FactCheck:ಸೌಜನ್ಯ ಪರ ಧ್ವನಿ ಎತ್ತಿದ ದುನಿಯಾ ವಿಜಯ್, ಯಾವುದೇ ಕಾರಣಕ್ಕೂ ಅವ್ನ ಬಿಡಬೇಡಿ
Mar 9, 2025, 16:05 IST
|

ಕಳೆದೊಂದು ವಾರದಿಂದ ಎಲ್ಲೆಡೆಯೂ ಸೌಜನ್ಯಾ ಪ್ರಕರಣ ದ್ದೆ ಸುದ್ದಿ. ಹೌದು ಯೂಟ್ಯೂಬರ್ ಸಮೀರ್ ಎಂಡಿ ವೀಡಿಯೋ ಎಲ್ಲರಲ್ಲೂ ಕಿಚ್ಚನ್ನು ಹಚ್ಚಿದೆ. ಈಗಾಗಲೇ ಹೇಳಿರುವ ಹಾಗೆ ಇದೇನು ಮೊದಲ ಸಲವಲ್ಲ ಈ ಹಿಂದೆ ಕೂಡ ಹಲವಾರು ಬಾರಿ ಸೌಜನ್ಯ ಪರ ಮಾತುಗಳು ಕೇಳಿ ಬಂದಿವೆ.ಸೌಜನ್ಯ ಪ್ರಕರಣ ಕುರಿತಂತೆ ನಟ ದುನಿಯಾ ವಿಜಯ್ ಟ್ವೀಟ್ ಮಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಸದ್ಯ ಭಾರಿ ಸಂಚಲನ ಮೂಡಿಸಿದೆ.
ದುನಿಯಾ ವಿಜಯ್ ಧರ್ಮಸ್ಥಳ ಮಂಜುನಾಥದ ಭಕ್ತರಾಗಿದ್ದು, ಪ್ರತಿ ವರ್ಷ ಭೇಟಿ ನೀಡಿ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಈ ಬಾರಿ ದೇವರ ದರ್ಶನ ಮಾಡಬಾರದು ಎನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ ಎಂದು ಹೇಳಿದ್ದಾರೆ.
ಮುಂದುವರೆದು ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು ಎಂದು ಬುದ್ಧನ ಹೇಳಿಕೆಯನ್ನು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ದುನಿಯಾ ವಿಜಯ್ ಅವರ ಟ್ವೀಟ್ ಸಂಚಲನ ಸೃಷ್ಟಿಸಿದೆ.ಇನ್ನು ನಟ ದುನಿಯಾ ವಿಜಯ್ ಅವರ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ವಿಜಯ್ ಅವರ ಟ್ವೀಟ್ ಅನ್ನು ಮೆಚ್ಚಿಕೊಂಡಿದ್ದು, ಹೀಗೆ ಧ್ವನಿ ಎತ್ತಲು ತುಂಬಾ ಧೈರ್ಯ ಬೇಕು, ಇದಕ್ಕಾಗಿ ನೀವು ಹೆಚ್ಚು ಇಷ್ಟವಾಗೋದು ಎಂದು ಹೇಳಿದ್ದಾರೆ.
ಇನ್ನೂ ಕೆಲವರು ನಿಮ್ಮ ಮಾತು ಕೇಳಿ ಯಾರೂ ಮಂಜುನಾಥನ ದರ್ಶನ ಮಾಡುವುದನ್ನು ಬಿಡಲ್ಲ, ಸರಿಯಾಗಿ ತನಿಖೆ ಮಾಡಲು ಸರ್ಕಾರಕ್ಕೆ ಹೇಳಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ, ಮಂಜುನಾಥಸ್ವಾಮಿಯನ್ನು ಮಧ್ಯದಲ್ಲಿ ತರಬೇಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.ಮತ್ತೆ ಕೆಲವರು ಈ ರೀತಿ ಎಲ್ಲರೂ ಧ್ವನಿ ಎತ್ತಿದರೆ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗುವ ಸಾಧ್ಯತೆ ಇದೆ, ಎಲ್ಲರೂ ಈ ಬಗ್ಗೆ ಮಾತನಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.