FactCheck:ರಾಜ್ ಕುಟುಂಬಕ್ಕೆ‌ ನಿಲ್ಲದ ಸಂಕಷ್ಟ, ಶಿವರಾಜ್ ಕುಮಾರ್ ಪತ್ನಿ ಆರೋಗ್ಯದಲ್ಲಿ ಬಾರಿ ಏರುಪೇರು

 | 
Bz
ಇತ್ತೀಚೆಗಷ್ಟೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕ್ಯಾನ್ಸರ್‌ ವಿರುದ್ಧ ಹೋರಾಡಿದ್ದರು. ಶಿವರಾಜ್ ಕುಮಾರ್‌ ಈಗ ಕ್ಯಾನ್ಸರ್‌ ಫ್ರೀ ಆಗಿದ್ದಾರೆ. ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಶಿವರಾಜ್ ಕುಮಾರ್‌ ಗುಣಮುಖರಾಗಿದ್ದಾರೆ. ಹೀಗಿರುವಾಗಲೇ, ಪತ್ನಿ ಗೀತಾ ಶಿವರಾಜ್ ಕುಮಾರ್ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. 
ಹೌದು ಯಾರಿಗೂ ಒಂದಿಷ್ಟು ಸುಳಿವನ್ನು ನೀಡದೆ ಗೀತಾ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಗೀತಾ ಶಿವರಾಜ್ ಕುಮಾರ್‌ಗೆ ವೈದ್ಯರು ಕತ್ತಿನ ಭಾಗದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಕೆಲ ವರ್ಷಗಳಿಂದ ಗೀತಾ ಶಿವರಾಜ್ ಕುಮಾರ್ ಕತ್ತಿನ ನೋವಿನಿಂದ ಬಳಲುತ್ತಿದ್ದರು. ನರದ ಸಮಸ್ಯೆಯಿಂದಾಗಿ ಕತ್ತಿನ ಭಾಗದಲ್ಲಿ ಗೀತಾ ಶಿವರಾಜ್ ಕುಮಾರ್‌ಗೆ ನೋವು ಕಾಣಿಸಿಕೊಂಡಿತ್ತು. 
ಹಾಗ್ನೋಡಿದ್ರೆ, ಈ ಹಿಂದೆಯೇ ಗೀತಾ ಶಿವರಾಜ್ ಕುಮಾರ್‌ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಗೀತಾ ಶಿವರಾಜ್ ಕುಮಾರ್ ಅವರು ಕತ್ತಿನ ಭಾಗದಲ್ಲಿ ಸರ್ಜರಿ ಮಾಡಿಸಿಕೊಂಡಿದ್ದಾರೆ ಅಂತ ಆಪ್ತ ವಲಯದವರು ಮಾಹಿತಿ ನೀಡಿದ್ದಾರೆ.ಶಿವಮೊಗ್ಗದಲ್ಲಿ ಮಾತನಾಡಿದ್ದ ಗೀತಾ ಅವರ ಸಹೋದರ ಹಾಗೂ ಸಚಿವ ಮಧು ಬಂಗಾರಪ್ಪ, ಗೀತಕ್ಕ ಅವರಿಗೆ ಸರ್ಜರಿ ಆಗಿದೆ ಎನ್ನುವ ಮಾಹಿತಿ ನೀಡಿದ್ದರು. ಆದರೆ, ಸರ್ಜರಿಯ ಕಾರಣ ಏನು ಎಂಬುದನ್ನು ರಿವೀಲ್ ಮಾಡಿರಲಿಲ್ಲ. ಈಗ ಅವರ ಆಪ್ತ ಮೂಲಗಳಿಂದ ಸರ್ಜರಿ ಹಿಂದಿನ ಕಾರಣ ರಿವೀಲ್ ಆಗಿದೆ.
ಶಿವರಾಜ್​ಕುಮಾರ್​ಗೆ ಅವರಿಗೆ ಕ್ಯಾನ್ಸರ್ ಕಾಣಿಸಿಕೊಂಡಾಗಿನಿಂದ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುವವರೆಗೆ ಗೀತಾ ಅವರು ಬೆಂಬಲವಾಗಿ ನಿಂತಿದ್ದರು. ಪ್ರತಿ ಹಂತದಲ್ಲೂ ಪತಿಗೆ ಧೈರ್ಯ ತುಂಬುತ್ತಾ ಬಂದರು. ಇದರಿಂದ ಶಿವರಾಜ್​ಕುಮಾರ್ ಅವರು ಬೇಗ ಚೇತರಿಕೆ ಕಾಣಲು ಸಾಧ್ಯವಾಯಿತು. ಈಗ ಪತ್ನಿಗೆ ಶಸ್ತ್ರಚಿಕಿತ್ಸೆ ಆದಾಗ ಶಿವರಾಜ್​ಕುಮಾರ್ ಬೆಂಬಲಕ್ಕೆ ನಿಂತಿದ್ದಾರೆ. ಈಗ ಗೀತಕ್ಕ ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.