FactCheck:ಕನ್ನಡಿಗರ ಮುಂದೆ ಮತ್ತೆ ರೊಚ್ಚಿಗೆದ್ದ ಶಿವಣ್ಣ, ಯಾಕಿಷ್ಟು ಕೋಪ
Jun 12, 2025, 09:41 IST
|

ಶಿವಣ್ಣನ ಹಳೆಯ ವೀಡಿಯೋ ಒಂದು ಸೋಷಿಯಲ್ ಮೀಡಿಯಾ ಅಲ್ಲಿ ಸಖತ್ ಟ್ರೆಂಡ್ ಸೆಟ್ಟರ್ ಆಗಿದೆ. ಕಾವೇರಿ ವಿಚಾರ ಬಂತು ಅಂದ್ರೆ ಸಾಕು ಕರ್ನಾಟಕ & ತಮಿಳುನಾಡು ನಡುವೆ ಘೋರ ಕಿತ್ತಾಟ ಶುರುವಾಗುತ್ತೆ. ದಕ್ಷಿಣ ಭಾರತದ 2 ನೆರೆಯ ರಾಜ್ಯಗಳ ನಡುವೆ ಈ ವಿಚಾರಕ್ಕೆ ಫೈಟಿಂಗ್ ಶುರುವಾಗಿ, ಬೆಂಕಿಯೇ ಹೊತ್ತಿಕೊಳ್ಳುತ್ತದೆ. ಆದರೆ ಪದೇ ಪದೇ ಸಿನಿಮಾದ ನಟರು & ನಟಿಯರು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಲ್ಲ ಎಂಬ ಆರೋಪವನ್ನ ಕನ್ನಡಪರ ಸಂಘಟನೆಗಳು ಮಾಡ್ತವೆ.
ಇದೀಗ ಹ್ಯಾಟ್ರಿಕ್ ಹೀರೋ ಶಿವಣ್ಣ, ಕಾವೇರಿ ನೀರು ಹೋರಾಟದ ಬಗ್ಗೆ ತಮಿಳುನಾಡಿನಲ್ಲಿ ನಿಂತು ಮಾತನಾಡಿದ್ದಾರೆ. ಹೌದು, ಕಾವೇರಿ ನದಿಯ ನೀರು ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಪಾಲಿಗೆ ಅಮೃತ ಸಮಾನ. ಹೀಗಾಗಿಯೇ ಕಾವೇರಿ ನೀರಿಗಾಗಿ ಎರಡೂ ರಾಜ್ಯಗಳ ನಡುವೆ ಭಾರಿ ದೊಡ್ಡ ಕದನ ಶುರುವಾಗುತ್ತೆ. ದೇಶದಲ್ಲೂ ಕಾವೇರಿ ಹೋರಾಟ ಪದೇ ಪದೇ ದೊಡ್ಡ ಬಿರುಗಾಳಿ ಎಬ್ಬಿಸುತ್ತದೆ. ಇಷ್ಟೆಲ್ಲಾ ಗಲಾಟೆಗೆ ಕಾವೇರಿ ನದಿ ನೀರು ಕಾರಣವಾಗುತ್ತಿರುವ ಸಮಯದಲ್ಲೇ, ನಟ ಶಿವರಾಜ್‌ಕುಮಾರ್ ಇದೀಗ ಕಾವೇರಿ ನದಿ ನೀರು ಕಿತ್ತಾಟದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅದು ತಮಿಳು ಭಾಷೆಯಲ್ಲೇ.
ಅಂದಹಾಗೆ ನಟ ಶಿವಣ್ಣ ಹಲವು ಬಾರಿ ಕಾವೇರಿ ನೀರಿನ ಹೋರಾಟದ ಸಮಯದಲ್ಲಿ ಮುಂಚೂಣಿಯಲ್ಲಿ ನಿಂತು, ಪ್ರತಿಭಟನೆ ನಡೆಸಿದ್ದಾರೆ. ಹೀಗಿದ್ದಾಗ ನಟ ಶಿವಣ್ಣ ಪ್ರತಿ ಬಾರಿ ಕೂಡ ಕಾವೇರಿ ವಿಚಾರದಲ್ಲಿ ಶಾಂತಿ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ. ಇನ್ನು ಇದೇ ಸಮಯದಲ್ಲಿ ಮತ್ತೊಮ್ಮೆ ಕಾವೇರಿ ವಿವಾದವನ್ನ ಪ್ರಸ್ತಾಪ ಮಾಡಿರುವ ಶಿವಣ್ಣ ಅವರು, ನಿಸರ್ಗ ಎಲ್ಲರ ಸ್ವತ್ತು ಭೂಮಿ ಎಲ್ಲಾ ಮನುಷ್ಯರಿಗೂ ಸಮಾನ. ಹೀಗಿದ್ದಾಗ ಅದನ್ನು ನಾವು ಅನುಸರಿಸಬೇಕು. ಕಾವೇರಿ ವಿಚಾರದಲ್ಲಿ ಹೊಂದಾಣಿಕೆ ಅಗತ್ಯ ಇದೆ, ಆದರೆ ರಾಜಕೀಯ ಅನಗತ್ಯ ಎಂದಿದ್ದಾರೆ ನಟ ಶಿವರಾಜ್‌ಕುಮಾರ್.
ನಟ ಶಿವಣ್ಣ ಅವರ, 2ನೇ ತಮಿಳು ಸಿನಿಮಾ 'ಕ್ಯಾಪ್ಟನ್ ಮಿಲ್ಲರ್' ರಿಲೀಸ್ ಆಗಿ ಸಖತ್ ಗಮನ ಸೆಳೆದಿದೆ. ಹೀಗಿದ್ದಾಗ ತಮಿಳು ಖಾಸಗಿ ಸಂದರ್ಶನದ ವೇಳೆ ನಟ ಶಿವಣ್ಣ ಕಾವೇರಿ ನದಿ ನೀರಿನ ವಿಚಾರವಾಗಿ ನೇರವಾಗಿ ಮಾತನಾಡಿದ್ದಾರೆ. ಈ ಮೂಲಕ ನದಿ ನೀರಿನ ಸಂಕಷ್ಟ ಎದುರಾದರೆ, ಹೊಂದಾಣಿಕೆ ಅಗತ್ಯ ಎಂದಿದ್ದಾರೆ. ಹಾಗೇ ಕನ್ನಡ ನಾಡಿನ ಪರವಾಗಿ, ಶಿವಣ್ಣ ಅವರು ತಮಿಳು ಭಾಷೆಯಲ್ಲೇ ಉತ್ತರ ನೀಡಿದ್ದಾರೆ. ಇದೀಗ ಶಿವಣ್ಣ ಅವರ ಈ ಹೇಳಿಕೆ ಎಲ್ಲೆಲ್ಲೂ ವೈರಲ್ ಆಗುತ್ತಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.