ರಾಜಮೌಳಿ ಹೆಸರು ಬರೆದಿಟ್ಟು ಆಪ್ತ ಸ್ನೇಹಿತ ಸಾ ವು, ಸ್ನೇಹಿತನಿಗೆ ಮೋಸ ಮಾಡಿ ಫ್ಯಾನ್ ಇಂಡಿಯಾ ನಿರ್ದೇಶಕ
Feb 28, 2025, 10:17 IST
|

ಟಾಲಿವುಡ್ ಸ್ಟಾರ್ ಡೈರೆಕ್ಟರ್ ಎಸ್.ಎಸ್ ರಾಜಮೌಳಿ ವಿರುದ್ಧ ಆಪ್ತ ಸ್ನೇಹಿತನೊಬ್ಬ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಆತ್ಮಹತ್ಯೆಗೆ ರಾಜಮೌಳಿ ಕಾರಣ ಎಂದು ಡೆತ್‌ನೋಟ್ ಬರೆದಿರುವ ರಾಜಮೌಳಿ ಸ್ನೇಹಿತ ಶ್ರೀನಿವಾಸ್ ರಾವ್ ತೆಲುಗು ಚಿತ್ರರಂಗದಲ್ಲೇ ದೊಡ್ಡ ಸಂಚಲನ ಸೃಷ್ಟಿಸಿದ್ದಾರೆ.
ಯಮದೊಂಗ ನಿರ್ಮಾಪಕ ಶ್ರೀನಿವಾಸ್ ರಾವ್ ಅವರು ರಾಜಮೌಳಿ ವಿರುದ್ಧ ಡೆತ್‌ನೋಟ್ ಬರೆದಿದ್ದು, ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಆತ್ಮಹತ್ಯೆಗೆ ರಾಜಮೌಳಿ ಕಾರಣ ಎಂದಿರುವ ಶ್ರೀನಿವಾಸ್ ರಾವ್ ಅವರು ಸ್ಫೋಟಕ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಗುರುವಾರ ಶ್ರೀನಿವಾಸ್ ವಿಡಿಯೋ ಹೇಳಿಕೆ ಮತ್ತು ಮೆಟ್ಟು ಪೊಲೀಸ್ ಠಾಣೆಗೆ ಪತ್ರ ಬರೆದು ರಾಜಮೌಳಿ ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ. ನಾನು ಮತ್ತು ರಾಜಮೌಳಿ 1990ರಿಂದಲೇ ಸ್ನೇಹಿತರು. ನಮ್ಮ ಗೆಳತನದ ಬಗ್ಗೆ ಖ್ಯಾತ ನಿರ್ಮಾಪಕರೊಬ್ಬರಿಗೆ ಗೊತ್ತಿದೆ. ನಾನು ಸಾಯಲು ಹೊರಟಿದ್ದೇನೆ. ನನ್ನ ಸಾವಿಗೆ ರಾಜಮೌಳಿ ಹಾಗೂ ರಮಾ ರಾಜಮೌಳಿ ಅವರೇ ಕಾರಣ. ಇದನ್ನು ನಾನು ಪಬ್ಲಿಸಿಟಿಗೋಸ್ಕರ ಮಾಡುತ್ತಿಲ್ಲ.
ಒಬ್ಬ ಹೆಣ್ಣಿಗಾಗಿ ರಾಜಮೌಳಿ ನನ್ನ ಜೀವನವನ್ನೇ ಹಾಳು ಮಾಡಿಬಿಟ್ಟ. ನಾನು ರಾಜಮೌಳಿ ಒಬ್ಬಳನ್ನು ಪ್ರೀತಿಸಿದ್ದೆವು. ನಮ್ಮದು ʼಆರ್ಯ -2ʼ ತರ ಲವ್ ಸ್ಟೋರಿ ಇತ್ತು. ರಾಜಮೌಳಿಗಾಗಿ ನಾನು ಪ್ರೀತಿಯನ್ನು ತ್ಯಾಗ ಮಾಡಿದೆ. 55 ವರ್ಷದಿಂದ ನಾನು ಒಂಟಿಯಾಗಿರಲು ರಾಜಮೌಳಿಯೇ ಕಾರಣ. ಯಮದೊಂಗದ ತನಕ ಒಟ್ಟಿಗೆ ಕೆಲಸ ಮಾಡುತ್ತಿದ್ದರೂ ಒಬ್ಬ ಹೆಣ್ಣಿಗಾಗಿ ನನ್ನ ವೃತ್ತಿಜೀವನವನ್ನು ಹಾಳುಮಾಡಿದರು ಎಂದು ಆರೋಪಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.