FactCheck: ನನಗೆ ಪ್ರಜ್ವಲ್ ರೇವಣ್ಣ 500 ರೂಪಾಯಿ ಬಾಕಿ ಇದೆ, ಡಿ ಬಾಸ್ ದಶ೯ನ್ ಹೇಳಿಕೆ ವಿಡಿಯೋ ವೈರಲ್
| Aug 3, 2025, 20:11 IST
ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್... ಬಾಕ್ಸ್ ಆಫಿಸ್ ಅಖಾಡದಲ್ಲಿ 100 ಕೋಟಿ, 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಧೀರ... ಹಿಂಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ಮನಸ್ಸು ತುಂಬಿ ಹೊಗಳುತ್ತಾರೆ ಕೋಟಿ ಕೋಟಿ ಅಭಿಮಾನಿಗಳು. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೀವನ ಮೈಸೂರು ರಾಜರ ರೀತಿ ಸಖತ್ ಆಗಿ ಇತ್ತು, ಮುಂದೆ ಕೂಡ ಅದೇ ರೀತಿ ಅವರು ಮೆರೆಯುತ್ತಾರೆ ಅನ್ನೋದು ಕೋಟಿ, ಕೋಟಿ ಅಭಿಮಾನಿಗಳ ಮಾತು. ಇಂತಹ ಸಮಯದಲ್ಲೇ, ಪ್ರಜ್ವಲ್ ರೇವಣ್ಣ ಬಗ್ಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಏನ್ ಹೇಳಿದ್ರು ಗೊತ್ತಾ?
ನಿಮಗೆಲ್ಲಾ ಗೊತ್ತಿರುವಂತೆ ಪ್ರಜ್ವಲ್ ರೇವಣ್ಣ ಇದೀಗ ರೇಪ್ ಅಂದ್ರೆ ಅತ್ಯಾಚಾರ ಕೇಸ್‌ನಲ್ಲಿ ಜೈಲಿಗೆ ಹೋಗಿ ಕಂಬಿ ಎಣಿಸುವಂತೆ ಆಗಿದೆ. ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯ ಇದೀಗ ಜೀವಾವಧಿ ಶಿಕ್ಷೆಯನ್ನು ಕೂಡ ನೀಡಿದೆ. ಇದೇ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಬಗ್ಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮಾತನಾಡಿರುವ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಅಗುತ್ತಿದೆ.
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಪ್ರಜ್ವಲ್ ರೇವಣ್ಣ ಅವರ ಜೊತೆಗೆ ಅತ್ಯುತ್ತಮ ಸ್ನೇಹ ಸಂಬಂಧ ಹೊಂದಿದ್ದರು. ಅಲ್ಲದೆ ಹಲವು ಬಾರಿ ಒಟ್ಟಿಗೆ ಇಬ್ಬರೂ ಓಡಾಡಿದ್ದು ಕೂಡ ಉಂಟು. ಹಾಗಾದ್ರೆ, 500 ರೂಪಾಯಿ ಪ್ರಜ್ವಲ್ ರೇವಣ್ಣ ಬಾಕಿ ಕೊಡಬೇಕು ಅಂತಾ ನಟ ಡಿ-ಬಾಸ್ ದರ್ಶನ್ ತೂಗುದೀಪ್ ವಿಡಿಯೋದಲ್ಲಿ ಹೇಳಿದ್ರಾ?
ಹೌದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮಾತನಾಡಿದ್ದು, ಅಲ್ಲದೆ ತಮಗೂ ಪ್ರಜ್ವಲ್ ರೇವಣ್ಣ ಅವರಿಗೂ ಸುಮಾರು 8 ವರ್ಷಗಳ ಸ್ನೇಹ ಇದೆ ಎನ್ನುತ್ತಾರೆ. ಇದೇ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಜೊತೆ ಬೆಂಗಳೂರಿನಲ್ಲಿ ಕ್ರಿಕೆಟ್ ಆಡುವ ಬಗ್ಗೆ ಕೂಡ ಪ್ರಸ್ತಾಪ ಮಾಡುವ ಬಗ್ಗೆ ಮಾತನಾಡುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರು, ಪ್ರಜ್ವಲ್ ರೇವಣ್ಣ ಅವರು ತಮ್ಮ ಜೊತೆಗೆ ಕ್ರಿಕೆಟ್ ಆಡುವಾಗ ಬೆಟ್ಟಿಂಗ್ ಕಟ್ಟಿ ಸೋತು ಹೋಗಿರುವ 500 ರೂಪಾಯಿ ಬಾಕಿ ಕೊಡಬೇಕು ಅನ್ನೋದನ್ನ ಕೂಡ ಪ್ರಸ್ತಾಪ ಮಾಡಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು. ಈ ವಿಡಿಯೋ ಸುಮಾರು 5 ವರ್ಷ ಹಳೆಯದ್ದು ಎನ್ನಲಾಗುತ್ತಿದ್ದು, ಈಗ ಕೆಲವರು ಬೇಕು ಅಂತಾ ವೈರಲ್ ಮಾಡುತ್ತಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬರುತ್ತಿದೆ. ಆದರೆ ಈ ವಿಡಿಯೋ ಎಷ್ಟು ಹಳೆಯದು? ಅನ್ನೋ ಬಗ್ಗೆ ಇನ್ನೂ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ...