ಬಿಗ್ಬಾಸ್ ಇತಿಹಾಸದಲ್ಲೇ ಮೊಟ್ಟಮೊದಲು, ಬಿಗ್ಬಾಸ್ ಗೆ ಕೇ ಸ್ ಹಾಕಿದ ಲಾಯರ್ ಜಗದೀಶ್

 | 
Hi
 ಕಿರುತೆರೆಯ ಜನಪ್ರಿಯ ಶೋ ಬಿಗ್ಬಾಸ್ ಆರಂಭವಾಗಿ ಕೇವಲ ಮೂರನೇ ದಿನಕ್ಕೆ ಲಾಯರ್ ಜಗದೀಶ್ ಬಿಗ್‌ಬಾಸ್‌ ಮನೆ ತೊರೆಯುವುದಾಗಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.ಬಿಗ್‌ಬಾಸ್‌ ಮನೆಯಲ್ಲಿ ಸ್ವರ್ಗ ನಿವಾಸಿಯಾಗಿರುವ ಜಗದೀಶ್‌, ನರಕ ನಿವಾಸಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಮಾನವೀಯತೆ ಇಲ್ಲದ ಜಾಗದಲ್ಲಿ ಇರಲು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು ಬಂದ ಮೂರೇ ದಿನದಲ್ಲಿ ಐ ವಿಲ್ ಎಕ್ಸ್‌ಪೋಸ್ ‘ಬಿಗ್ ಬಾಸ್‌’.. ಐ ವಿಲ್ ಡೆಸ್ಟ್ರಾಯ್ ದಿಸ್ ಶೋ..ಈ ಪ್ರೋಗ್ರಾಂನ ಹಾಳು ಮಾಡಲಿಲ್ಲ ಅಂದ್ರೆ ನನ್ನ ಹೆಸರನ್ನ ಬೇರೆ ಇಡು’’ ಅಂತೆಲ್ಲಾ ‘ಬಿಗ್ ಬಾಸ್’ಗೆ ‘ಬಿಗ್ ಬಾಸ್’ ಮನೆಯಲ್ಲಿ ಇದ್ದುಕೊಂಡೇ ಲಾಯರ್ ಜಗದೀಶ್‌ ಧಮ್ಕಿ ಹಾಕಿದ್ದರು. ಆಟವನ್ನ ಕ್ವಿಟ್ ಮಾಡ್ತೀನಿ ಅಂತಲೂ ಹೇಳಿ ಎಲ್ಲರಿಗು ಬೆರಗು ಮೂಡಿಸಿದ್ದರು.
ಬಿಗ್ ಬಾಸ್’ ಮನೆಯಲ್ಲಿ ಕೆಲ ನಿಯಮಗಳಂತೂ ಇವೆ. ನಿಯಮಗಳನ್ನ ಎಲ್ಲಾ ಸ್ಪರ್ಧಿಗಳೂ ಪಾಲಿಸಲೇಬೇಕು. ಇಲ್ಲದಿದ್ದರೆ ಶಿಕ್ಷೆ ಖಂಡಿತ. ಆದರೆ, ಆಟಗಳನ್ನ ಆಡೋದು ಹೇಗೆ? ನೀಡಲಾದ ಸವಾಲುಗಳನ್ನ ಎದುರಿಸುವುದು ಹೇಗೆ ಎಂಬುದು ಸ್ಪರ್ಧಿಗಳ ವ್ಯಕ್ತಿತ್ವಕ್ಕೆ ಬಿಟ್ಟ ವಿಚಾರ.ಊಟದ ವಿಚಾರದಲ್ಲಿ, ಕೆಲಸದ ವಿಚಾರದಲ್ಲಿ ಮಾನವೀಯತೆ ಇಲ್ಲ ಎಂದು ಪದೇ ಪದೇ ಪ್ರಶ್ನೆ ಮಾಡಿದ್ದಾರೆ ಲಾಯರ್ ಜಗದೀಶ್.
ಈಗಾಗಲೇ ಬೇಕಾಬಿಟ್ಟಿ ನಾಲಿಗೆ ಹರಿಬಿಟ್ಟಿರುವ ಲಾಯರ್ ಜಗದೀಶ್, ಮನೆ ಒಳಗೆ ಬರೋ ಅವಕಾಶ ಕೊಟ್ಟ ಸಂಸ್ಥೆಗೆ ಚಾಲೆಂಜ್ ಮಾಡಿದ್ದಾರೆ. ಇದರ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಕ್ಯಾಮೆರಾ ಮುಂದೆ ನಿಂತು ಸೀರಿಯಸ್ ಆಗಿ ಚಾಲೆಂಜ್ ಹಾಕಿದ್ದರೂ ಸಜ ಅದನ್ನು ನೋಡಿದ ಮನೆ ಮಂದಿ ಮಾತ್ರ ನಕ್ಕಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.