FactCheck:ಸೌಜನ್ಯ ಬಗ್ಗೆ ಮೊಟ್ಟಮೊದಲ ಬಾರಿಗೆ ನ್ಯಾಯ ಕೇಳಲು ಬಂದ ದರ್ಶನ್, ಕನ್ನಡಿಗರು ಫಿದಾ
Mar 8, 2025, 12:17 IST
|

ಕರ್ನಾಟಕದಲ್ಲಿ ಸೌಜನ್ಯ ಪ್ರಕರಣ ಮತ್ತೆ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಯೂಟ್ಯೂಬರ್ ಸಮೀರ್ ಎಂಡಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ದಶಕಗಳ ಹಿಂದಿನ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಬಗ್ಗೆ ಸವಿಸ್ತಾರವಾದ ವಿಡಿಯೋ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮತ್ತೆ ಸೌಜನ್ಯ ಪ್ರಕರಣದ ಬಗ್ಗೆ ಧ್ವನಿ ಎದ್ದಿದೆ. ಇದೇ ವೇಳೆ ದುನಿಯಾ ವಿಜಯ್ ಹಳೆಯ ಟ್ವೀಟ್ ಕೂಡ ವೈರಲ್ ಆಗುತ್ತಿದೆ.
ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಆಗಾಗ ದಿಢೀರನೇ ಈ ಪ್ರಕರಣ ಕಾವು ಪಡೆದುಕೊಳ್ಳುತ್ತೆ. ಕೆಲವು ದಿನ ಹಿಂದಷ್ಟೇ ಯೂಟ್ಯೂಬರ್ ಸಮೀರ್ ಎಂಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಮಾಡಿದ್ದರು. ಅದರಲ್ಲಿ ಸೌಜನ್ಯ ಕಾಣೆಯಾಗಿದ್ದ ದಿನ ಮನೆಯಿಂದ ಕಾಲೇಜಿಗೆ ಹೊರಡುವುದರಿಂದ ಹಿಡಿದು ಶವವಾಗಿ ಪತ್ತೆ ಆಗುವವರೆಗೂ ವಿಡಿಯೋದಲ್ಲಿ ಹೇಳಲಾಗಿದೆ.
ಈ ಕೇಸ್ ಯಾಕಿಷ್ಟು ಜಟಿಲವಾಗಿದೆ? ಕೇಸ್ ಹಾದಿ ತಪ್ಪುವುದಕ್ಕೆ ಪೊಲೀಸರ ಪಾತ್ರವೇನು? ಈ ಕೃತ್ಯ ಯಾರಿಂದ ಆಗಿದೆ ಅನ್ನೋದನ್ನು ತಮ್ಮ ವಿಡಿಯೋದಲ್ಲಿ ವಿವರಿಸಿದ್ದರು. ಧರ್ಮಸ್ಥಳ ಹಾಗೂ ಅದನ್ನು ನಡೆಸುತ್ತಿರುವ ಮನೆತನದ ವಿರುದ್ಧ ಪರೋಕ್ಷವಾಗಿ ಆ ವಿಡಿಯೋದಲ್ಲಿ ಆರೋಪ ಮಾಡಿದ್ದರು. ಕೆಲವೇ ದಿನಗಳಲ್ಲಿ ಈ ವೀಡಿಯೋ ವೈರಲ್ ಆಗಿತ್ತು. ಸುಮಾರು 10 ಮಿಲಿಯನ್ ವೀವ್ಸ್ ಆಗಿತ್ತು. ಅಷ್ಟೊಂದು ಸದ್ದು ಮಾಡಿತ್ತು.
ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು. ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ. ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು - ಬುದ್ಧ" ಎಂದು ದುನಿಯಾ ವಿಜಯ್ ಟ್ವೀಟ್ ಮಾಡಿದ್ದರು. ಯೂಟ್ಯೂಬರ್ ಸಮೀರ್ ವಿಡಿಯೋ ವೈರಲ್ ಆಗುತ್ತಿದ್ದಂತೆ ದುನಿಯಾ ವಿಜಯ್ ಟ್ವೀಟ್ ಕೂಡ ಸದ್ದು ಮಾಡುವುದಕ್ಕೆ ಶುರುಮಾಡಿದೆ. ನಟ ದರ್ಶನ್ ಹಾಗೂ ಹಲವು ನಟ ನಟಿಯರು ಕೂಡ ಬೆಂಬಲ ಸೂಚಿಸಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.