'ಮೊದಲು ಆತನನ್ನು ಒದ್ದು ಜೈಲಿಗೆ ಹಾಕಿ' ನಮ್ಗೆ ಯಾವುದೇ ಪರಿಹಾರ ಬೇಡ

 | 
ಹಹ

ನಾವು ಅಪಘಾತ ಮಾಡಿದ್ರೆ ಬಿಡ್ತಾರೆ. ನಾವು ತಪ್ಪು ಮಾಡಿದ್ರೂ ನಮ್ಮನ್ನು ಜೈಲಿಗೆ ಹಾಕ್ತಾರೆ. ಹಾಗೇ ಆ ವ್ಯಕ್ತಿಯನ್ನೂ ಜೈಲಿಗೆ ಹಾಕಿ. ಸೆಲೆಬ್ರಿಟಿಗಳಿಗೆ ಬೇರೆ ರೂಲ್ಸ್​ ಇದೆಯಾ? ಅಪಘಾತದಲ್ಲಿ ಒಬ್ಬರನ್ನು ಸಾಯಿಸಿದ ತಪ್ಪಿಗೆ ಸಾಮಾನ್ಯರಿಗೆ ಯಾವ ಶಿಕ್ಷೆ ಆಗುತ್ತದೆ ಅದೇ ರೀತಿ ಈ ನಟನಿಗೆ ಜೈಲು ಶಿಕ್ಷೆ ಆಗಬೇಕು ಎಂದು ನುಡಿದಿದ್ದಾರೆ. 

ನಟ ನಾಗಭೂಷಣ್​ ರ ಕಾರು ಅಪಘಾತದಿಂದ ಮಹಿಳೆ ಪ್ರೇಮಾ ಎಂಬುವರು ಮೃತಪಟ್ಟಿದ್ದಾರೆ. ಪ್ರೇಮಾ ಪತಿ ಕೃಷ್ಣ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕೃಷ್ಣ ಅವರ ಸ್ಥಿತಿ ಕೂಡ ಗಂಭೀರವಾಗಿದೆ ಎನ್ನಲಾಗ್ತಿದೆ. ತಾಯಿ ಪ್ರೇಮಾ ಅವರನ್ನು ಕಳೆದುಕೊಂಡು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಮಕ್ಕಳ ಮದುವೆ ಕನಸು ಕಂಡಿದ್ದ ತಾಯಿ ಪ್ರೇಮಾ ಕನಸನ್ನು ನಟ ನಾಗಭೂಷಣ್​ ನುಚ್ಚು ನೂರು ಮಾಡಿದ್ದಾರೆ. 

ಇನ್ನು ಕೆಲವೇ ತಿಂಗಳಲ್ಲಿ ಪ್ರೇಮಾ ಮಗಳು ಯಶಸ್ವಿನಿ ಮದುವೆ ನಡೆಯಬೇಕಿತ್ತು ಎಂದು ಅಣ್ಣ ಪಾರ್ಥ ಹೇಳಿದ್ದಾರೆ. ಮಗಳ ಮದುವೆ ನೋಡುವ ಆಸೆ ನನ್ನ ತಾಯಿಗಿತ್ತು ಎಂದು ಹೇಳುತ್ತಾ ಕಣ್ಣೀರು ಹಾಕಿದ್ರು. 
ತಾಯಿ ಸಾವನ್ನಪ್ಪಿರುವ ಸುದ್ದಿ ಕೇಳಿ ಆಘಾತಕೊಳ್ಳಗಾಗಿರುವ ಮಕ್ಕಳು ಆಸ್ಪತ್ರೆ ಎದುರು ಕಣ್ಣೀರು ಹಾಕಿದ್ದಾರೆ. 

ಮಾಧ್ಯಮಗಳ ಜೊತೆ ಮಾತಾಡಿದ ಕೃಷ್ಣ ಹಾಗೂ ಪ್ರೇಮಾ ಅವರ ಪುತ್ರ ಪಾರ್ಥ, ನಾವು ಅಪಘಾತವಾದ ಸ್ಥಳದಲ್ಲಿ ಇರಲಿಲ್ಲ ಆದ್ರೆ, ಅಪಘಾತ ಮಾಡಿದ್ದು ಒಬ್ಬ ನಟ ಅಂತ ಹೇಳ್ತಾ ಇದ್ದಾರೆ. ಅವರು ಯಾರಾಗಿದ್ದರು ನಮಗೆ ಬೇಕಿಲ್ಲ. ನಮಗೆ ನ್ಯಾಯ ಬೇಕು ಎಂದು ಪಾರ್ಥ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ