FactCheck:ಸುದೀಪ್ ಜೊತೆ ಶಿವರಾಜ್ ಕುಮಾರ್ ವೈರತ್ವ, ಇಬ್ಬರ ನಡುವೆ ಮನಸ್ಥಪ

 | 
Nnj
ಚಿತ್ರರಂಗದಲ್ಲಿ ಜಗಳ, ಗಲಾಟೆ ಕಾಮನ್ ಸ್ಯಾಂಡಲ್‌ವುಡ್‌ ನಟರಾದ ಕಿಚ್ಚ ಸುದೀಪ್‌ ಹಾಗೂ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಒಬ್ಬರೂ ಪರಸ್ಪರ ಒಡನಾಟ ಹೊಂದಿದ್ದಾರೆ. ತೆರೆಯಲ್ಲಿ ಒಟ್ಟಿಗೆ ನಟಿಸಿರುವ ಜೊತೆಗೆ ತೆರೆಯ ಹಿಂದೆಯೂ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಆದರೆ, ಕೆಲವು ದಿನಗಳ ಹಿಂದೆ ಸುದೀಪ್‌ ಹಾಗೂ ಶಿವಣ್ಣ ನಡುವೆ ಮನಸ್ತಾಪ, ವೈರತ್ವ ಇತ್ತು ಎನ್ನುವ ವಿಚಾರ ಸ್ಯಾಂಡಲ್‌ವುಡ್‌ನಲ್ಲಿ ಸಖತ್‌ ಸದ್ದು ಮಾಡಿತ್ತು. ಈ ವಿಚಾರವಾಗಿಯೂ ಅವರ ಅಭಿಮಾನಿಗಳು ಸೋಶಿಯಲ್‌ ಮೀಡಿಯಾಗಳಲ್ಲಿ ಕಿತ್ತಾಡಿಕೊಂಡಿದ್ದರು. 
ಆದರೆ, ಯಾವ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಇತ್ತು ಎಂದು ರಿವೀಲ್‌ ಆಗಿರಲಿಲ್ಲ. ಈ ಬಗ್ಗೆ ನಟ ಶಿವರಾಜ್‌ಕುಮಾರ್‌ ಮೌನ ಮುರಿದಿದ್ದಾರೆ. ಕಿಚ್ಚ ಸುದೀಪ್‌ ಜೊತೆಗಿನ ಮನಸ್ತಾಪದ ಬಗ್ಗೆ ಅವರು ಶಾಕಿಂಗ್‌ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.ಈ ಬಗ್ಗೆ ಕನ್ನಡದ ಟಿವಿ9 ಚಾನೆಲ್‌ ಸಂದರ್ಶನದಲ್ಲಿ ಮಾತನಾಡಿರುವ ಶಿವಣ್ಣ, ಸುದೀಪ್‌ ಅವರು ನನಗೆ ಒಂದು ಸಿನಿಮಾ ಡೈರೆಕ್ಟ್‌ ಮಾಡಬೇಕು ಎಂದು ತುಂಬಾ ದಿನಗಳಿಂದ ಹೇಳ್ತಿದ್ರು. 
ಆದ್ರೆ ಕೊನೆಗೂ ಅದು ಟೇಕಾಫ್‌ ಆಗಲೇ ಇಲ್ಲ. ಆ ಬಳಿಕ ನಾನು ಸುದೀಪ್‌ ಸೇರಿ ವಿಲನ್‌ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ವಿ. ಮೊದಲಿಗೆ ನಾವಿಬ್ಬರೂ ಒಂದು ಸಿನಿಮಾ ಮಾಡಬೇಕು ಅನ್ನೋದು ಇತ್ತು ಎಂದು ಶಿವರಾಜ್‌ಕುಮಾರ್‌ ಹೇಳಿದ್ದಾರೆ. ನಾವಿಬ್ಬರೂ ಭೇಟಿಯಾದಾಗ ತುಂಬಾ ಚೆನ್ನಾಗಿಯೇ ಮಾತನಾಡುತ್ತೇವೆ. ನಮ್ಮಿಬ್ಬರ ನಡುವೆ ಆ ಒಡನಾಟ ಈಗಲೂ ಇದೆ ಎಂದಿದ್ದಾರೆ.
ಸುದೀಪ್‌ ಅವರಿಗೆ ಮೊದಲಿನಿಂದಲೂ ನಮ್ಮ ಮೇಲೆ ಒಂದು ರೀತಿಯ ಪ್ರೀತಿ ಇದೆ. ನನ್ನ ಪತ್ನಿ ಗೀತಾ ಅವರನ್ನ ಕಂಡರೆ, ಸುದೀಪ್‌ಗೆ ಬಹಳ ಅಭಿಮಾನ. ಅದೇ ರೀತಿ ನನ್ನ ಮೇಲೂ ಅದೇ ಪ್ರೀತಿ ತೋರುತ್ತಾರೆ. ಆದರೆ, ಒಂದು ಕುಟುಂಬ ಎಂದ ಮೇಲೆ ಸಣ್ಣ ಪುಟ್ಟ ವಿಚಾರಗಳಿಗೆ ಮನಸ್ತಾಪ ನಡೆದೇ ನಡೆಯುತ್ತೆ. ಅದೆಲ್ಲ ಬಂದು ಹೋಗುತ್ತೆ. ಅದೇ ವಿಚಾರವನ್ನ ಇಟ್ಟುಕೊಂಡು ವೈರತ್ವ ಬೆಳೆಸುವುದೇನಿಲ್ಲ. ಸುದೀಪ್‌ ಕೂಡ ಆ ರೀತಿ ಇಲ್ಲ ಎಂದು ಶಿವಣ್ಣ ಸ್ಪಷ್ಟನೆ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.