FactCheck:ಯಜುವೇಂದ್ರ ಚಹಲ್ ಜೊತೆ ಮತ್ತೊಂದು ‌ಸುಂದರಿ, ಆಟದ ಮಧ್ಯೆ ಮುತ್ತಿಟ್ಟ ಚಹಲ್

 | 
Hj
ಈಗೆಲ್ಲಾ ವಿಚ್ಚೇದನ ಕಾಮನ್ ಆಗ್ಬಿಟ್ಟಿದೆ ಬಿಡಿ. ಹೊಸಬರ ಜೊತೆ ಪ್ಯಾಚಪ್ ಕೂಡಾ.ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯದ ವೇಳೆ ಯುಜ್ವೇಂದ್ರ ಚಹಾಲ್ ಕಾಣಿಸಿಕೊಂಡಿದ್ದಾರೆ. ಚಹಾಲ್ ಒಬ್ಬರೇ ಪಂದ್ಯ ನೋಡಲು ಬಂದಿದ್ದರೆ ಅಷ್ಟಾಗಿ ಗಮನ ಸೆಳೆಯುತ್ತಿರಲಿಲ್ಲ, ಆದರೆ ಅವರು ಮಹಿಳೆ ಜೊತೆ ಕಾಣಿಸಿಕೊಂಡಿದ್ದರಿಂದ ಗಮನ ಸೆಳೆದಿದ್ದು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ.
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಯುಜ್ವೇಂದ್ರ ಚಹಾಲ್ ಮಹಿಳೆಯೊಬ್ಬರ ಜೊತೆ ಆತ್ಮೀಯವಾಗಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಮಹಿಳೆ ಯಾರು ಎನ್ನುವ ಬಗ್ಗೆ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಮಹಿಳೆಯನ್ನು ಪತ್ತೆ ಹಚ್ಚಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ, ಅವರು ಆರ್ ಜೆ ಮಹ್ವಾಶ್ ಎಂದು ಗುರುತಿಸಿದ್ದಾರೆ.
‌ಯುಜ್ವೇಂದ್ರ ಚಹಾಲ್ ಜೊತೆ ಕಾಣಿಸಿಕೊಂಡ ಹುಡುಗಿಯನ್ನಯ ಆರ್ ಜೆ ಮಹ್ವಾಶ್ ಎಂದು ಕ್ರಿಕೆಟ್ ಅಭಿಮಾನಿಗಳು ಗುರುತಿಸಿದ್ದಾರೆ. ಇಬ್ಬರು ಆಗಾಗ್ಗೆ ಭೇಟಿಯಾಗುತ್ತಿರುವ ಹಲವು ಹಳೆಯ ಫೋಟೊಗಳು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.ಆರ್ ಜೆ ಮಹ್ವಾಶ್ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಭಾರತ - ನ್ಯೂಜಿಲೆಂಡ್ ಪಂದ್ಯದವನ್ನು ನೋಡುತ್ತಿರುವ ಬಗ್ಗೆ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಚಹಾಲ್ ಜೊತೆ ಇರುವುದು ಅವರೇ ಎನ್ನುವುದಕ್ಕೆ ಇದು ಸ್ಪಷ್ಟನೆ ಕೊಟ್ಟಿದೆ.
ಆದ್ರೆ ಇಬ್ಬರ ನಡುವೆ ಇರುವುದು ಬರೀ ಸ್ನೇಹವಾ ಅದಕ್ಕೂ ಮೀರಿದ ಬಾಂಧವ್ಯ ಇದೆಯಾ ಎನ್ನುವ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ನಡುವಿನ ಸಂಬಂಧ ಹಳಸಿದ್ದು ಇಬ್ಬರು ವಿಚ್ಛೇದನ ಪಡೆಯುತ್ತಾರೆ ಎನ್ನುವ ವದಂತಿಗಳು ಹಲವು ತಿಂಗಳಿನಿಂದ ಹರಿದಾಡುತ್ತಿದ್ದವೂ, ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದರು. 
ಚಹಾಲ್ ಧನಶ್ರೀ ಜೊತೆಗಿದ್ದ ಎಲ್ಲಾ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ. ವಿಚ್ಛೇದನದ ನಂತರ ಚಹಾಲ್‌ ಡಿಪ್ರೆಷನ್‌ನಲ್ಲಿದ್ದಾರೆ ಎಂದು ವರದಿಯಾಗಿತ್ತು ಆದರೆ ಚಹಾಲ್ ಬೇರೆ ಹುಡುಗಿ ಜೊತೆ ಆರಾಮಾಗಿ ಪಂದ್ಯ ವೀಕ್ಷಣೆ ಮಾಡುತ್ತಿದ್ದಾರೆ, ಸತ್ಯ ಗೊತ್ತಿಲ್ಲದೆ ಯಾರ ಪರವೂ ಮಾತನಾಡಬಾರದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.