ಉಡುಪಿ ಶೆಟ್ಟಿ ರೆಸ್ಟೋರೆಂಟ್ ಮಾಲೀಕನ ಮನೆಗೆ ಅ ಗ್ನಿ ಅವಘಡ; ಲೈ ವ್ ವಿಡಿಯೋ

 | 
Ue

ಇನ್ಸ್ಟಾಗ್ರಾಮ್‌ನಲ್ಲಿ 90 ಸಾವಿರ ಫಾಲೋವರ್ಸ್‌ ಹೊಂದಿ ಖ್ಯಾತಿ ಗಳಿಸಿದ್ದ  ಉಡುಪಿಯ ಕಂಟೆಂಟ್ ಕ್ರಿಯೇಟರ್  ಅಶ್ವಿನಿ ಶೆಟ್ಟಿ ನಿಧನರಾಗಿದ್ದಾರೆ. ಉಡುಪಿಯ ಅಂಬಲಪಾಡಿ ಗಾಂಧಿನಗರದ ಮನೆಯಲ್ಲಿ ಕಳೆದ ಸೋಮವಾರ ಸಂಭವಿಸಿದ ಭೀಕರ ಅಗ್ನಿ ದುರಂತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 43 ವರ್ಷದ ಅಶ್ವಿನಿ ಶೆಟ್ಟಿ  ಮಧ್ಯಾಹ್ನ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಬೆಳಗಿನ ಜಾವ ಮನೆಯಲ್ಲಿ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದ ಭೀಕರ ಅಗ್ನಿ ದುರಂತ ಉಂಟಾಗಿತ್ತು. ಇದರಿಂದ ಮನೆಯೊಳಗೆ ಬೆಂಕಿ ಜೊತೆ ದಟ್ಟ ಹೊಗೆ ಆವರಿಸಿತ್ತು. ಇದರ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡ ಉದ್ಯಮಿ ರಮಾನಂದ ಶೆಟ್ಟಿ ಹಾಗೂ ಅಶ್ವಿನಿ ಶೆಟ್ಟಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.

ಅಗ್ನಿ ದುರಂತದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರಮಾನಂದ ಶೆಟ್ಟಿ ಸೋಮವಾರ ಬೆಳಗ್ಗೆಯೇ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇತ್ತ ಗಂಭೀರ ಸ್ಥಿತಿಯಲ್ಲಿದ್ದ ಅವರ ಪತ್ನಿ ಅಶ್ವಿನಿ ಶೆಟ್ಟಿ ಇಂದು ಮಧ್ಯಾಹ್ನ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ವೈದ್ಯಾಧಿಕಾರಿಗಳು ಘೋಷಿಸಿದ್ದಾರೆ. ಇವರಿಬ್ಬರ ಅಂತ್ಯಕ್ರಿಯೆ ಆದಿಉಡುಪಿಯ ಪಂದುಬೆಟ್ಟುವಿನಲ್ಲಿರುವ ರಮಾನಂದ ಶೆಟ್ಟಿ ಮೂಲ ಮನೆಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ಅಗ್ನಿ ದುರಂತದಲ್ಲಿ ಇವರ ಇಬ್ಬರು ಮಕ್ಕಳಾದ ಅಂಶುಲಾ ಶೆಟ್ಟಿ ಹಾಗೂ ಅಭಿಕ್ ಶೆಟ್ಟಿ ರಕ್ಷಿಸಲ್ಪಟ್ಟಿದ್ದರು. ದಟ್ಟ ಹೊಗೆಯಿಂದ ಪಾರಾಗಲು ಇವರು ಕೂಡಲೇ ಶೌಚಾಲಯಕ್ಕೆ ಹೋಗಿ ಬಾಗಿಲು ಹಾಕಿ ಜೀವ ಉಳಿಸಿಕೊಂಡಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಶ್ವಿನಿ ಶೆಟ್ಟಿ ಸೋಷಿಯಲ್‌ ಮೀಡಿಯಾ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಅವರಿಗೆ 90 ಸಾವಿರ ಫಾಲೋವರ್‌ಗಳಿದ್ದಾರೆ. 

ಅಶ್ವಿನಿ ಶೆಟ್ಟಿ ತಮ್ಮ ಖಾತೆಯ ಮೂಲಕ ಭಾರತೀಯ ಸಂಸ್ಕೃತಿ, ಸಂಸ್ಕಾರಗಳನ್ನು ತಿಳಿಸುತ್ತಿರುವುದಲ್ಲದೆ ಖಾದ್ಯವೈವಿಧ್ಯಗಳನ್ನೂ ಅನಾವರಣಗೊಳಿಸುತ್ತಿದ್ದರು. Ballal's Caboose ಯೂಟ್ಯೂಬ್ ತಾಣದ ಮೂಲಕ ಪ್ರಸಿದ್ಧರಾಗಿದ್ದರು. ಸಾಮಾಜಿಕ, ಆಧ್ಯಾತ್ಮ, ಬದುಕು, ಜೀವನಶೈಲಿಯ ಕುರಿತು ಅವರ ವಿಡಿಯೋ ಕಂಟೆಂಟ್‌ಗಳು ಜನಪ್ರಿಯವಾಗಿದ್ದವು. ಅವರ ನಿಧನದ ಬಳಿಕ ಅಭಿಮಾನಿಗಳು ಅಶ್ವಿನಿ ಶೆಟ್ಟಿ ಅವರ ವಿಡಿಯೋಗಳನ್ನು ಶೇರ್ ಮಾಡಿ ಕಂಬನಿ ಮಿಡಿಯುತ್ತಿದ್ದಾರೆ.

ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಕ್ರಿಯಾಶೀಲರಾಗಿದ್ದ ಅಶ್ವಿನಿ ಶೆಟ್ಟಿ, ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಯಾಗಿದ್ದರು. ಬಂಟರ ಸಂಘದಲ್ಲಿ ಅವರು ಸಕ್ರಿಯವಾಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.