ಜೀವಕ್ಕೆ ಕಂಟಕ ಇದೆ ಅಂತ ಅರ್ಧದಲ್ಲೇ ಕೈ ಕೊಟ್ಟು ಕಾಂತಾರದಿಂದ ಹಿಂದೆ‌ ಸರಿದ್ರು, ರಾಜ್ ಬಿ ಶೆಟ್ಟಿ ಬಗ್ಗೆ ಮೌನಮುರಿದ ರಿಷಭ್

 | 
Rishab

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕುರಿತು ಪ್ರೇಕ್ಷಕರಲ್ಲಿ ಅಪಾರ ಕುತೂಹಲ ನಿರ್ಮಾಣವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಚಿತ್ರದ ಕಥೆ, ಭವ್ಯವಾದ ಚಿತ್ರಣ ಹಾಗೂ ರಿಷಬ್ ಅವರ ನಿರ್ದೇಶನ ಶೈಲಿ ಪ್ರೇಕ್ಷಕರ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಆದರೆ, ಈ ಬಾರಿ ಒಂದು ಪ್ರಮುಖ ಅಂಶದ ಬಗ್ಗೆ ರಿಷಬ್ ಅವರು ಸ್ಪಷ್ಟನೆ ನೀಡಿದ್ದಾರೆ. ಮೊದಲ ಭಾಗದ ‘ಕಾಂತಾರ’ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಅವರು ಕ್ಲೈಮ್ಯಾಕ್ಸ್ ಬರವಣಿಗೆಯಲ್ಲಿ ಕೈ ಜೋಡಿಸಿದ್ದರು ಎನ್ನಲಾಗುತ್ತಿತ್ತು. ಆದರೆ ‘ಕಾಂತಾರ: ಚಾಪ್ಟರ್ 1’ ಗೆ ರಾಜ್ ಬಿ ಶೆಟ್ಟಿ ಅಥವಾ ರಕ್ಷಿತ್ ಶೆಟ್ಟಿ ಬರವಣಿಗೆಯಲ್ಲಿ ಯಾವುದೇ ರೀತಿಯ ಸಹಾಯ ಮಾಡಿಲ್ಲ ಎಂದು ರಿಷಬ್ ಸ್ಪಷ್ಟಪಡಿಸಿದ್ದಾರೆ. “ಅವರು ತಮ್ಮ ತಮ್ಮ ಸಿನೆಮಾ ಕೆಲಸಗಳಲ್ಲಿ ನಿರತರಾಗಿದ್ದರು. ಈ ಚಿತ್ರದ ಬರವಣಿಗೆಯಲ್ಲಿ ‘ಸು ಫ್ರಮ್ ಸೋ’ ಚಿತ್ರದ ಶನೀಲ್ ಅವರು ಪಾಲ್ಗೊಂಡಿದ್ದಾರೆ” ಎಂದು ರಿಷಬ್ ಹೇಳಿದ್ದಾರೆ.

ಇದರಿಂದಾಗಿ ಪ್ರೇಕ್ಷಕರ ನಡುವೆ ಹರಿದಾಡುತ್ತಿದ್ದ ಗಾಸಿಪ್‌ಗೆ ಅಂತ್ಯ ಬಿದ್ದಂತಾಗಿದೆ. ರಾಜ್ ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರೂ ಕಿರುತೆರೆಯಲ್ಲಿ ಹಾಗೂ ದೊಡ್ಡ ಪರದೆಯಲ್ಲಿ ತಮ್ಮದೇ ಆದ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು ಎಂಬುದನ್ನು ರಿಷಬ್ ಅವರು ಒತ್ತಿ ಹೇಳಿದ್ದಾರೆ. ಇನ್ನು ಸಂಕ್ಷಿಪ್ತ ಮಾಹಿತಿ ನೀಡಬೇಕೆಂದರೆ ಈ ಸಿನಿಮಾದಲ್ಲಿ ರಿಷಭ್ ಶೆಟ್ಟಿ ಒಬ್ಬರೇ ಕಥೆ, ನಿರ್ಮಾಣ, ಆಕ್ಟಿಂಗ್ ಎಂದು ತೊಡಗಿಸಿಕೊಂಡಿದ್ದಾರೆ.

ಇನ್ನು ‘ಸು ಫ್ರಮ್ ಸೋ’ ಚಿತ್ರದ ಅಭೂತಪೂರ್ವ ಯಶಸ್ಸಿನ ಸಂದರ್ಭದಲ್ಲಿ ರಿಷಬ್ ಅವರು ರಾಜ್ ಮತ್ತು ಅವರ ತಂಡಕ್ಕೆ ಶುಭಾಶಯ ತಿಳಿಸಿದ್ದನ್ನು ಕೂಡ ನೆನಪಿಸಿದ್ದಾರೆ. ಈಗ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಯಾಗಿದೆ ಇದೀಗ ರಾಜ್ ಬಿ ಶೆಟ್ಟಿ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.