ಕಲಾವಿದೆ ಇಂದುಶ್ರೀ ಸೀಮಂತ, 'ಪುಟಾಣಿ ಡಿಂಕು ಬಲಿ೯' ಎಂದು ಹಾರೈಸಿದ ಫ್ಯಾನ್ಸ್

 | 
ೂೂ

ಮಾತನಾಡೋ ಗೊಂಬೆಗಳ ಜೊತೆಗೆ ಇಡಿ ಜಗತ್ತನ್ನೇ ಸುತ್ತಿರುವ ಇಂದುಶ್ರೀ ರವೀಂದ್ರ, ತಮ್ಮ ವಿಶಿಷ್ಠ ಕಲೆಗೆ ವಿಪರೀತ ಫೇಮಸ್. ಭಾರತದ ಏಕೈಕ ಮಹಿಳಾ ವೆಂಟ್ರಿಲೋಕ್ವಿಸ್ಟ್(ಧ್ವನಿಮಾಯೆ) ಎಂಬ ಹೆಗ್ಗಳಿಕೆ ಪಡೆದಿರುವ ಇಂದುಗೆ ಸೀಮಂತ ಸಂಭ್ರಮ.

ಕಿರುತೆರೆಯ ಹಲವು ಕಾರ್ಯಕ್ರಮಗಳಲ್ಲಿ ಇಂದುಶ್ರೀ ರವೀಂದ್ರ ತಮ್ಮ ಮಾತನಾಡುವ ಗೊಂಬೆಗಳಿಂದ ವೀಕ್ಷಕರಿಗೆ ಕಾಮಿಡಿ ಇಂಜೆಕ್ಷನ್ ಕೊಟ್ಟಿದ್ದಾರೆ. ಅಮೇರಿಕಾ, ಆಸ್ಟ್ರೇಲಿಯಾ, ದುಬೈ, ಥೈಲ್ಯಾಂಡ್, ಜರ್ಮನಿ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಪ್ರದರ್ಶನ ನೀಡಿ ಖ್ಯಾತಿ ಪಡೆದಿರುವ ಇಂದುಶ್ರೀ ರವೀಂದ್ರ 2017ರಲ್ಲಿ ಅಶ್ವತ್ಥ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. 

ಇಂದುಶ್ರೀ - ಅಶ್ವತ್ಥ್ ದಂಪತಿ ಹೊಸ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ ಇಂದುಶ್ರೀ ಹಾಗೂ ರವೀಂದ್ರ ದಂಪತಿ. ಇಂದುಶ್ರೀ ಸೀಮಂತದಲ್ಲಿ ಕುಟುಂಬ ಸದಸ್ಯರಷ್ಟೇ ಸಂಭ್ರಮದಲ್ಲಿದ್ದವರು ಅವರ ಕೋಕಿಲ ಅಜ್ಜಿ ಹಾಗೂ ತಾತ ಗೊಂಬೆಗಳು. ಇಂದುಶ್ರೀ ತಮ್ಮ ಸೀಮಂತದಲ್ಲೂ ಧ್ವನಿಮಾಯೆಯ ಹಾಸ್ಯ ಮೆರೆದಿದ್ದು, ಕೋಕಿಲ ಅಜ್ಜಿ ಮತ್ತು ತಾತ ಗೊಂಬೆಗಳು ಗರ್ಭಿಣಿ ಇಂದುವನ್ನು ಮಜವಾಗಿ ಮಾತನಾಡಿಸಿವೆ.

ಇನ್ನು ಕೋಕಿಲ ಅಜ್ಜಿಯಂತೂ ಮೊದಲೇ ನಾಟಿ. ಒಂದೇ ಒಂದು ಮಗುಗೆ ಸುಸ್ತಾಗ್ ಹೋಗಿರೋ ಇಂದು ಕಂಡು, 'ನನ್ನ ನೋಡು, ಅಮೇಜಾನ್ ಡೆಲಿವರಿ ಬಂದಂಗೆ 24 ಮಕ್ಕಳು ಬಂದಿದ್ವು ಗೊತ್ತಾ' ಎನ್ನುತ್ತಾಳೆ ಅಜ್ಜಿ. ಅಷ್ಟೇ ಅಲ್ಲ, ನಿಂಗಿನ್ನೂ 23 ಮಕ್ಳಾಗ್ಲಿ ಎಂದು ಆಶೀರ್ವಾದವನ್ನೂ ಮಾಡ್ತಾಳೆ. ಈ ವಿಡಿಯೋ ನೋಡಿದ ಜನರು ನಗುತ್ತಲೇ ಇಂದುಶ್ರೀಗೆ ಅಭಿನಂದನೆ ಹೇಳ್ತಿದಾರೆ. ಪುಟಾಣಿ ಡಿಂಕು ಆರಾಮಾಗಿ ಬರ್ಲಿ ಅಂತ ಹಾರೈಸ್ತಿದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.