FactCheck:Rolls royce ಕಾರಿನ ಮೇಲೆ ಬೃಹತ್ ಬಂಡೆ ಬಿದ್ದರು ಏನೂ ಆಗಿಲ್ಲ

 | 
Jjz

ಇತ್ತೀಚಿಗಷ್ಟೇ ಅಂಕೋಲದಲ್ಲಿ ಗುಡ್ದ ಕುಸಿದು ಕೇರಳ ಮೂಲದ ಅರ್ಜುನ್ ಸಾವನ್ನಪ್ಪಿದ ಘಟನೆ ಇನ್ನು ನಮ್ಮ ಕಣ್ಣಿಗೆ ಕಟ್ಟಿದಂತೆಯೇ ಇದೆ. ಅಂದು ಗುಡ್ಡ ಕುಸಿತದ ಸಂದರ್ಭದಲ್ಲಿ ಆತ Benze ಲಾರಿ‌ ಒಳಗಡೆ ಇದ್ದ ಕಾರಣದಿಂದ ಅಸುನೀಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರೋ ವಿಚಾರ. ಆದರೆ ಇದೀಗ ಈ rollsroy ಕಾರಿನ ಮೇಲೆ ಗುಡ್ಡದ ಮೇಲಿನಿಂದ ಬೃಹತ್ ಕಲ್ಲು ಬಿದ್ದರು ಏನೂ ಆಗಿಲ್ಲ, ಹಾಗಾದರೆ ಈ ಕಾರು ಅರ್ಜುನ್ ಬಳಸುತ್ತಿದ್ದ benz ಕಾರಿಗಿಂತಲೂ ಗಟ್ಟಿ ಇದೆಯಾ? ಈ 12 ಕೋಟಿ ಬೆಲೆಯ rollsroy ಕಾರಿಗೆ ಈ ಮಟ್ಟಿಗೆ ಭದ್ರತಾ ವ್ಯವಸ್ಥೆ ಇದಿಯಾ.

ಅದು ಕೂಡ ಗುಡ್ಡದ ಮೇಲಿಂದ ಬೀಳುವಂತಹ ಸಾವಿರಾರು ತೂಕದ ಬಂಡೆ ಕಲ್ಲನ್ನೇ ಮೀರಿಸುವ ಶಕ್ತಿ ಈ‌ ಕಾರಿಗಿದೀಯಾ ಅನ್ನೊದು ಇದೀಗ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಹೌದು, ಸ್ನೇಹಿತರೆ, ಕಳೆದ ಮೂರು ದಿನಗಳಿಂದ rollsroy ಕಾರೊಂದರ ಮೇಲೆ ಬಂಡೆ ಕಲ್ಲು ಬಿದ್ದರು ಕೂಡ ಏನೂ ಆಗದೆ ಮುಂದೆ ಸಾಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ‌‌ ವಿಡಿಯೋ ಜಾಲತಾಣದಲ್ಲಿ ಸಾಕಷ್ಟು ಗೊಂದಲ ಎಬ್ಬಿಸಿದೆ.

ವೀಕ್ಷಕರೆ, ಈ ವಿಡಿಯೋ ಅಸಲಿ ಕಥೆ ಬೇರೆಯೇ ಇದೆ. ಇತ್ತಿಚೆಗೆ ‌ಬಂದಂತಹ AI ತಂತ್ರಜ್ಞಾನದ ಮೂಲಕ ಈ‌ ವಿಡಿಯೋ ಮಾಡಿ ಎಲ್ಲೆಡೆ ವೈರಲ್ ಮಾಡಿದ್ದಾರೆ.ಆದರೆ AI ಬಗ್ಗೆ ತಿಳಿಯದ ಕೆಲ ವ್ಯಕ್ತಿಗಳು ಇದು ನಿಜ ಅಂದುಕೊಂಡು ಗೊಂದಲದಲ್ಲಿದ್ದಾರೆ . ವೀಕ್ಷಕರೆ, ಇಂತಹ ಟೆಕ್ನಾಲಜಿ AI ಮೂಲಕ ಬಂದರೂ ಕೂಡ ಮುಂದಿನ ದಿನಗಳಲ್ಲಿ ನಮ್ಮ ದೇಶದ MOTOR Company ಗಳು ಇದನ್ನು ನಿಜರೂಪಕ್ಕೆ ತಂದರು ತರಬಹುದು.‌ ಯಾಕೆಂದರೆ AI ಮೂಲಕ ಮೊದಲು ಬಿಡುಗಡೆ ಮಾಡಿ.. ತದನಂತರ ಕಾರ್ಯರೂಪಕ್ಕೆ ತರಲು ಮುಂದಾಗುತ್ತಾರೆ.

ವೀಕ್ಷಕರೆ, ಒಟ್ಟಾರೆಯಾಗಿ ಸದ್ಯಕ್ಕೆ AI ಕಾಲ‌ ಬಂದುಬಿಟ್ಟಿದೆ, ಯಾವುದು‌‌ Real ಯಾವುದು Fake ಅಂತನೇ ಗೊತ್ತಾಗದೆ ಭ್ರಮೆಯಲ್ಲೇ ದಿನ ಕಳೆಯುವಂತಾಗಿದೆ.