ಅನಾರೋಗ್ಯ ಹಿನ್ನೆಲೆ ಖ್ಯಾತ ಕಲಾವಿದ ರಘು ಇ ಹಲೋಕ, ಓಡೋಡಿ ಬಂದ ದರ್ಶನ್ ಯಶ್ ಸುದೀಪ್
Mar 22, 2025, 10:03 IST
|

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಹಾಗೂ ಹಿರಿಯ ನಟ ನಿಧನರಾಗಿದ್ದು, ಇಡೀ ಚಿತ್ರರಂಗಕ್ಕೆ ಶಾಕ್ ನೀಡಿದೆ. ರೆಬೆಲ್ ಸ್ಟಾರ್ ಅಂಬರೀಷ್ ಅವರ ನೆಚ್ಚಿನ ಡೈರೆಕ್ಟರ್ ಎಂದು ಕರೆಸಿಕೊಂಡಿದ್ದ ನಿರ್ದೇಶಕ ಎ.ಟಿ.ರಘು ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಘು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ಹಿಟ್ ಸಿನಿಮಾ ಮಂಡ್ಯದ ಗಂಡು ಸೇರಿದಂತೆ 55ಕ್ಕೂ ಹೆಚ್ಚು ಸಿನಿಮಾಗಳನ್ನು ಎ.ಟಿ ರಘು ಅವರು ನಿರ್ದೇಶಿಸಿದ್ದರು.
ರೆಬೆಲ್ ಸ್ಟಾರ್ ಅಂಬರೀಶ್ ಒಬ್ಬರಿಗೇ ರಘು ಅವರು 27 ಸಿನಿಮಾಗಳನ್ನು ಡೈರೆಕ್ಟ್ ಮಾಡಿದ್ದರು. ಕಳೆದ ಕೆಲ ವರ್ಷಗಳಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಆರ್ಥಿಕ ಸಮಸ್ಯೆಯಿಂದಲೂ ಒದ್ದಾಡುತ್ತಿದ್ದ ಅವರಿಗೆ ಜೀವನ ನಡೆಸುವುದು ಕೂಡ ಕಷ್ಟವಾಗಿತ್ತು. ಇದಲ್ಲದೆ ಅವರಿಗೆ ಕಿಡ್ನಿ ಫೇಲ್ಯೂರ್, ಹೃದಯ ಚಿಕಿತ್ಸೆ, ಎರಡು ಕಾಲು ಹಾಗೂ ಕಣ್ಣುಗಳ ಆಪರೇಷನ್ ಕೂಡ ಆಗಿತ್ತು. ಕಳೆದ ಹಲವು ವರ್ಷಗಳಿಂದ ಅವರು ವೀಲ್‌ಚೇರ್‌ನಲ್ಲೇ ಇದ್ದರು.
ಕನ್ನಡ, ಹಿಂದಿ, ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಎ.ಟಿ.ರಘು ಅಜಯ್-ವಿಜಯ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. 70ರ ದಶಕದಲ್ಲಿ ದೇವರ ಕಣ್ಣು ಎಂಬ ಸಿನಿಮಾಗೆ ರಘು ಅವರು ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಆ ಬಳಿಕ ಅಂಬರೀಶ್ ಅವರೇ ನನ್ನ ದೇವರ ಕಣ್ಣಾಗಿ ಬಾಳಿಗೆ ಬೆಳಕಾದರು. ಕೊಡಗಿನಿಂದ ಬಂದಿದ್ದ ನಾನು ಎ.ಟಿ. ರಘು ಆಗಿ ಗುರುತಿಸಿಕೊಳ್ಳಲು ಅಂಬರೀಶ್ ಅವರೇ ಮುಖ್ಯ ಕಾರಣ ಎಂದು ರಘು ಈ ಹಿಂದೆ ಹೇಳಿದ್ದರು.
ರಘು ಅವರು ಕನ್ನಡ ಚಲನಚಿತ್ರ ನಿರ್ದೇಶಕರು, ನಿರ್ಮಾಪಕರು ಹಾಗು ನಟರಾಗಿಯೂ ಗುರುತಿಸಿಕೊಂಡಿದ್ದರು. ಆದರೆ ಮಂಡ್ಯದ ಗಂಡು ಅಂಬರೀಶ್ ಅವರಿಗೆ ಇವರು ಹೆಚ್ಚಾಗಿ ಸಿನಿಮಾಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದರು. ಇವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಹಲವು ಸಿನಿಮಾಗಳು ಹಿಟ್ ಕಂಡಿದ್ದವು. ಮಂಡ್ಯದ ಗಂಡು, ಮಿಡಿದ ಹೃದಯಗಳು, ಇನ್ಸ್‌ಪೆಕ್ಟರ್ ಕ್ರಾಂತಿ ಕುಮಾರ್, ಪುಟ್ಟ ಹೆಂಡ್ತಿ, ಮೈಸೂರು ಜಾಣ, ಅಂತಿಮ ತೀರ್ಪು, ನ್ಯಾಯಕ್ಕಾಗಿ ನಾನು, ಪದ್ಮವ್ಯೂಹ, ಸೂರ್ಯೋದಯ, ನ್ಯಾಯ ನೀತಿ ಧರ್ಮ, ಅವಳ ನೆರಳು, ಕೆಂಪು ಸೂರ್ಯ, ಪುಟ್ಟ ಹೆಂಡ್ತಿ, ಮೈಸೂರು ಜಾಣ, ಸೂರ್ಯೋದಯ, ಮಿಡಿದ ಹೃದಯಗಳು, ಜೈಲರ್ ಜಗನ್ನಾಥ್, ಶ್ರಾವಣ ಸಂಜೆ, ಬೇಟೆಗಾರ ಸೇರಿದಂತೆ 55 ಕ್ಕೂ ಹೆಚ್ಚು ಸಿನಿಮಾಗಳನ್ನು ರಘು ನಿರ್ದೇಶನ ಮಾಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.