌ ಆನಂದ್ ಹಾಗೂ ಅವರ ಪತ್ನಿ ಯಶಸ್ವಿನಿ ಹೆಸರು ಡಿವೋರ್ಸ್ ಎನ್ನುವ ವಿಚಾರದಲ್ಲಿ ತುಳುಕು ಹಾಕಿಕೊಂಡಿತ್ತು. ಯಶಸ್ವಿನಿ ಮಾಸ್ಟರ್‌ ಆನಂದ್ ಈ ಗಾಳಿ ಸುದ್ದಿಗೆ ಬ್ರೇಕ್‌ ಹಾಕಿ, ಮನಸೋಇಚ್ಛೆ ಕಮೆಂಟ್‌ ಹಾಕುವವರ ಚಳಿ ಬಿಡಿಸಿದರೂ ಕೂಡ ಈ ಸುಳ್ಳು ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈ ಬಗ್ಗೆ ಇದೀಗ ಸ್ವತಃ ಮಾಸ್ಟರ್‌ ಆನಂದ್‌ ಪ್ರತಿಕ್ರಿಯಿಸಿದ್ದು, ಸುಳ್ಳು ಸುದ್ದಿ ಹರಡುವವರಿಗೆ ನಗುತ್ತಲೇ ಖಡಕ್‌ ಎಚ್ಚರಿಕೆ ನೀಡಿದ್ದಾರೆ.
ಇವತ್ತಿನ ಪ್ರಪಂಚ ಲೈಕ್‌, ಶೇರ್‌ ಆ್ಯಂಡ್‌ ಸಬ್‌ಸ್ಕ್ರೈಬರ್‌ ಮೇಲೆ ಬದುಕುತ್ತಿದ್ದಾರೆ. ಹೀಗಿರುವಾಗ ಚಿಕ್ಕ ವಿಚಾರವು ಸಿಕ್ಕಿದರೆ ಅದನ್ನೇ ಒಂದು ವಿಡಿಯೋ ಮಾಡುತ್ತಾರೆ. ಇದಕ್ಕೆಲ್ಲಾ ತಲೆ ಕೆಡಿಸಿಕೊಂಡರೆ ನಾವು ಮುಂದೆ ಹೋಗಲು ಆಗುವುದಿಲ್ಲ. ನಮ್ಮ ಕೆಲಸ ಏನಿದೆ ಅದನ್ನು ನೋಡಿಕೊಂಡು ಹೋಗಬೇಕು. ಈ ಗಾಳಿ ಸುದ್ದಿ ಹರಡಿರುವುರದಲ್ಲಿ ಇವಳದು ಕೂಡ ಅರ್ಧ ತಪ್ಪಿದೆ ಎಂದಿರುವ ಮಾಸ್ಟರ್‌ ಆನಂದ್, ಅಂತಹ ಕಮೆಂಟ್‌ಗಳಿಗೆ ಉತ್ತರ ಕೊಟ್ಟಿರುವುದೇ ಇವಳ ತಪ್ಪು ಎಂದು ಯಶಸ್ವಿನಿ ಅವರಿಗೆ ಬುದ್ಧಿ ಹೇಳಿದ್ದಾರೆ.
ಈ ರೀತಿಯ ಕಮೆಂಟ್‌ಗಳನ್ನು ಮಾಡುವವರ ಇನ್ಸ್ಟಾಗ್ರಾಮ್‌ ಅಕೌಂಟ್‌ಗಳನ್ನು ನೋಡಿ. ಜೀರೋ ಪೋಸ್ಟ್‌, ಸಾವಿರಾರು ಫಾಲೋವಿಂಗ್‌ ಇರುತ್ತದೆ. ಅವರದೇ ಜೀರೋ ಪೋಸ್ಟ್‌ ಅವರೇನು ಪೋಸ್ಟ್‌ ಹಾಕಿಲ್ಲ. ಅಲ್ಲದೇ ಸಾವಿರಾರು ಜನರನ್ನು ಫಾಲೋ ಮಾಡುತ್ತಾರೆ ಎಂದರೆ ಏನರ್ಥ ಅವರು ಬೇರೆಯವರ ಮನೆ ಕಥೆ ಕೇಳಲು ಇರೋರು ಅಂತ ಅರ್ಥ. ಅಂತಹ ಅಕೌಂಟ್‌ಗಳ ಕಮೆಂಟ್‌ಗಳಿಗೆ ಉತ್ತರ ಕೊಡಬಾರದು ಎಂದರು.
ಈ ಡಿವೋರ್ಸ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಪೇಜ್‌ಗಳ ಅಡ್ಮಿನ್‌ ನಂಬರ್‌ಗಳು ನನ್ನ ಬಳಿ ಇದೆ. ದೊಡ್ಡ ದೊಡ್ಡ ವಕೀಲರು ನನಗೆ ಪರಿಚಯ ಇದ್ದಾರೆ. ಈ ಬಗ್ಗೆ ಅವರ ಜೊತೆ ಒಂದು ಸುತ್ತಿನ ಮಾತಾಯಿತು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳೋಣ ಎನ್ನುವ ಮಟ್ಟಿಗೆ ಹೋಯ್ತು. ಆದರೆ ನಾನು ಬೇಡ ಅದು ಅಂದೆ. ಇಂತವರನ್ನು ನೋಡಿದರೆ ನನಗೆ ಕರುಣೆ ಹುಟ್ಟುತ್ತದೆ. ಪಾಪ ನಮ್ಮ ಹೆಸರು ಹೇಳಿಕೊಂಡು ಅವರು ಊಟ ಮಾಡುತ್ತಿದ್ದಾರೆ. ಪುನಃ ಅವರ ಊಟ ಕಿತ್ತುಕೊಂಡು ನನಗೆ ಏನು ಆಗಬೇಕಿಲ್ಲ.