FactCheck: ಸಿನಿಮಾ ಮಾಡುವುದಾಗಿ ನಂಬಿಸಿ ಮೊನಾಲಿಸಾಗೆ ಮೋಸ ಮಾಡಿದ ನಿರ್ಮಾಪಕ
Feb 21, 2025, 08:52 IST
|

ಮಹಾ ಕುಂಭದಲ್ಲಿ ಸಂಚಲನ ಸೃಷ್ಟಿಸಿದ್ದ ಗಾಜುಗಣ್ಣಿನ ಹುಡುಗಿ ಮೊನಾಲಿಸಾ ಅವರ ಅದೃಷ್ಟವೇ ಬದಲಾಗಿ ಹೋಗಿದೆ. ಬಾಲಿವುಡ್ ಸಿನಿಮಾ ಬಳಿಕ ಕೇರಳದ ಜನಪ್ರಿಯ ಚೆಮ್ಮನೂರ್ ಜ್ಯೂವೆಲ್ಲರಿ ತನ್ನ ಪ್ರಚಾರದ ರಾಯಭಾರಿಯಾಗಿ ಸಖತ್ ಮಿಂಚುತ್ತಿದ್ದಾರೆ. ಇದೇ ಹೊತ್ತಲ್ಲಿ ಮೊನಾಲಿಸಾ ತಮ್ಮ ಅಮ್ಮನಿಗೆ ಉಡುಗೊರೆ ಒಂದನ್ನು ಕೊಟ್ಟಿದ್ದಾರೆ.
ಹೌದು, ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಯೂಟ್ಯೂಬರ್ ಒಬ್ಬರ ಕಣ್ಣಿಗೆ ಬಿದಿದ್ದರು ಈ ಮೊನಾಲಿಸಾ. ತಮ್ಮ ಬ್ಯೂಟಿಫುಲ್ ಕಣ್ಣುಗಳಿಂದಲೇ ಸೆನ್ಸೇಷನ್ ಸೃಷ್ಟಿಸಿರುವ ಮೊನಾಲಿಸಾ ಸಖತ್ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಮೊನಾಲಿಸಾ ತಮ್ಮ ತಾಯಿಗೆ ಚೈನ್ ಒಂದನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ತಾಯಿಗೆ ಸರವನ್ನು ಕೊರಳಿಗೆ ಹಾಕಿ ಸರ್ಪ್ರೈಸ್ ಕೊಟ್ಟಿದ್ದಾರೆ. ಇದೇ ವಿಡಿಯೋವನ್ನು ಮೊನಾಲಿಸಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮೊನಾಲಿಸಾ ಶೇರ್ ಮಾಡಿಕೊಂಡ ವಿಡಿಯೋ 7.8 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಈಗಾಲೇ ಮಹಾಕುಂಭದಲ್ಲಿ ನೋಡುಗರ ಕಣ್ಮನ ಸೆಳೆದ ಮೊನಾಲಿಸಾ ಬಾಲಿವುಡ್ ಸಿನಿಮಾದಲ್ಲಿ ನಟಿಸೋಕೆ ರೆಡಿಯಾಗಿದ್ದಾರೆ. ಇನ್ನು ಮೊನಲಿಸಾ ಬಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈಗ ಆ ಸಿನಿಮಾ ನಿಂತು ಹೋಗಿದೆ ಎನ್ನಲಾಗುತ್ತಿದ್ದೆ. ಮೊನಲಿಸಾಗೆ ಸಿನಿಮಾ ಆಫರ್ ನೀಡಿದ ನಿರ್ದೇಶಕ, ಆಕೆಯನ್ನು ಟ್ರ್ಯಾಪ್ ಮಾಡಿದ್ದಾನೆ ಎಂಬ ಆತಂಕಕಾರಿ ಹೇಳಿಕೆಯನ್ನು ಸಿನಿಮಾದ ನಿರ್ಮಾಪಕ ನೀಡಿದ್ದಾರೆ.
ದಿ ಡೈರಿ ಆಫ್ ಮಣಿಪುರ್’ ಸಿನಿಮಾದ ನಿರ್ಮಾಪಕ ಜಿತೇಂಧರ್ ನಾರಾಯಣ್ ಸಿಂಗ್ ಅಲಿಯಾಸ್ ವಸೀಮ್ ರಿಜ್ವಿ ದಿ ಡೈರಿ ಆಫ್ ಮಣಿಪುರ್ ಸಿನಿಮಾದ ನಿರ್ದೇಶಕ ಸನೋಜ್ ಮಿಶ್ರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಸನೋಜ್ ಮಿಶ್ರಾ ಒಬ್ಬ ಸುಳ್ಳುಗಾರ, ಮೋಸಗಾರ, ಮಹಾನ್ ಕುಡುಕ, ಆತ ಸುಳ್ಳು ಹೇಳಿ ಹಲವರಿಗೆ ಮೋಸ ಮಾಡಿದ್ದಾನೆ.
ಯುವತಿಯರಿಗೆ ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಈಗ ಕುಂಭಮೇಳ ಮೊನಲಿಸಾಗೂ ಮೋಸ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.