ಕನ್ನಡದ ನಟ ದರ್ಶನ್ ಮೇಲೆ FIR, ಅಧಿಕಾರಿಗಳ‌ ಮುಂದೆ ಕಣ್ಣೀರಿಟ್ಟ ಮಹಿಳೆ

 | 
ರಪ

ನಟ ತೂಗುದೀಪ ದರ್ಶನ್ ಅವರ ಮನೆಯ ನಾಯಿ, ಮಹಿಳೆಯೊಬ್ಬರಿಗೆ ಕಡಿದು ಗಾಯಗೊಳಿಸಿದೆ. ಹೌದು ಆರ್​ ಆರ್​ ನಗರದಲ್ಲಿ ಆಸ್ಪತ್ರೆ ಕಾರ್ಯಕ್ರಮವೊಂದಕ್ಕೆ ಮಹಿಳೆ ಆಗಮಿಸಿದ್ದರು. ದರ್ಶನ್ ಮನೆಯ ಬಳಿ ಖಾಲಿ ಜಾಗದಲ್ಲಿ ತಮ್ಮ ಕಾರನ್ನು ಮಹಿಳೆ ನಿಲ್ಲಿಸಿದ್ದರು. ಕಾರ್ಯಕ್ರಮ ಮುಗಿಸಿ ಮರಳಿ ಬಂದಾಗ ಕಾರು ನಿಲ್ಲಿಸಿದ್ದ ಜಾಗದಲ್ಲಿ ಮೂರು ನಾಯಿಗಳು ಇದ್ದವಂತೆ. 

ಆಗ ದರ್ಶನ್​ರ ಮನೆ ಸಿಬ್ಬಂದಿಗೆ ನಾಯಿಗಳನ್ನು ಪಕ್ಕಕ್ಕೆ ಕರೆದುಕೊಳ್ಳುವಂತೆ ಮಹಿಳೆ ಕೇಳಿದ್ದಾರೆ. ‌ಆಗ ವಾಗ್ವಾದ ನಡೆಸಿರುವ ದರ್ಶನ್ ಮನೆಯ ಸಿಬ್ಬಂದಿ, ಈ ಜಾಗದಲ್ಲಿ ನೀವು ಕಾರು ಪಾರ್ಕ್ ಮಾಡುವಂತಿಲ್ಲ ಎಂದಿದ್ದಾರೆ. ಮಹಿಳೆ ಹಾಗೂ ದರ್ಶನ್​ರ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಬಳಿಕ ನಾಯಿಗಳು ಮಹಿಳೆಯ ಮೇಲೆ ದಾಳಿ ನಡೆಸಿ ಹೊಟ್ಟೆ ಹಾಗೂ ಕೈಗೆ ಕಡಿದು ಗಾಯಗೊಳಿಸಿವೆ.

ಗಾಯಗೊಂಡ ಮಹಿಳೆ ಆರ್​ಆರ್ ನಗರ ಪೊಲೀಸ್ ಠಾಣೆಗೆ ಹೋಗಿ ಘಟನೆ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ದರ್ಶನ್​ರನ್ನು ಎರಡನೇ ಆರೋಪಿಯನ್ನಾಗಿಸಿ ದೂರನ್ನು ನೀಡಲಾಗಿದೆ.ಪ್ರಾಣಿ ಪ್ರಿಯ ದರ್ಶನ್ ಫಾರಂ ಹೌಸ್​ನಲ್ಲಿ ಹಸು, ಎತ್ತು, ಕುದುರೆ ಸೇರಿ ಇನ್ನೂ ಕೆಲವು ಪ್ರಾಣಿ ಹಾಗೂ ಕೆಲವು ಪಕ್ಷಿಗಳನ್ನು ಸಹ ಸಾಕಿದ್ದಾರೆ. ದರ್ಶನ್ ತಾವು ವಾಸಿಸುವ ಆರ್​ಆರ್ ನಗರ ನಿವಾಸದಲ್ಲಿ ಕೆಲವು ನಾಯಿಗಳನ್ನು ಸಾಕಿದ್ದಾರೆ.

ಅವರು ನನ್ನನ್ನು ಆಸ್ಪತ್ರೆಗೆ ಕೂಡ ಸೇರಿಸಲಿಲ್ಲ. ನಾನು ಘಟನೆಯಿಂದ ಗಾಬರಿ ಆಗಿ ಬಿಟ್ಟೆ. ನಮ್ಮ ಮಗನ ಜೊತೆ ಅಸ್ಪತ್ರೆಗೆ ಹೋದೆ. ಪೊಲೀಸರು ದೂರನ್ನು ಸ್ವೀಕರಿಸಿದ್ರು. ಆದರೆ ನಟ ದರ್ಶನ್ ಇನ್ನೂ ಸಂಪರ್ಕಿಸಿಲ್ಲ ಅಂತ ಅಮಿತಾ ಜಿಂದಾಲ್ ಬೇಸರ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.