ವಯಸ್ಸಿಗೆ ಬರುವ ಮುನ್ನವೇ ಮದುವೆ ಮಾಡಿಸಿದ ಮನೆಯವರು; ನ ಟಿ ಜಯಶ್ರೀ ಕ ಣ್ಣೀರ ಮಾತು

 | 
Hu

ಮುದ್ದು ಮುಖ ಭಾವನೆಗಳನ್ನು ಹೊರಸೂಸುವ ಕಣ್ಣುಗಳು ಅಭಿನಯಕ್ಕೆ ಹೇಳಿ ಮಾಡಿಸಿದ ದೇಹ ಹೇಗೆ 24 ವರ್ಷದ ಕಿರುತೆರೆ ಜರ್ನಿಯಲ್ಲಿ 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಜಯಶ್ರೀ ರಾಜ್ ಅವರು ಇದೀಗ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದು, ವೀಕ್ಷಕರ ಮನ ಗೆದ್ದಿದ್ದಾರೆ. ಚುಕ್ಕಿ ತಾರೆ ಧಾರಾವಾಹಿಯಲ್ಲಿ ಯಶೋದಾ ಕರ್ವೆ ಎಂಬ ಪಾತ್ರದಲ್ಲಿ ಮಿಂಚುತ್ತಿದ್ದು, ತೆಲುಗು ಕಿರುತೆರೆಯಲ್ಲೂ ಎರಡು ಧಾರಾವಾಹಿಗಳಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ನಟಿಸುತ್ತಿರುವ ಜಯಶ್ರೀ ಸದಾ ಕಾಲ ಆಕ್ಟೀವ್ ಆಗಿರಲು ಬಯಸುತ್ತಾರಂತೆ. ಬ್ಯುಸಿಯಾಗಿರುವುದಕ್ಕೆ ಖುಷಿ ಇದೆ ಎಂದು ಹೇಳಿದ್ದಾರೆ. ಕಿರುತೆರೆ ಹೊರತು ಪಡಿಸಿ ಸಿನಿಮಾಗಳಲ್ಲೂ ನಟಿಸಿರುವ ಜಯಶ್ರೀ ಅವರು ಸದ್ಯ ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ನಟಿ ಜಯಶ್ರೀ ಅವರು 35ಕ್ಕೂ ಅಧಿಕ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. 

ಮೊದಲ ಬಾರಿಗೆ ಮದುವೆ ಮನೆಯಲ್ಲಿ ಜಯಶ್ರೀ ಅವರನ್ನು ನೋಡಿದ ಟಿ ಎನ್ ಸೀತಾರಾಮ್ ಅವರು ನಟನೆಗೆ ಆಹ್ವಾನವಿತ್ತರಂತೆ. ಅವಕಾಶವನ್ನು ಬಳಸಿಕೊಂಡ ಜಯಶ್ರೀ ಅವರು ಬಹಳ ಚಿಕ್ಕ ವಯಸ್ಸಿಗೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಇವರ ಮೊದಲ ಧಾರಾವಾಹಿ ಕಥೆಗಾರ. ಬಳಿಕ ಮಾಯಾಮೃಗ, ಜನನಿ, ಸಮಾಗಮ, ಸಹನಾ, ಭಾರ್ಗವಿ, ಪುಣ್ಯಕೋಟಿ, ರಥಸಪ್ತಮಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಕನ್ನಡದ ಪ್ರತಿಭಾವಂತ ಕಿರುತೆರೆ ನಟಿಯರಲ್ಲಿ ಜಯಶ್ರೀ ರಾಜ್ ಕೂಡ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ತರಹೇವಾರಿ ಪಾತ್ರಗಳಲ್ಲಿ ನಟಿಸಿರುವ ಜಯಶ್ರೀ, ಕೇವಲ 8ನೇ ಕ್ಲಾಸ್ ಓದುವಾಗಲೇ ನಟನೆ ಮಾಡಲು ಶುರು ಮಾಡಿದರು. ಮೊದಲು ನಿರ್ದೇಶಕ ಸೀತಾರಾಮ್ ಅವರ ಗರಡಿಯಲ್ಲಿ ಪಳಗಿದರು. ಮಾಯಾಮೃಗ ಧಾರಾವಾಹಿಯ ಮೂಲಕ ಛಾಪು ಮೂಡಿಸಿದರು. ಆ ಕಾಲಕ್ಕೆ ಈ ಧಾರಾವಾಹಿ ದೊಡ್ಡ ಮಟ್ಟದ ಜನ ಮನ್ನಣೆಗಳಿಸಿತ್ತು. 

ಸದ್ಯ ತೆಲುಗಿನ ಪಡಮಟ್ಟಿ ಸಂಧ್ಯಾರಾಗಂ ಮತ್ತು ಮಲ್ಲಿ ಎಂಬ ಎರಡು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಬಹಳ ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಮರಳಿರುವುದಕ್ಕೆ ವೀಕ್ಷಕರು ಹ್ಯಾಪಿ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.