FactCheck:ಜೈಲಲ್ಲಿ ಖಾರದ ಪುಡಿ ಹಾಕಿ ರುಬ್ಬಿದ್ರ ಪೊ ಲೀಸರು, ಎಲ್ಲದಕ್ಕೂ ಸ್ಪಷ್ಟತೆ ಕೊಟ್ಟ ವಿನಯ್

 | 
Nx
ಕನ್ನಡದ ಬಿಗ್​ ಬಾಸ್ ಮಾಜಿ​ ಸ್ಪರ್ಧಿಗಳು ಮಚ್ಚು ಹಿಡಿದು ರೀಲ್ಸ್​ನಲ್ಲಿ ರೂಲ್ಸ್‌ ಬ್ರೇಕ್​​ ಮಾಡಿದ್ದರಿಂದ ಜೈಲು ಸೇರಿದ್ದರು. ರಜತ್​ ಮತ್ತು ವಿನಯ್​ಗೆ ಶುಕ್ರವಾರವೇ ಕೋರ್ಟ್​ ಜಾಮೀನು ಕರುಣಿಸಿತ್ತು. ಆದರೆ ಜಾಮೀನು ಪ್ರಕ್ರಿಯೆ ಮುಗಿಸಲು ವಿಳಂಬವಾದ ಕಾರಣ ಶುಕ್ರವಾರ ಬಿಡುಗಡೆಯ ಭಾಗ್ಯ ಸಿಗಲಿಲ್ಲ. ಇಂದು ಬೆಳಗ್ಗೆ ಇಬ್ಬರು ಕೈಯಲ್ಲಿ ಬ್ಯಾಗು ಹಿಡಿದು ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್​ ಆಗಿದ್ದಾರೆ.
ಕಳೆದ ಮಾರ್ಚ್​ 24 ರಜತ್​ ಮತ್ತು ವಿನಯ್​ ಗೌಡ ಇಬ್ಬರಿಗೂ ಬಸವೇಶ್ವರ ನಗರ ಪೊಲೀಸರು ಬಿಗ್ ಶಾಕ್ ಕೊಟ್ಟಿದ್ದರು. ರಿಯಾಲಿಟಿ ಶೋನ ಸ್ಪರ್ಧಿಗಳು ತುಕ್ಕು ಹಿಡಿದ ಮಚ್ಚು ಹಿಡ್ಕೊಂಡು ರೀಲ್ಸ್​ ಮಾಡಿದ್ರು. ಇದೇ ರೀಲ್ಸ್​ ಇಷ್ಟು ದೊಡ್ಡ ತಪ್ಪಾಗುತ್ತೆ ಅಂತ​ ಇವರಿಬ್ಬರೂ ಊಹಿಸಿಯೇ ಇರಲಿಲ್ಲ. ಪೊಲೀಸರ ಕೆಂಗಣ್ಣಿಗೆ ಗುರಿಯಾದ ಇಬ್ಬರೂ ಜೈಲುವಾಸವನ್ನು ಅನುಭವಿಸಬೇಕಾಯಿತು.
ಮಚ್ಚಾ.. ಮಚ್ಚು ಹಿಡಿಯೋ ಅಂತ ರೀಲ್ಸ್ ಮಾಡಿದ ಪ್ರಕರಣದಲ್ಲಿ ರಜತ್​ ಮತ್ತು ವಿನಯ್​ ವಿರುದ್ಧ ಬಸವೇಶ್ವರ ನಗರ ಠಾಣೆ ಪೊಲೀಸರು ಕೇಸ್‌ ಹಾಕಿದ್ದರು. ಶಸ್ತ್ರಾಸ್ತ್ರ ಕಾಯ್ದೆಯಡಿ FIR ಹಾಕಿದ ಒಂದೇ ರಾತ್ರಿಯಲ್ಲಿ ವಿಚಾರಣೆ ನಡೆಸಿ ವಾಪಸ್​ ಕಳಿಸಿದ್ರು. ಇದೇ ವೇಳೆ ರೀಲ್ಸ್​ನಲ್ಲಿ ಬಳಸಲಾಗಿದ್ದ ಮಚ್ಚು ಎನ್ನಲಾದ ಆಯುಧವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಆದರೆ ಈ ಮಚ್ಚು, ರೀಲ್ಸ್​ನಲ್ಲಿ ಬಳಸಿದ್ದ ಮಚ್ಚಾಗಿರಲಿಲ್ಲ. ಹೀಗಾಗಿ ಪೊಲೀಸರು ಇಬ್ಬರನ್ನ ಬಂಧಿಸಿ ಸ್ಥಳ ಮಹಜರು ಮಾಡಿದ್ರು. ಆಗಲೂ ಅಸಲಿ ಮಚ್ಚು ಪತ್ತೆಯಾಗಿರಲಿಲ್ಲ. ಬಳಿಕ ಕೋರ್ಟ್​ಗೆ ಹಾಜರು ಪಡಿಸಲಾಗಿತ್ತು. ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿ ಜೈಲಿಗೆ ಕಳುಹಿಸಿದ್ರು. ಸದ್ಯ ಈ ಇಬ್ಬರಿಗೂ 24ನೇ ಎಸಿಎಂಎಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 
ಅದ್ರಂತೆ ಷರತ್ತುಗಳನ್ನ ಪೂರೈಸಿ ಇವತ್ತು ಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್​ ಆಗಿದ್ದಾರೆ. ನಮ್ಮನ್ನು ನೋಡಿ ನೀವು ಮಾಡ್ಬೇಡಿ ಎಂದು ವಿನಯ್ ಗೌಡ ಕಳಕಳಿಯ ಮನವಿ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.