FactCheck: 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಸಲಿ ವಿಚಾರವೇನು ಗೊ ತ್ತಾ

 | 
ಲಸಿಕೆ

ವಯಸ್ಸಾದಂತೆ ದೇಹ ರೋಗಗಳ ಗೂಡಾಗುತ್ತದೆ.50 ವರ್ಷ ಮೇಲ್ಪಟ್ಟ ನಾಗರಿಕರ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೊಸ ಲಸಿಕಾ ಶಿಫಾರಸುಗಳು ಈಗ ವೈದ್ಯಕೀಯ ವಲಯದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿವೆ. ಈ ವಯಸ್ಸಿನ ನಂತರ ದೇಹದ ರೋಗನಿರೋಧಕ ಶಕ್ತಿ ಕ್ರಮೇಣ ಕುಗ್ಗುತ್ತ ಹೋಗುತ್ತದೆ. ಇದರಿಂದ ಫ್ಲೂ, ನ್ಯುಮೋನಿಯಾ, ಶಿಂಗಲ್ಸ್‌ (ಹೆರ್ಪೀಸ್‌ ಜೋಸ್ಟರ್‌), ಟೆಟನಸ್‌, ಡಿಫ್ತೀರಿಯಾ ಹಾಗೂ ಪಾರ್ಟುಸಿಸ್‌ (Tdap) ಮುಂತಾದ ಸೋಂಕುಗಳ ಅಪಾಯ ಹೆಚ್ಚಾಗುತ್ತದೆ.

ವೈದ್ಯರು ಈ ವಯೋಮಾನದವರಿಗೂ ನಿಯಮಿತ ಲಸಿಕೆ ಪಡೆಯುವುದು ಅತ್ಯಂತ ಅಗತ್ಯ ಎಂದು ಸಲಹೆ ನೀಡುತ್ತಿದ್ದಾರೆ.ಫ್ಲೂ (ಇನ್‌ಫ್ಲುಯೆಂಜಾ) ಲಸಿಕೆ – ಪ್ರತಿ ವರ್ಷ ಒಂದು ಡೋಸ್‌ ಶಿಫಾರಸು ಮಾಡಲಾಗುತ್ತದೆ. ಇದು ಋತುಬದ್ಧ ಜ್ವರ ಮತ್ತು ಅದರ ಪರಿಣಾಮಗಳಿಂದ ರಕ್ಷಿಸುತ್ತದೆ. ನ್ಯುಮೋಕೋಕಲ್ ಲಸಿಕೆ – ಶ್ವಾಸಕೋಶ ಸಂಬಂಧಿತ ಸೋಂಕು, ನ್ಯುಮೋನಿಯಾ ಹಾಗೂ ರಕ್ತದ ಸೋಂಕುಗಳಿಂದ ರಕ್ಷಣೆ ನೀಡುತ್ತದೆ.

ಶಿಂಗಲ್ಸ್‌ ಲಸಿಕೆ – ನರಗಳನ್ನು ಹಾನಿಗೊಳಿಸುವ ಶಿಂಗಲ್ಸ್‌ ಸೋಂಕಿನಿಂದ ರಕ್ಷಿಸುತ್ತದೆ. ಟಿಡ್ಯಾಪ್‌ (Tetanus, Diphtheria, Pertussis) – ಹಳೆಯ ಗಾಯ, ಶ್ವಾಸಕೋಶ ಸೋಂಕು ಹಾಗೂ ಕಫದಂತಹ ರೋಗಗಳಿಂದ ರಕ್ಷಣೆ ನೀಡುತ್ತದೆ.

ಇತ್ತೀಚೆಗೆ The Journal of the Association of Physicians of India (JAPI) ಪ್ರಕಟಿಸಿದ ವರದಿಯಲ್ಲಿ ಭಾರತದಲ್ಲಿ ವಯಸ್ಕರ ಲಸಿಕಾ ಜಾಗೃತಿಯ ಕೊರತೆಯನ್ನು ಉಲ್ಲೇಖಿಸಲಾಗಿದೆ. ವಿಶೇಷವಾಗಿ ಹಿರಿಯ ನಾಗರಿಕರಲ್ಲಿ ಲಸಿಕೆ ಪಡೆಯುವ ಪ್ರಮಾಣ ಅತ್ಯಲ್ಪವಾಗಿದೆ. ಆದ್ದರಿಂದ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಸಂಸ್ಥೆಗಳು ವಯಸ್ಕರ ಲಸಿಕಾ ಅಭಿಯಾನಗಳನ್ನು ಬಲಪಡಿಸಲು ಹೊಸ ತಂತ್ರಗಳು ಮತ್ತು ನೀತಿಗಳನ್ನು ರೂಪಿಸುತ್ತಿವೆ.

ಹೀಗಾಗಿ, ನೀವು 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ನಿಮ್ಮ ವೈದ್ಯರ ಸಲಹೆಯೊಂದಿಗೆ ಲಸಿಕಾ ಪಟ್ಟಿ ಪರಿಶೀಲಿಸಿ, ಅಗತ್ಯ ಲಸಿಕೆಗಳನ್ನು ಪಡೆಯುವುದು ಅತ್ಯಂತ ಮುಖ್ಯ. ಲಸಿಕೆಗಳು ಕೇವಲ ಮಕ್ಕಳಿಗಲ್ಲ — ಅವು ಜೀವನಪೂರ್ತಿ ರಕ್ಷಣೆಯನ್ನು ನೀಡುವ ಆರೋಗ್ಯ ಹೂಡಿಕೆಯಾಗಿದೆ. ಸುರಕ್ಷಿತ, ಆರೋಗ್ಯಕರ ಬದುಕಿಗಾಗಿ ಇಂದೇ ಲಸಿಕೆ ಪಡೆಯಿರಿ. ಆರೋಗ್ಯವಾಗಿರಿ.