ಅಚ್ಚುಮೆಚ್ಚಿನ ಸೀರಿಯಲ್ ಮುಕ್ತಾಯ; ಮಹಿಳೆಯರಲ್ಲಿ ಹೆಚ್ಚಾಯಿತು ದುಃಖ

 | 
Hd

ಸ್ಟಾರ್ ಸುವರ್ಣ ವಾಹಿನಿಯಲ್ಲಿ ನೀನಾದೆನಾ ಧಾರಾವಾಹಿ ಎಲ್ಲರ ಅಚ್ಚುಮೆಚ್ಚು ಅಂತಾನೇ ಹೇಳಬಹುದು. ವಿದೇಶದಲ್ಲಿ ಓದಿದ್ದ ವೇದಾಗೆ ಶಾಸ್ತ್ರ, ಸಂಪ್ರದಾಯಗಳ ಮೇಲೆ ಗೌರವ ಜಾಸ್ತಿ. ಹಾಗಾಗಿಯೇ ವಿಕ್ರಮ್ ಅನ್ಯಾಯದಿಂದ ತಾಳಿ ಕಟ್ಟಿದರು, ಅವನೇ ಗಂಡ ಎಂಬುದಾಗಿ ಒಪ್ಪಿಕೊಂಡು, ಎಷ್ಟೇ ಕಷ್ವವಾದರೂ ವೇದಾ ಸಹಿಸಿಕೊಳ್ಳುತ್ತಿದ್ದಾಳೆ.

ಈಗ ವೇದಾ-ವಿಕ್ರಂ ಇಬ್ಬರು ಮನೆಯಿಂದ ಹೊರಗೆ ಇದ್ದಾರೆ. ಆದರೆ ಇಬ್ಬರ ನಡುವೆ ಪ್ರೀತಿ ಬೆಸೆಯುವುದಕ್ಕೆ ಇದೇ ಕಾರಣವಾಗಿದೆ. ಇಬ್ಬರು ಹೆಚ್ಚಿನ ಆತ್ಮೀಯರಾಗುತ್ತಿದ್ದಾರೆ. ವಿಕ್ರಮ್, ವೇದಾಳನ್ನು ಕಾಳಜಿ ಮಾಡುವುದಕ್ಕೆ ಶುರು ಮಾಡಿದ್ದಾನೆ. ಸಣ್ಣ ಸಣ್ಣ ವಿಚಾರದಲ್ಲಿಯೇ ಖುಷಿ ಕೊಡುತ್ತಿದ್ದಾನೆ. ಪ್ರೇಕ್ಷಕರಿಗೂ ಇದು ಸಿಕ್ಕಾಪಟ್ಟೆ ಇಷ್ಟವಾಗುತ್ತಿದೆ.

ವೇದಾ-ವಿಕ್ರಂ ಮದುವೆಯಾದಾಗಿನಿಂದ ಇಬ್ಬರು ಕಿತ್ತಾಡುವುದೇ ಆಗಿತ್ತು. ಮದುವೆಯಾದಾಗಿನಿಂದ ಇಬ್ಬರ ನಡುವೆ ಪ್ರೀತಿಯೇ ಇಲ್ಲದೆ ಇದ್ದರು, ವೇದಾ ತಾಳಿ ಕಟ್ಟಿದ್ದಾನೆ ಎನ್ನುವ ಒಂದೇ ಕಾರಣಕ್ಕೆ ಎಲ್ಲವನ್ನು ಸಹಿಸಿಕೊಂಡಿದ್ದಾಳೆ. ವಿಕ್ರಂ ರೇಗಿದರೂ ವೇದಾ ಸಹಿಸಿಕೊಳ್ಳುತ್ತಾಳೆ. ಆದರೆ ಈಗ ಇಬ್ಬರು ಮನೆಯಿಂದ ಹೊರಗೆ ಬಂದ ಮೇಲೆ ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ.

ಇಬ್ಬರು ಲವ್ ಬರ್ಡ್ಸ್ ರೀತಿ ನಡೆದುಕೊಳ್ಳುತ್ತಿರುವುದಕ್ಕೆ ನೋಡಿಗರು ಫುಲ್ ಖುಷಿ ಪಡುತ್ತಿದ್ದಾರೆ. ಇದೇ ರೀತಿ ಇದ್ದರೆ ನಾವೂ ಹೆಚ್ಚೆಚ್ಚು ಧಾರಾವಾಹಿ ನೋಡುತ್ತೀವಿ, ಟಿ ಆರ್ ಪಿ ಬರುತ್ತೆ ಎಂದಿದ್ದರು. ಆದ್ರೆ ಇದೀಗ ವೇದಾ ಮನೆಯಿಂದ ದೂರ ಹೋಗಿದ್ದಾಳೆ. ಸಾಯುವ ನಿರ್ಣಯ ಕೈಗೊಂಡಿದ್ದಾಳೆ. ಹಾಗಾಗಿ  ಧಾರವಾಹಿ ಮುಗಿಸಲು ಹೀಗೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ರಮೇಶ್ ಅರವಿಂದ್ ಈ ಧಾರಾವಾಹಿಯ ಪ್ರೊಡ್ಯೂಸರ್ ಆಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.