FactCheck:ಆನಂದ್ ಗುರೂಜಿ ವ್ಯಕ್ತಿಯ ವಿಡಿಯೋ ಇದೆ; ದಿವ್ಯಾ ವಸಂತ ಅಸಲಿಯತ್ತು ಏನು
May 17, 2025, 13:55 IST
|

ಪತ್ರಕರ್ತೆ ಹಾಗೂ ನಿರೂಪಕಿ ಎಂದು ಹೇಳಿಕೊಂಡಿರುವ ದಿವ್ಯಾ ವಸಂತ್ ಹಾಗೂ ಯುಟ್ಯೂಬ್ ಚಾನಲ್‌ನ ಕೃಷ್ಣಮೂರ್ತಿ ವಿರುದ್ಧ ಜ್ಯೋತಿಷಿ ಆನಂದ್ ಗುರೂಜಿಗೆ ಬ್ಲ್ಯಾಕ್‌ಮೇಲ್ ಮಾಡಿರುವ ಹಾಗೂ ಕೊಲೆ ಬೆದರಿಕೆ ಹಾಕಿರುವ ಆರೋಪ ಮಾಡಲಾಗಿದೆ. ಈ ಸಂಬಂಧ ಗುರೂಜಿ ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಮ್ಮ ಬಳಿ ಅಶ್ಲೀಲ ವಿಡಿಯೋಗಳಿದ್ದು, ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದರು. ನಾನು ಹಣ ಕೊಡಲು ಒಪ್ಪದೇ ಇದ್ದಾಗ ಕೊಲೆ ಬೆದರಿಕೆಯೂ ಹಾಕಿದ್ದರು ಎಂದು ಗುರೂಜಿ ಆರೋಪಿಸಿದ್ದಾರೆ. ಈ ಘಟನೆಯಾದ ಕೆಲವು ದಿನಗಳ ನಂತರ ಕೃಷ್ಣಮೂರ್ತಿ ಆಶ್ರಮಕ್ಕೆ ಬಂದು ವಿಡಿಯೋ ರೆಕಾರ್ಟ್ ಮಾಡಿ, ತನ್ನ ಯುಟ್ಯೂಬ್ ಹಾಗೂ ಚಾನಲ್‌ನಲ್ಲಿ ಪ್ರಸಾರ ಮಾಡಿ ಮಾನಸಿಕ ಹಿಂಸೆ ನೀಡಿದ್ದ. ವಿಡಿಯೊ ಪ್ರಸಾರ ಮಾಡಬಾರದು ಎಂದು ಕೋರ್ಟ್‌ನಿಂದ ತಡೆಯಾಜ್ಞೆ ತಂದ ನಂತರವೂ ಆತನ ಚಾನಲ್‌ನಲ್ಲಿ ಅಶ್ಲೀಲ ಪದ ಬಳಸಿ ವಿಡಿಯೊ ಪ್ರಸಾರ ಮಾಡಿದ್ದರು ಎಂದು ಗುರೂಜಿ ದೂರಿನಲ್ಲಿ ತಿಳಿಸಿದ್ದಾರೆ.
ಇವರು ಮೂರನೇ ವ್ಯಕ್ತಿಯಿಂದ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದರು. ಕೋರ್ಟ್ ಮತ್ತೆ ತಡೆಯಾಜ್ಞೆ ಕೊಟ್ಟಿತ್ತು. ಆದರೂ ಕೃಷ್ಣಮೂರ್ತಿ ಮತ್ತೊಂದು ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಹಾಕಿದ್ದ. ಹಾಗಾಗಿ ಕೃಷ್ಣಮೂರ್ತಿ, ದಿವ್ಯಾ ವಸಂತ್ ವಿರುದ್ಧ ಕ್ರಮ ಕೈಗೊಳ್ಳವಂತೆ ದೂರಿನಲ್ಲಿ ತಿಳಿಸಿದ್ದಾರೆ.ಸಾದಹಳ್ಳಿ ಗೇಟ್ ಬಳಿ ನಾನು ಎಂಟು ವರ್ಷಗಳಿಂದ ವಾಸವಿದ್ದೇನೆ. ನಾನು ಸಾರ್ವಜನಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದು, ಜ್ಯೋತಿಷ್ಯ, ವಾಸ್ತುಶಿಲ್ಪದ ಕುರಿತು ಪುಸ್ತಕಗಳನ್ನು ಬರೆದಿದ್ದೇನೆ.
ಕನ್ನಡದ ಖಾಸಗಿ ಚಾನಲ್‌ನಲ್ಲಿ ಜ್ಯೋತಿಷ್ಯ ಕಾರ್ಯಕ್ರಮದಲ್ಲೂ ನಾನು ಅತಿಥಿಯಾಗಿ ಪಾಲ್ಗೊಳ್ಳುತ್ತಿರುವೆ. ಕಳೆದ ಆಗಸ್ಟ್ ಕಾರ್ಯಕ್ರಮ ಮುಗಿಸಿ ಆಶ್ರಮಕ್ಕೆ ಬರುತ್ತಿದ್ದಾಗ ಅಪರಿಚಿತರು ನನ್ನ ಕಾರು ಅಡ್ಡಗಟ್ಟಿ ಏಕವಚನದಲ್ಲಿ ನಿಂದಿಸಿ ದೌರ್ಜನ್ಯ ಎಸಗಿದ್ದರು ಎಂದೂ ದೂರಿನಲ್ಲಿ ವಿವರಿಸಿದ್ದಾರೆ.ಗುರೂಜಿ ನೀಡಿರುವ ದೂರು ಆಧರಿಸಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಕೃಷ್ಣಮೂರ್ತಿ (ಎ1) ಹಾಗೂ ದಿವ್ಯಾ ವಸಂತ್ (ಎ2) ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ. ಈ ಹಿಂದೆಯೂ ದಿವ್ಯಾ ವಸಂತ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದು ಕೇಸ್ ದಾಖಲಾಗಿದ್ದವು. ಹನಿಟ್ರ್ಯಾಪ್ ಕೇಸ್‌ನಲ್ಲಿ ಅರೆಸ್ಟ್ ಕೂಡ ಆಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವವಿವರಿಸಿದ್ದಾರೆ ಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.