ಒಂದೇ ಕುಟುಂಬದ 5ಮಂದಿ ಕೊಚ್ಚಿಹೋದ ದೃ ಶ್ಯ;

 | 
Ye

ಜಲಪಾತ ವೀಕ್ಷಣೆಗೆ ತೆರಳಿದ್ದ ಒಂದೇ ಕುಟುಂಬದ ಐದು ಮಂದಿ ಜಲಸಮಾಧಿಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಮಹಾರಾಷ್ಟ್ರದ ಲೋನಾವಾಲಾದ ಭೂಶಿ ಡ್ಯಾಂ ಬಳಿ ಈ ದುರ್ಘಟನೆ ಸಂಭವಿಸಿದ್ದು, ನೀರಿನ ರಭಸಕ್ಕೆ ಎಲ್ಲರೂ ಕೊಚ್ಚಿ ಹೋಗಿದ್ದಾರೆ.

ನಿನ್ನೆ ಭಾನುವಾರವಾದ್ದರಿಂದ ಕುಟುಂಬದ ಜೊತೆ ನೀರಿನಲ್ಲಿ ಕಳೆಯಲು ಬಂದಿದ್ದಾಗ ಈ ದುರ್ಘಟನೆ ನಡೆದಿದೆ.. ಲೋನವಾಲದ ಭುಶಿ ಡ್ಯಾಮ್ ಪಕ್ಕದ ಜಲಪಾತದ ಬಳಿ 36 ವರ್ಷದ ಮಹಿಳೆ ತನ್ನ ನಾಲ್ವರು ಮಕ್ಕಳೊಂದಿಗೆ ನೀರಿನಲ್ಲಿ ಆಟವಾಡುತ್ತಿದ್ದರು. ಇದೇ ವೇಳೆ ಮಳೆ ನೀರು ಜಾಸ್ತಿಯಾಗಿ, ಎಲ್ಲರೂ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.ಎಲ್ಲರೂ ನೋಡುತ್ತಿದ್ದರೂ ಕೂಡಾ, ಅವರನ್ನು ರಕ್ಷಣೆ ಮಾಡೋದಕ್ಕೆ ಆಗಿಲ್ಲ. ಶರವೇಗದಲ್ಲಿ ಐದು ಮಂದಿಯೂ ಕೊಚ್ಚಿಹೋಗಿದ್ದಾರೆ. ಕೊಂಚ ದೂರದಲ್ಲಿ ಮೂವರ ಮೃತದೇಹಗಳು ಸಿಕ್ಕಿವೆ.

ಪುಣೆಯ ಲೋನಾವಾಲಾ ಪ್ರದೇಶದ ಭೂಶಿ ಅಣೆಕಟ್ಟೆಯ ಹಿನ್ನೀರಿನ ಸಮೀಪವಿರುವ ಜಲಪಾತದಲ್ಲಿ ಭಾನುವಾರ ಮಹಿಳೆ ಸೇರಿದಂತೆ ಐವರು ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಐವರು ವಿಹಾರಕ್ಕೆಂದು ಬಂದಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಬಂದವರೆಲ್ಲ ಪುಣೆಯ ಸಯ್ಯದ್ ನಗರಕ್ಕೆ ಸೇರಿದ ಒಂದೇ ಕುಟುಂಬದ 5 ಜನರು ಮೃತಪಟ್ಟಿದ್ದಾರೆ. ಇವರೆಲ್ಲ ಪಿಕ್ನಿಕ್‌ಗೆ ಎಂದು ಭೂಶಿ ಅಣೆಕಟ್ಟಿನ ಹಿನ್ನೀರಿನ ಸಮೀಪದ ಜಲಪಾತಕ್ಕೆ ಬಂದಿದ್ದರು. ಈ ವೇಳೆ ಏಕಾಏಕಿ ಜಲಪಾತದಲ್ಲಿ ನೀರಿನ ರಭಸ ಜಾಸ್ತಿಯಾಗಿದೆ. ಈ ವೇಳೆ ಅವರಿಗೆ ದಡಕ್ಕೆ ಬರಲಾಗದೇ ನೀರಿನ ಮಧ್ಯವೇ ನಿಂತಿದ್ದರೂ ಆದರೆ ನೀರು ಜಾಸ್ತಿಯಾದ ಬೆನ್ನಲ್ಲೇ ಎಲ್ಲರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. 

ಸದ್ಯ ನೀರಲ್ಲಿ ಮುಳುಗಿ ಸಾವನ್ನಪ್ಪಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು 2 ಮೃತದೇಹಗಳನ್ನು ಈಗಾಗಲೇ ಹೊರ ತೆಗೆಯಲಾಗಿದೆ. ಇನ್ನುಳಿದ ಶವಗಳನ್ನು ಪತ್ತೆ ಹಚ್ಚಲು ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.