FactCheck:ಕುಂಭಮೇಳಕ್ಕೆ‌ ಹೋಗಿ ಮದುವೆಯಾದ ವೈಷ್ಣವಿ ಗೌಡ, ಕತ್ತಿನಲ್ಲಿ ಮಾಂಗಲ್ಯ ಸರ ಕಂಡ ಕನ್ನಡಿಗರು

 | 
Hji
ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ  ಅವರ ಈ ಬಾರಿಯ ಜನ್ಮದಿನ ತುಂಬ ವಿಶೇಷ ಎನ್ನಬಹುದು. 144 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳದಲ್ಲಿ ವೈಷ್ಣವಿ ಗೌಡ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ. ಇದು ನೆನಪಿಡುವಂಥಹ ಸಂದರ್ಭ ಎಂದು ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.
ವೈಷ್ಣವಿ ಗೌಡ ಅವರು ಕುಂಭಮೇಳಕ್ಕೆ ಹೋಗಿ ಅಲ್ಲಿ ಶೂಟಿಂಗ್‌ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ವೈಷ್ಣವಿ ಗೌಡ, ಗಗನ್‌ ಚಿನ್ನಪ್ಪ, ರೀತು ಸಿಂಗ್‌ ಹಾಗೂ ಸೀತಾರಾಮ ಧಾರಾವಾಹಿ ತಂಡವು ಪ್ರಯಾಗ್‌ರಾಜ್‌ಗೆ ಪ್ರಯಾಣ ಬೆಳೆಸಿತ್ತು. ವಿಮಾನದಲ್ಲಿ ಇವರೆಲ್ಲರೂ ಪ್ರಯಾಗ್‌ರಾಜ್‌ಗೆ ಹೋಗಿದ್ದಾರೆ. ವಿಮಾನದಲ್ಲಿ ಒಂದಷ್ಟು ಸುಂದರ ಸಮಯ ಕಳೆದಿದ್ದಾರೆ.
ಇನ್ನು ಸೀತಾ ಪಾತ್ರದಾರಿ ವೈಷ್ಣವಿ ಕುತ್ತಿಗೆಯಲ್ಲಿ ತಾಳಿಯನ್ನು ನೋಡಿ ಮದುವೆಆಗೋಯ್ತಾ ಎಂದು ಕಮೆಂಟ್ ಕೂಡ ಮಾಡಿದ್ದಾರೆ.ಇನ್ನು ಬೋಟಿಂಗ್‌ ಕೂಡ ಮಾಡಿದ್ದಾರೆ. ಆ ವೇಳೆ ಗಗನ್‌ ಅವರಿಗೆ ಭಯ ಆಯ್ತು ಎಂದು ವೈಷ್ಣವಿ ಗೌಡ ಹೇಳಿದ್ದಾರೆ, ಆಗ ಗಗನ್‌ ಇಲ್ಲ ಎಂದು ನಕ್ಕಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ಬೋಟಿಂಗ್‌ ಮಾಡಿರೋ ರೀತು ಸಿಂಗ್‌ಗೆ ಬೋಟಿಂಗ್‌ ಭಯ ಇಲ್ವಂತೆ. ಇನ್ನು ವೈಷ್ಣವಿ ಗೌಡ ಅವರು ಅಮೃತಸ್ನಾನ ಮಾಡಿದ್ದಲ್ಲದೆ, ಹಣೆಗೆ ತಿಲಕ ಕೂಡ ಇಟ್ಟುಕೊಂಡಿದ್ದಾರೆ. 
ಇಷ್ಟೇ ಅಲ್ಲದೇ ಪ್ರಯಾಗ್‌ರಾಜ್‌ನಲ್ಲಿ ಕೇಕ್‌ ಕತ್ತರಿಸುವ ಮೂಲಕ ವೈಷ್ಣವಿ ಗೌಡ ಅವರ ಜನ್ಮದಿನವನ್ನು ಆಚರಿಸಲಾಯಿತು. ಮೊದಲ ಬಾರಿಗೆ ತಂದೆ-ತಾಯಿಯಿಂದ ಇದ್ದು ಜನ್ಮದಿನವನ್ನು ಆಚರಿಸಿಕೊಳ್ತಿರೋದು ಒಂದು ಲೆಕ್ಕದಲ್ಲಿ ಎಮೋಶನಲ್‌ ಆಗಿದೆ ಎಂದು ವೈಷ್ಣವಿ ಹೇಳಿಕೊಂಡಿದ್ದಾರೆ. ಮಧ್ಯರಾತ್ರಿ ಅಪ್ಪ-ಅಮ್ಮ ನನಗೆ ಶುಭಾಶಯ ತಿಳಿಸುತ್ತಿದ್ದರು ಇಲ್ಲವೇ ಬೆಳಗ್ಗೆ ನಾನು ಅವರ ಆಶೀರ್ವಾದ ಪಡೆಯುತ್ತಿದ್ದೆ. ಈ ಬಾರಿ ಇದೆಲ್ಲ ಮಿಸ್‌ ಆಗಿದೆ ಎಂದು ವೈಷ್ಣವಿ ಗೌಡ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.